ETV Bharat / state

ಮಂಗಳೂರು ವಿಮಾನ ನಿಲ್ದಾಣದ ಭದ್ರತೆಯಲ್ಲಿದ್ದ ಜೂಲಿ ನಿವೃತ್ತಿ, ಹೂವಿನ ಟ್ರಾಲಿಯಲ್ಲಿ ಬೀಳ್ಕೊಡುಗೆ - Mangaluru Airport Security Dog

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಯಲ್ಲಿದ್ದ ಜೂಲಿ ನಿವೃತ್ತಿಯಾಗಿದ್ದಾಳೆ. ಭದ್ರತಾ ಸಿಬ್ಬಂದಿಯು ಜೂಲಿ ವಿಶೇಷವಾಗಿ ಬೀಳ್ಕೊಡುಗೆ ಕೊಟ್ಟು ಗಮನ ಸೆಳೆದಿದ್ದಾರೆ.

ಜೂಲಿಗೆ ಹೂವಿನ ಟ್ರಾಲಿಯಲ್ಲಿ ಬೀಳ್ಕೊಡುಗೆ
ಜೂಲಿಗೆ ಹೂವಿನ ಟ್ರಾಲಿಯಲ್ಲಿ ಬೀಳ್ಕೊಡುಗೆ (ETV Bharat)
author img

By ETV Bharat Karnataka Team

Published : Oct 1, 2024, 8:05 AM IST

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಯಲ್ಲಿ ಕಳೆದ 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನ ತಂಡದ ಸದಸ್ಯೆ ಜೂಲಿ ನಿವೃತ್ತಿಯಾಗಿದ್ದಾಳೆ. ಅಂತೆಯೇ ಜೂಲಿಗೆ ಮಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಸಿಐಎಸ್ಎಫ್​​ನ ಏರ್ಪೋರ್ಟ್ ಸೆಕ್ಯುರಿಟಿ ಗ್ರೂಪ್​ನ ಕೆ9 ಸ್ಕ್ವಾಡ್​ ಸದಸ್ಯೆ ಲ್ಯಾಬ್ರಡಾರ್ ಶ್ವಾನ ಇಲ್ಲಿನ ವಿಮಾನ ನಿಲ್ದಾಣದ ಭದ್ರತಾ ತಂಡದಲ್ಲಿದ್ದಳು. ಇದೀಗ ನಿವೃತ್ತಿಯಾಗಿದ್ದಾಳೆ. ಇದೇ ವೇಳೆ, ಜೂಲಿ ಸ್ಥಾನ ತುಂಬಲಿರುವ 11 ತಿಂಗಳ ಲ್ಯಾಬ್ರಡಾರ್ ನಾಯಿ ಮರಿ ರಿಯೊವನ್ನು ಕೆ9 ತಂಡಕ್ಕೆ ಸ್ವಾಗತಿಸಲಾಯಿತು.

ಮಂಗಳೂರು ವಿಮಾನ ನಿಲ್ದಾಣದ ಭದ್ರತೆಗೆ ರಿಯೊ ಆಗಮನ
ಮಂಗಳೂರು ವಿಮಾನ ನಿಲ್ದಾಣದ ಭದ್ರತೆಗೆ ರಿಯೊ ಆಗಮನ (ETV Bharat)

ಜೂಲಿಗೆ ಬೀಳ್ಕೊಡುಗೆ, ರಿಯೊಗೆ ಸ್ವಾಗತ: ಹಿರಿಯ ಕಮಾಂಡೆಂಟ್ ಮತ್ತು ಮುಖ್ಯ ಏರೋಡ್ರೋಮ್ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ ಮತ್ತು ಸಿಐಎಸ್ಎಫ್​​ನ ಇತರ ಅಧಿಕಾರಿಗಳು ಜೂಲಿಯ ಅಚಲ ಸಮರ್ಪಣೆ ಮತ್ತು ನಿಷ್ಠೆ ಕೊಂಡಾಡಿದರು. ರಿಯೋ ನಾಯಿಮರಿಯನ್ನು ಔಪಚಾರಿಕವಾಗಿ ತಂಡಕ್ಕೆ ಸ್ವಾಗತಿಸಲು ಜೋಶಿ ಅವರು ತಮ್ಮ ಹ್ಯಾಂಡ್ಲರ್ ದಲ್ಬೀರ್ ಸಿಂಗ್ ಅವರ ಸಮ್ಮುಖದಲ್ಲಿ ರಿಯೊ ಅವರ ಕಾಲರ್​​ಗೆ ಹೊಸ ಹಗ್ಗವನ್ನು ಅಂಟಿಸಿದರು. ರಿಯೊ ಈಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸುವ 4 ಸದಸ್ಯರ ಕೆ 9 ಸ್ಕ್ವಾಡ್​​​​​​​ನ ಭಾಗವಾಗಿದ್ದಾರೆ.

"ರಿಯೊ ರಾಂಚಿಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಶ್ವಾನ ತರಬೇತಿ ಸೌಲಭ್ಯದಲ್ಲಿ ಕಠಿಣ ತರಬೇತಿ ಪಡೆದಿದೆ. ರಿಯೊ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸುತ್ತದೆ ಮತ್ತು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಸುರಕ್ಷತೆ ಮತ್ತು ಭದ್ರತಾ ಕಾರ್ಯಾಚರಣೆಗಳಿಗೆ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವಿದೆ" ಎಂದು ಜೋಶಿ ಹೇಳಿದರು.

'8 ವರ್ಷಗಳ ಹಿಂದೆ ಕೆ 9 ಸ್ಕ್ವಾಡ್​ಗೆ ಜೂಲಿ ಸೇರಿದ್ದಳು. ಅಂದಿನಿಂದ ವಿಮಾನ ನಿಲ್ದಾಣದಲ್ಲಿ ಹಲವಾರು ಭದ್ರತಾ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಳೆ. ಪತ್ತೆ ಮತ್ತು ಗಸ್ತು ಕರ್ತವ್ಯಗಳಲ್ಲಿ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾಳೆ. ಜೂಲಿ ಕೊಡುಗೆಗಳು ಅಮೂಲ್ಯವಾಗಿವೆ' ಎಂದು ವಿಮಾನ ನಿಲ್ದಾಣದ ಭದ್ರತಾ ಪಡೆ ಶ್ಲಾಘಿಸಿದೆ.

ಹೂವಿನ ಟ್ರಾಲಿಯಲ್ಲಿ ಬೀಳ್ಕೊಡುಗೆ: ಇನ್ನು ವಿಶೇಷವಾಗಿ ಹೂಗಳಿಂದ ಅಲಂಕೃತವಾದ ಟ್ರಾಲಿಯಲ್ಲಿ ಜೂಲಿಯನ್ನು ಬೀಳ್ಕೊಟ್ಟು ಗೌರವಿಸಲಾಯಿತು. ಭದ್ರತಾ ಸೇವೆಯಿಂದ ನಿವೃತ್ತಿಯಾದ ಜೂಲಿಯನ್ನು ಹ್ಯಾಂಡ್ಲರ್ ಕುಮಾರ ಅವರು ದತ್ತು ಪಡೆದಿದ್ದಾರೆ. ಕುಮಾರ ಅವರ ಆರೈಕೆಯಲ್ಲಿ ಜೂಲಿ ತನ್ನ ನಿವೃತ್ತಿ ಜೀವನವನ್ನು ಕಳೆಯಲಿದ್ದಾಳೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸ್ಫೋಟಕ ಪತ್ತೆಯಲ್ಲಿ ಚಾಲಾಕಿ; ಉಡುಪಿ ಜಿಲ್ಲಾ ಪೊಲೀಸ್ ಶ್ವಾನ 'ಐಕಾನ್' ನಿವೃತ್ತಿ - Police Dog Icon

ETV Bharat Logo

Copyright © 2024 Ushodaya Enterprises Pvt. Ltd., All Rights Reserved.