ETV Bharat / state

ಒಂದು ಮುದ್ದೆ 250 ಗ್ರಾಂ, 45 ನಿಮಿಷ ಸಮಯ: 13 ಮುದ್ದೆ ತಿಂದು ಟಗರು ಗೆದ್ದ ಭೂಪ! - RAGI MUDDE EATING CONTEST

ಕರ್ನಾಟಕ ಸುವರ್ಣ ಸಂಭ್ರಮ 50ರ ನಿಮಿತ್ತ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಗಿ ಮುದ್ದೆ- ನಾಟಿಕೋಳಿ ಸಾರು ಉಣ್ಣುವ ಸ್ಪರ್ಧೆಯಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 13 ಮುದ್ದೆ ತಿಂದು ಪ್ರಥಮ ಸ್ಥಾನ ಪಡೆದರು.

13 ಮುದ್ದೆ ತಿಂದು ಟಗರು ಗೆದ್ದ ಭೂಪ
13 ಮುದ್ದೆ ತಿಂದು ಟಗರು ಗೆದ್ದ ಭೂಪ (ETV Bharat)
author img

By ETV Bharat Karnataka Team

Published : Nov 11, 2024, 6:21 PM IST

ಬೆಂಗಳೂರು: 'ಕರ್ನಾಟಕ ಸುವರ್ಣ ಸಂಭ್ರಮ 50' ಅಂಗವಾಗಿ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಆಯೋಜಿಸಿದ್ದ ರಾಗಿ ಮುದ್ದೆ- ನಾಟಿಕೋಳಿ ಸಾರು ಉಣ್ಣುವ ಸ್ಪರ್ಧೆಯಲ್ಲಿ ದಾವಣಗೆರೆಯ ಯೋಗೇಶ್ 13 ಮುದ್ದೆಗಳನ್ನು ತಿಂದು ನೆರೆದಿದ್ದವರ ಹುಬ್ಬೇರುವಂತೆ ಮಾಡಿದರು. ಮೊದಲ ಸ್ಥಾನ ಪಡೆದ ಯೋಗೇಶ್‌ ಅವರಿಗೆ ಟಗರು ಬಹುಮಾನವಾಗಿ ನೀಡಲಾಯಿತು. ಮಹಿಳೆಯರ ವಿಭಾಗದಲ್ಲಿ 9 ಮುದ್ದೆ ತಿಂದ ವೈಟ್​ಫೀಲ್ಡ್​ನ ಸೌಮ್ಯ ಮೊದಲ ಸ್ಥಾನಗಳಿಸಿ ಟಿವಿಯನ್ನು ಬಹುಮಾನವಾಗಿ ಪಡೆದರು.

12 ಮುದ್ದೆ ನುಂಗಿ ದ್ವಿತೀಯ ಸ್ಥಾನ ಪಡೆದ ಮಾಲೂರಿನ ಸಂಪಗೆರೆ ಶ್ರೀನಿವಾಸ್​ ಅವರು ಕುರಿ ಹಾಗೂ ಮಹಿಳಾ ವಿಭಾಗದಲ್ಲಿ 8 ಮುದ್ದೆ ತಿಂದು ದ್ವಿತೀಯ ಸ್ಥಾನ ಪಡೆದ ಚಂದ್ರಕಲಾ ಸಿ.ಜಿ ಅವರು ಮಿಕ್ಸರ್ ಗ್ರೈಂಡರ್​ ಅನ್ನು ಬಹುಮಾನವಾಗಿ ಪಡೆದರು. ಮಂಡ್ಯ, ಕುಣಿಗಲ್, ಹಾಸನ, ದಾವಣಗೆರೆ ಹೊಸಕೋಟೆ, ಮಾಲೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೂರಾರು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದು ಮುದ್ದೆ 250 ಗ್ರಾಂ ತೂಕ ಹೊಂದಿದ್ದು, ಸ್ಪರ್ಧೆಗೆ 45 ನಿಮಿಷಗಳ ಕಾಲ ಮಿತಿ ನಿಗದಿಪಡಿಸಲಾಗಿತ್ತು.

ರಾಗಿ ಮುದ್ದೆ- ನಾಟಿಕೋಳಿ ಸಾರು ಉಣ್ಣುವ ಸ್ಪರ್ಧೆ (ETV Bharat)

ಸ್ಪರ್ಧೆ ಆಯೋಜಕ ಡಾ. ಅನಿಲ್ ಎಸ್. ರೆಡ್ಡಿ ಮಾತನಾಡಿ, "ಇತ್ತೀಚೆಗೆ ನಮ್ಮ ದೇಶಿ ಅಹಾರ ಪದ್ಧತಿ ಮರೆಯಾಗುತ್ತಿದೆ. ಅದರಲ್ಲೂ ಈ ಆಧುನಿಕ ಕಾಲಘಟ್ಟದಲ್ಲಿ ಜನರು ಹೆಚ್ಚಾಗಿ ಫಾಸ್ಟ್​ಫುಡ್​ಗೆ ಮಾರು ಹೋಗುತ್ತಿದ್ದಾರೆ. ಹೀಗಾಗಿ ಆರೋಗ್ಯಕರ ಜೀವನ ನಡೆಸಲು ನಮ್ಮ ದೇಶಿ ಆಹಾರ ಅತ್ಯಮೂಲ್ಯವಾಗಿದೆ. ಈ ಹಿನ್ನೆಲೆ ಹಳ್ಳಿ ಸೊಗಡನ್ನು ನೆನಪಿಸುವ ನಿಟ್ಟಿನಲ್ಲಿ ರಾಗಿ ಮುದ್ದೆ- ನಾಟಿಕೋಳಿ ಸಾರು ಉಣ್ಣುವ ಸ್ಪರ್ಧೆ ಆಯೋಜಿಸಲಾಗಿದೆ" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್, ಕಾಂಗ್ರೆಸ್ ಮುಖಂಡ ಉಮಾಪತಿ ಶ್ರೀನಿವಾಸಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: 1 ಎಕರೆ, 4 ಲಕ್ಷ ರೂ. ಲಾಭ: ತಂಗಿ ಮದುವೆಗೆ ಆಸರೆಯಾದ ಕ್ಯಾಬೇಜ್: ಬೆಳಗಾವಿ ಯುವ ರೈತನ ಕೃಷಿ ಸಾಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.