ETV Bharat / state

ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರ: ಬಿಜೆಪಿ, ಕಾಂಗ್ರೆಸ್ ನಡುವೆ ಆರೋಪ - ಪ್ರತ್ಯಾರೋಪ - Lok Sabha Election 2024 - LOK SABHA ELECTION 2024

ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪ ಮಾಡುತ್ತಿವೆ.

Dakshina Kannada  Mangaluru Smart City  BJP Vs Congress
ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರ: ಬಿಜೆಪಿ, ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪ
author img

By ETV Bharat Karnataka Team

Published : Apr 20, 2024, 1:50 PM IST

ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರ: ಬಿಜೆಪಿ, ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪ

ಮಂಗಳೂರು: ಮಂಗಳೂರು ನಗರದಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ವಿಚಾರ ಲೋಕಸಭಾ ಚುನಾವಣೆಯಲ್ಲಿ ಪ್ರತಿಧ್ವನಿಸುತ್ತಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಂಗಳೂರು ನಗರ ಅಭಿವೃದ್ದಿಯಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಈ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆದಿದ್ದರೂ ಅದು ಯಾವ ರೀತಿ ಅನುಷ್ಠಾನಗೊಳ್ಳಬೇಕಿತ್ತು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಕಾಮಗಾರಿಯ ನಡೆದಿದೆ. ಮೀನುಗಾರಿಕೆಯ ಅಭಿವೃದ್ದಿ ಯೋಜನೆಗಳನ್ನು ಮುಂದಿಟ್ಟುಕೊಂಡು ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯಬೇಕಿದ್ದರೂ ಅದು ಕೇವಲ, ರಸ್ತೆ, ತೋಡು ಅಭಿವೃದ್ಧಿಗೆ ಸೀಮಿತವಾಗಿದೆ ಎಂಬ ಆರೋಪವಿದೆ.

ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಮಾಹಿತಿ:

  • ಬಂದರಿನ ಅಭಿವೃದ್ಧಿಗೆ ಮಂಜೂರು ಮಾಡಲಾದ 150/- ಕೋಟಿಯನ್ನು ನದಿ ಮುಂಭಾಗವನ್ನು ಅಭಿವೃದ್ಧಿಪಡಿಸಲು ವರ್ಗಾಯಿಸಲಾಯಿತು.
  • ಸ್ಮಾರ್ಟ್ ರಸ್ತೆ ಮತ್ತು ಸಂಪರ್ಕ ರಸ್ತೆ ಅಭಿವೃದ್ಧಿಗೆ 250/- ಕೋಟಿ ಮಂಜೂರು. (8 ಪ್ಯಾಕೇಜುಗಳನ್ನು ಮಾಡಿದೆ)
  • ಮಹಾಕಾಳಿಪಡ್ಪು ರಸ್ತೆಗೆ 49/- ಕೋಟಿ ಮಂಜೂರು.
  • ನೀರು ಪೂರೈಕೆಗೆ 150/- ಕೋಟಿ
  • ತುಂಬೆಯಲ್ಲಿ ಜಾಕ್ ವೆಲ್ ಅಭಿವೃದ್ಧಿಗೆ 10/- ಕೋಟಿ ರೂ.
  • ಅಂತಾರಾಷ್ಟ್ರೀಯ ಈಜುಕೊಳ ಅಭಿವೃದ್ಧಿಗೆ 24.5 ಕೋಟಿ ರೂ.
  • ಶಟಲ್ ಕಾಕ್ ಮತ್ತು ಕಬ್ಬಡಿ ಸ್ಟೇಡಿಯಂ ಅಭಿವೃದ್ಧಿಗೆ 35/- ಕೋಟಿ ರೂ.
  • 13 ಒಟಿ ಮತ್ತು 37 ಐಸಿಯು ಒಳಗೊಂಡಿರುವ ವೆನ್‌ಲಾಕ್‌ನಲ್ಲಿ 250 ಹಾಸಿಗೆಗಳ ಆಸ್ಪತ್ರೆಯ ಅಭಿವೃದ್ಧಿಗೆ 75/- ಕೋಟಿ ರೂ.
  • ಕಮಾಂಡ್ ಕಂಟ್ರೋಲ್ ರೂಂಗೆ 55/- ಕೋಟಿಗಳು (2 ಹಂತಗಳು)
  • ಕದ್ರಿ ಪಾರ್ಕ್ ರಸ್ತೆ ಅಭಿವೃದ್ಧಿಗೆ 18/- ಕೋಟಿ ರೂ
  • ಕೆರೆ ಅಭಿವೃದ್ಧಿ: ಕಾವೂರು ಕೆರೆ- 8.5 ಕೋಟಿ, ಗುಜ್ಜರಕೆರೆ ಕೆರೆ 5 ಕೋಟಿ ರೂ.
  • ಕೌಶಲ್ಯ ಅಭಿವೃದ್ಧಿ 5 ಕೋಟಿ ರೂ.
  • ಸ್ಮಾರ್ಟ್ ಶಾಲೆಗಳು: 13 ಸ್ಮಾರ್ಟ್ ಶಾಲೆಗಳಿಗೆ 5 ಕೋಟಿ ರೂ.
  • ಹಂಪನಕಟ್ಟಾ ರೆವಿನ್ಯೂ ಜನರೇಷನ್‌ನಲ್ಲಿ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್- ವರ್ಷಕ್ಕೆ 3.3 ಕೋಟಿ ರೂ.
  • ಸೆಂಟ್ರಲ್ ಮಾರ್ಕೆಟ್ 3 ಕೋಟಿ ರೂ.

ನಳಿನ್ ಕುಮಾರ್ ಕಟೀಲ್ ಹೇಳಿಕೆ: ಸ್ಮಾರ್ಟ್ ಸಿಟಿ ಅಭಿವೃದ್ಧಿ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ''ಸುಮಾರು 2,000 ಕೋಟಿ ಸ್ಮಾರ್ಟ್ ಸಿಟಿಗೆ ಬಿಡುಗಡೆ ಆಗಿದೆ. ಇದರಲ್ಲಿ 1 ಸಾವಿರ ಕೊಟಿ ಕಾಮಗಾರಿ ನಡೆದಿದೆ. ರಸ್ತೆಗಳ ಕಾಂಕ್ರೀಟ್ ಮಾಡಲಾಗಿದೆ. ಕದ್ರಿ ಪಾರ್ಕ್​ಗಳ ಅಭಿವೃದ್ದಿ, ಪುರಭವನ ಬಳಿಯ ಅಂಡರ್ ಪಾಸ್, ಎಲ್ಲಾ ಸರ್ಕಲ್​ಗಳ ಅಲಂಕಾರ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಅಂತಾರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಈಗಾಗಲೇ ಮುಗಿದೆ. ಮಂಗಳಾದೇವಿ, ಕಾರ್ ಸ್ಟ್ರೀಟ್ ಅಭಿವೃದ್ದಿಯನ್ನು ಮಾಡಲಾಗಿದೆ. ವಾಟರ್ ಫ್ರಂಟ್ ಕಾಮಗಾರಿ ನಡೆದಿದೆ. ಹೀಗೆ ವಿವಿಧ ಯೋಜನೆಗಳ ಮೂಲಕ ಮಂಗಳೂರು ಅಭಿವೃದ್ಧಿಯಾಗಿದೆ. ಮಂಗಳೂರು ಸುಂದರೀಕರಣ ಆಗಿದೆ. ಇದು 20 ಸಾವಿರ ಕೋಟಿಯ ಯೋಜನೆ. ಇದರಲ್ಲಿ ಆದಾಯ ಉತ್ಪಾದಿಸುವ ಯೋಜನೆಗಳು ಮಾಡಲಾಗುತ್ತಿದೆ'' ಎಂದು ತಿಳಿಸಿದರು.

ಎ.ಸಿ. ವಿನಯರಾಜ್ ಪ್ರತಿಕ್ರಿಯೆ: ''ಕಾಂಗ್ರೆಸ್ ಮುಖಂಡ ಎ.ಸಿ. ವಿನಯರಾಜ್ ಮಾತನಾಡಿ, ''ಸ್ಮಾರ್ಟ್ ಸಿಟಿ ಕಾಮಗಾರಿ ಯೋಜನೆಗಳನ್ನು ಯಾವ ಉದ್ದೇಶದಲ್ಲಿ ಮಾಡಬೇಕಿತ್ತೊ ಆ ರೀತಿಯಲ್ಲಿ ಅದನ್ನು ಅನುಷ್ಠಾನ ಮಾಡಲಾಗಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿ ಕೇಂದ್ರದ ಯೋಜನೆ ಎಂಬುದು ತಪ್ಪು ಕಲ್ಪನೆ. ಈ ಯೋಜನೆ ಸ್ಮಾರ್ಟ್ ಸಿಟಿ ಹೆಸರು ಕೊಟ್ಟಿದ್ದು ಕೇಂದ್ರ ಸರ್ಕಾರ. ಇದರಲ್ಲಿ ನಾಲ್ಕನೇ ಒಂದರಷ್ಟು ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತದೆ. ಅಷ್ಟೇ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತದೆ. ಯೋಜನೆಯ ಅರ್ಧ ಹಣವನ್ನು ಆಯಾ ಸ್ಥಳೀಯ ಸಂಸ್ಥೆಗಳು ಪಿಪಿಪಿ ಮಾಡೆಲ್​ನಲ್ಲಿ ಪಾಲುದಾರರನ್ನು ಹುಡುಕಬೇಕಾಗುತ್ತದೆ. ಮಂಗಳೂರಿಗೆ ಸ್ಮಾರ್ಟ್ ಸಿಟಿ ಬಂದದ್ದು, ಮಂಗಳೂರಿನ ಮೀನುಗಾರಿಕೆಗೆ ಹೆಚ್ಚಿನ ಒತ್ತು ಕೊಡಬೇಕೆಂಬ ದೃಷ್ಟಿಯಿಂದ ಈ ಯೋಜನೆಯಿಂದ ಕೈಬಿಡಲಾಗಿದೆ. ಇದಕ್ಕೆ ಬಿಜೆಪಿ ಆಡಳಿತವೇ ಕಾರಣ'' ಎಂದು ಕಿಡಿಕಾರಿದರು.

''ಮೀನುಗಾರಿಕಾ ಅಭಿವೃದ್ಧಿಗೆ ಮೀಸಲಿರಿಸಬೇಕಾದ 150 ಕೊಟಿಯನ್ನು ನದಿ ತೀರದಲ್ಲಿ ರಿವರ್ ಫ್ರಂಟ್ ಅಭಿವೃದ್ದಿಗೆ ಇಟ್ಟಿದ್ದಾರೆ. ರೆವೆನ್ಯೂ ಜನರೇಟಷನ್ ಆಗಬೇಕು ಎಂದು ಯೋಜನೆಗಳು ಬಂದಿದ್ದರೂ, ಯಾವುದೇ ಯೋಜನೆಗಳು ಸಂಪನ್ಮೂಲ ತರುವ ಯೋಜನೆಗಳು ಬಂದಿಲ್ಲ. ಶಾಸಕ ವೇದವ್ಯಾಸ ಕಾಮತ್ ಅವರ ವ್ಯಾಪ್ತಿಗೆ ಬರುವ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ಹೆಸರು ಗಳಿಸಲು ಹಣಕಾಸಿನ ಮೂಲ ಬರುವ ಯೋಜನೆ ಮಾಡದೆ ರಸ್ತೆ, ತೋಡಿಗೆ ಬೇಕಾಬಿಟ್ಟಿಯಾಗಿ 250 ಕೋಟಿ ರೂ. ನೀಡಿದ್ದಾರೆ. ಮಂಗಳೂರಿನಲ್ಲಿ ಯಾವುದೇ ಸ್ಮಾರ್ಟ್ ರೋಡ್ ಇಲ್ಲ. ಕೆರೆ ಅಭಿವೃದ್ದಿಗೆ ಹಣ ನೀಡಿದ್ದಾರೆ. ಆದರೆ, ಅದು ಡ್ರೈನೇಜ್ ನೀರು ಹೋಗುವಂತೆ ಆಗಿದೆ. ಇದರಿಂದ ಏನು ಲಾಭ ಆಗಿದೆ. ಸುಮಾರು 55 ಕೊಟಿ ರೂ. ಖರ್ಚು ಮಾಡಿ ಕಮಾಂಡ್ ಕಂಟ್ರೋಲ್ ರೂಮ್ ಮಾಡಿದ್ದಾರೆ. 55 ಕೋಟಿ ಹಣವನ್ನು ಅವೈಜ್ಞಾನಿಕವಾಗಿ ಖರ್ಚು ಮಾಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಗೆ, ಜನರಿಗೆ ಲಾಭ ಏನು? ಕಣ್ಣುಮುಚ್ಚಿ ಕೂತು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಅವರು ಆರೋಪಿದರು.

ಮಂಗಳೂರಿನಲ್ಲಿ ನಡೆದ ಸ್ಮಾರ್ಟ್ ಸಿಟಿ ಕಾಮಗಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಎಫ್​ಐಆರ್ ದಾಖಲು - FIR filed against Vijayendra

ETV Bharat Logo

Copyright © 2024 Ushodaya Enterprises Pvt. Ltd., All Rights Reserved.