ಆನೇಕಲ್: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಸಂಬಂಧಿ ಎಂದು ಹೇಳಿಕೊಂಡು ವಿಶೇಷ ತಹಶೀಲ್ದಾರ್ ಮೇಲೆ ಪ್ರಭಾವ ಬೀರಿ ಅಕ್ರಮವಾಗಿ ಜಮೀನು ಖಾತೆ ಬದಲಾವಣೆಗೆ ಯತ್ನಿಸಿದ ವ್ಯಕ್ತಿಯೋರ್ವನನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಆನಂದ್ ಕುಮಾರ್ ಬಂಧಿತ ಆರೋಪಿ.
ಲೋಕಾಯುಕ್ತ ಇಲಾಖೆಯ ಉಪನಿಬಂಧಕ ಅರವಿಂದ್ ಎನ್. ವಿ ಹಾಗೂ ಆನೇಕಲ್ ವಿಶೇಷ ತಹಶೀಲ್ದಾರ್ ಕರಿಯಾನಾಯಕ್ ನೀಡಿದ ದೂರಿನ ಮೇರೆಗೆ ಆನಂದ್ ಕುಮಾರ್ನನ್ನು ಬಂಧಿಸಲಾಗಿದೆ.
ಘಟನೆ ವಿವರ: ಆನೇಕಲ್ ವಿಶೇಷ ತಹಶೀಲ್ದಾರ್ ಕರಿಯಾನಾಯಕ್ ಕಚೇರಿಗೆ ಆಗಮಿಸಿದ್ದ ಆರೋಪಿ ಆನಂದ್, ತಾನು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಸಂಬಂಧಿಕ ಹಾಗೂ ತಾನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉದ್ಯೋಗಿ ಎಂದು ಹೇಳಿ, ಸರ್ಜಾಪುರ ಹೋಬಳಿ ಚಿಕ್ಕನಹಳ್ಳಿ ಸನಂ 18/ಪಿ16 ಹೊಸ ನಂಬರ್ 191 ರ ಒಂದು ಎಕರೆ ಜಮೀನನ್ನು ಎಸ್. ಎನ್. ರಾಮಸ್ವಾಮಿ ಅಡಿಗ ಎಂಬವರಿಂದ ನಾರಾಯಣ ಅಡಿಗ ಎಂಬವರ ಹೆಸರಿಗೆ ಖಾತೆ ಬದಲಾಯಿಸುವಂತೆ ಒತ್ತಡ ಹೇರಿದ್ದ ಎಂದು ವರದಿಯಾಗಿದೆ.
ಇದನ್ನೂ ಓದಿ: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ: ಪತ್ನಿ, ಆಕೆಯ ತಾಯಿ, ಸಹೋದರ ಅರೆಸ್ಟ್