ETV Bharat / state

ಚಿಕ್ಕಬಳ್ಳಾಪುರ: 3 ವರ್ಷದ ಮಗುವಿನ ಕತ್ತು ಕೊಯ್ದು ಕೊಂದ ಚಿಕ್ಕಪ್ಪ - Three Year Old Child Killed - THREE YEAR OLD CHILD KILLED

ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ವರ್ಷದ ಮಗುವನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದೆ.

police
ಪೊಲೀಸರಿಂದ ಘಟನಾ ಸ್ಥಳ ಪರಿಶೀಲನೆ (ETV Bharat)
author img

By ETV Bharat Karnataka Team

Published : Jun 20, 2024, 6:54 PM IST

ಮೂರು ವರ್ಷದ ಮಗುವಿನ ಕೊಲೆ ಪ್ರಕರಣ (ETV Bharat)

ಚಿಕ್ಕಬಳ್ಳಾಪುರ: ಮೂರು ವರ್ಷದ ಮಗುವನ್ನು ಕತ್ತು ಕೊಯ್ದು ಕೊಲೆಗೈದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮುರುಗಮಲ್ಲ ಹೋಬಳಿ ನಿಮ್ಮಕಾಯಲಹಳ್ಳಿಯ ಗ್ರಾಮದ ಶಿರೀಷ ಹಾಗು ಮಂಜುನಾಥ ದಂಪತಿ ಪುತ್ರ ಗೌತಮ್ (3) ಹತ್ಯೆಯಾದ ಮಗು. ಇದೇ ಗ್ರಾಮದ ರಂಜಿತ್ (30) ಕೊಲೆ ಆರೋಪಿ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಅಣ್ಣ ಮಂಜುನಾಥ ಮನೆಗೆ ಬಂದ ರಂಜಿತ್ ಊಟ ಮಾಡಿ, ಸಂಜೆ ಗೌತಮ್‌ನನ್ನು ಮನೆಯ ಬಳಿ ಇರುವ ಪಾಳುಬಿದ್ದ ಹಳೆಯ ಮನೆಯೊಳಗೆ ಕರೆದೊಯ್ದು, ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮಂಜುನಾಥ ಅವರ ಚಿಕ್ಕಪ್ಪನ ಮಗನಾಗಿರುವ ರಂಜಿತ್, ಎಂಜಿನಿಯರಿಂಗ್ ಪದವೀಧರ. ಮೂರು ತಿಂಗಳಿಂದಲೂ ನಿಮ್ಮಕಾಯಲಹಳ್ಳಿಯಲ್ಲಿ ಮನೆ ನಿರ್ಮಿಸುತ್ತಿದ್ದು, ಮಂಜುನಾಥರ ಮನೆಯಲ್ಲಿ ವಾಸವಿದ್ದ. ಅಲ್ಲಿಯೇ ಊಟ, ತಿಂಡಿ ಮಾಡುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆರೋಪಿ ಯಾವ ಕಾರಣಕ್ಕೆ ಮಗುವನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿಲ್ಲ.

ಜಿಲ್ಲಾ ರಕ್ಷಣಾಧಿಕಾರಿಗಳಾದ ಡಿ.ಎಲ್.ನಾಗೇಶ್, ಹೆಚ್ಚುವರಿ ಎಸ್ಪಿ ಖಾಸಿಂ ಖಾನ್, ಡಿವೈಎಸ್​ಪಿ ಪಿ.ಮುರಳೀಧರ್, ಬಟ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಹಾಡಹಗಲೇ ಡಬಲ್​ ಮರ್ಡರ್​; ಗುಂಡಿಕ್ಕಿ ಇಬ್ಬರ ಬರ್ಬರ ಕೊಲೆ - HASSAN SHOOT OUT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.