ETV Bharat / state

ಕೇರಳದ ₹25 ಕೋಟಿ ಬಂಪರ್‌ ಲಾಟರಿ ಗೆದ್ದ ಮಂಡ್ಯದ ಮೆಕ್ಯಾನಿಕ್‌ ಅಲ್ತಾಫ್‌ ಕೈಗೆ ಸಿಗುವ ಹಣವೆಷ್ಟು ಗೊತ್ತೇ?

ಮಂಡ್ಯ ಜಿಲ್ಲೆಯ ಪಾಂಡವಪುರದ ಮೆಕ್ಯಾನಿಕ್ ಅಲ್ತಾಫ್ ಎಂಬವರು ಕೇರಳದಲ್ಲಿ ತಿರುವೋಣಂ ಹಬ್ಬದ ಪ್ರಯುಕ್ತ ನಡೆದ ಬಂಪರ್‌ ಲಾಟರಿ ಗೆದ್ದಿದ್ದಾರೆ. ಲಾಟರಿ ಹಣ ಪಡೆಯುವ ಪ್ರಕ್ರಿಯೆ ನಡೆಸಲು ಅವರು ಕೇರಳಕ್ಕೆ ತೆರಳಿದ್ದಾರೆ.

author img

By ETV Bharat Karnataka Team

Published : 3 hours ago

Updated : 3 minutes ago

Altaf
ಅಲ್ತಾಫ್‌ (ETV Bharat)

ಮಂಡ್ಯ: ಜಿಲ್ಲೆಯ ಪಾಂಡವಪುರ ಪಟ್ಟಣದ ಬೈಕ್‌ ಮೆಕ್ಯಾನಿಕ್ ಅಲ್ತಾಫ್‌ ಎಂಬವರು ಕೇರಳದ ತಿರುವೋಣಂ ಹಬ್ಬದ ಪ್ರಯುಕ್ತ ನಡೆದ 25 ಕೋಟಿ ರೂ. ಮೌಲ್ಯದ ಬಂಪರ್ ಲಾಟರಿ ಗೆದ್ದಿದ್ದಾರೆ. ಪರಿಚಯಸ್ಥರ ಮೂಲಕ ಖರೀದಿಸಿದ್ದ ಲಾಟರಿ ಟಿಕೆಟ್ ಇವರ ಬದುಕು ಬದಲಿಸಿದೆ. ತೆರಿಗೆ ಮೊತ್ತ ಕಡಿತವಾಗಿ 12 ಕೋಟಿ ರೂ. ಲಾಟರಿ ಹಣವನ್ನು ಅಲ್ತಾಫ್ ಪಡೆಯಲಿದ್ದಾರೆ.

ಲಾಟರಿ ಗೆದ್ದ ವಿಚಾರ ತಿಳಿಯುತ್ತಿದ್ದಂತೆ ಅಲ್ತಾಫ್ ಕೇರಳದ ತಿರುವೋಣಂ ಕಚೇರಿ ತಲುಪಿದ್ದಾರೆ. ಲಾಟರಿ ಹಣ ಪಡೆಯುವ ಪ್ರಕ್ರಿಯೆ ಪೂರೈಸಿ ಹಣ ಪಡೆದುಕೊಳ್ಳಲಿದ್ದಾರೆ.

ಈ ಕುರಿತು ಕೇರಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನನ್ನ ಸ್ನೇಹಿತನ ಮನೆಗೆ ಚಿಕ್ಕವಯಸ್ಸಿನಿಂದಲೂ ಬರುತ್ತಿದ್ದೆ. ಹೀಗೆ ಬಂದಾಗಲೆಲ್ಲ ಲಾಟರಿ ಟಿಕೆಟ್​ ತೆಗೆದುಕೊಳ್ಳುತ್ತಿದ್ದೆ. ನಾನು 10 ವರ್ಷದಿಂದ ಬಂಪರ್ ಟಿಕೆಟ್ ಖರೀದಿಸುತ್ತಿದ್ದೇನೆ. ಲಾಟರಿ ಗೆಲ್ಲವು ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಅಲ್ಲಾಹುವಿನ ಕೃಪೆಯಿಂದ ಅದೃಷ್ಟ ಕುಲಾಯಿಸಿದೆ" ಎಂದರು.​

Altaf Garage
ಅಲ್ತಾಫ್ ಗ್ಯಾರೇಜ್​ (ETV Bharat)

ಬುಧವಾರ ತಿರುವೋಣಂ ಬಂಪರ್ ಲಾಟರಿ ಡ್ರಾ ನಡೆಯಿತು. 71 ಲಕ್ಷ ಟಿಕೆಟ್‌ಗಳು ಮಾರಾಟವಾದ ಓಣಂ ಬಂಪರ್‌ನಲ್ಲಿ 25 ಕೋಟಿ ರೂ ಮೊದಲ ಬಹುಮಾನವಾಗಿತ್ತು. ಅಂತಿಮವಾಗಿ, ಅದು ಕರ್ನಾಟಕದ ಪಾಂಡವಪುರದ ಮೂಲದ ಅಲ್ತಾಫ್ ಪಾಲಾಗಿದೆ.

25 ಕೋಟಿ ರೂ ಲಾಟರಿ ಹೊಡೆದವರಿಗೆ ಆ ಮೊತ್ತ ಪೂರ್ತಿ ಕೈಗೆ ಸಿಗುವುದಿಲ್ಲ. ತೆರಿಗೆ ಕಡಿತಗೊಳಿಸಿ ಉಳಿದ ಮೊತ್ತವನ್ನು ವಿಜೇತರಿಗೆ ನೀಡಲಾಗುತ್ತದೆ. ಹಾಗಾಗಿ, 12 ಕೋಟಿ ರೂ. ಮಾತ್ರ ಅದೃಷ್ಟವಂತರಿಗೆ ಸಿಗುತ್ತದೆ.

ಬಹುಮಾನದ ಮೊತ್ತ 25 ಕೋಟಿ ರೂ
ಏಜೆಂಟ್ ಕಮಿಷನ್(ಶೇ. 10)- 2.5 ಕೋಟಿ ರೂ
ಟಿಡಿಎಸ್(ಶೇ. 30)- 6.75 ಕೋಟಿ ರೂ
ಸರ್ಚಾರ್ಜ್(ಶೇ. 37)- 2,49,75,000 ರೂ
ಆರೋಗ್ಯ ಮತ್ತು ಶಿಕ್ಷಣ ಸೆಸ್(ಶೇ. 4)- 36,99,000 ರೂ
ಒಟ್ಟು ತೆರಿಗೆ ವಿನಾಯಿತಿ 9,61,74,000 ರೂ

ಇದನ್ನೂ ಓದಿ: 25 ಕೋಟಿಯ ಕೇರಳ ಬಂಪರ್​ ಲಾಟರಿ; ಕರ್ನಾಟಕದ ವ್ಯಕ್ತಿಗೆ ಒಲಿದ ಅದೃಷ್ಟ

Last Updated : 3 minutes ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.