ಬೆಂಗಳೂರು: ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು. ಕಾರು ಚಾಲಕನೊಬ್ಬನನ್ನು ಖದೀಮನೊಬ್ಬ ಅಡ್ಡಗಟ್ಟಲು ಯತ್ನಿಸಿರುವ ಘಟನೆ ಶನಿವಾರ ನಗರದ ರಾತ್ರಿ ಜಕ್ಕೂರು ಅಂಡರ್ಪಾಸ್ ಬಳಿ ನಡೆದಿದೆ.
ರಾತ್ರಿ 8.30ರ ಸುಮಾರಿಗೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಜಕ್ಕೂರು ಬಳಿ ಸಾಗುತ್ತಿದ್ದ ವ್ಯಕ್ತಿಯೊಬ್ಬರ ಕಾರಿಗೆ ಕಳ್ಳನೊಬ್ಬ ಏಕಾಏಕಿ ಅಡ್ಡಬಂದಿದ್ದ. ಈ ವೇಳೆ ಎಚ್ಚೆತ್ತ ಕಾರು ಚಾಲಕ ವ್ಯಕ್ತಿಯನ್ನು ತಪ್ಪಿಸಿ, ಕಾರು ನಿಲ್ಲಿಸದೇ ಮುಂದೆ ಸಾಗಿದ್ದಾನೆ.
Bengaluru: A dash camera video shot by a Jakkur resident shows a man deliberately jumping in front of a car near the Jakkur underpass in Sampigehalli police limits. Will Bengaluru police take action?@BlrCityPolice @ChristinMP_ pic.twitter.com/MH0BEQiMZF
— KB Shreedharan (@KoodapuzhaSree) September 29, 2024
ಏಕಾಏಕಿ ಕಾರಿಗೆ ಅಡ್ಡಬರುವ ದೃಶ್ಯ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಲಕ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ಪೊಲೀಸರು, ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಸರಗಳ್ಳನ ಚೇಸ್ ಮಾಡುವಾಗ ಮಧುಗಿರಿ ಪೊಲೀಸರಿದ್ದ ಕಾರು ಅಪಘಾತ: ಮೂವರಿಗೆ ಗಾಯ - Police Car Accident