ETV Bharat / state

ಶ್ರೀ ಕ್ಷೇತ್ರ ವರೂರಿನಲ್ಲಿ ಜ.15ರಿಂದ ಪಾರ್ಶ್ವನಾಥ ‌ತೀರ್ಥಂಕರರ ಮಹಾಮಸ್ತಕಾಭಿಷೇಕ: ಡಾ.‌ವೀರೇಂದ್ರ ಹೆಗ್ಗಡೆ ಘೋಷಣೆ - Navagraha Jain Temple Varur

author img

By ETV Bharat Karnataka Team

Published : Sep 4, 2024, 11:45 AM IST

2025ರ ಜನವರಿ 15ರಿಂದ 26ರವರೆಗೆ ಶ್ರೀ ಕ್ಷೇತ್ರ ವರೂರಿನಲ್ಲಿ ವೈಭವದ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಮುಹೂರ್ತ ಉದ್ಘೋಷ ಕಾರ್ಯಕ್ರಮ ಉದ್ಘಾಟನೆ
ಸುಕ್ಷೇತ್ರ ವರೂರಿನಲ್ಲಿ ಮುಹೂರ್ತ ಉದ್ಘೋಷ ಕಾರ್ಯಕ್ರಮದ ಉದ್ಘಾಟನೆ (ETV Bharat)
ಮಹಾಮಸ್ತಕಾಭಿಷೇಕ ಬಗ್ಗೆ ಡಾ.‌ವೀರೇಂದ್ರ ಹೆಗ್ಗಡೆ ಮಾಹಿತಿ (ETV Bharat)

ಹುಬ್ಬಳ್ಳಿ: ನವಗ್ರಹ ತೀರ್ಥ ಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ಸುಕ್ಷೇತ್ರ ವರೂರಿನಲ್ಲಿ ಹನ್ನೆರಡು ವರ್ಷಗಳ ಬಳಿಕ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಗುಣಧರನಂದಿ ಮುನಿ ಮಹಾರಾಜರ ನೇತೃತ್ವದಲ್ಲಿ ಜೈನ ತೀರ್ಥಂಕರರ ಸಮಾಗಮದಲ್ಲಿ 2025ರ ಜನವರಿ 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಮಹಾಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷರಾಗಿರುವ ಡಾ‌.ಡಿ.ವೀರೇಂದ್ರ ಹೆಗ್ಗಡೆ ಮಂಗಳವಾರ ಘೋಷಿಸಿದರು.

ನವಗ್ರಹ ತೀರ್ಥ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಮಹೋತ್ಸವ ಮುಹೂರ್ತ ಉದ್ಘೋಷ ಕಾರ್ಯಕ್ರಮದಲ್ಲಿ ಮಹಾಮಸ್ತಕಾಭಿಷೇಕದ ದಿನಾಂಕ ನಿಗದಿ ಮಾಡಲಾಯಿತು. ವೀರೇಂದ್ರ ಹೆಗ್ಗಡೆಯವರನ್ನು ಮಹಾಮಸ್ತಕಾಭಿಷೇಕದ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಹೆಗ್ಗಡೆಯವರನ್ನು ಸನ್ಮಾನಿಸಿ ಗೌರವ ಸಮರ್ಪಿಸಲಾಯಿತು.

108 ರಥದಿಂದ ಮಹಾ ಮೆರವಣಿಗೆ: ಹನ್ನೆರಡು ವರ್ಷಗಳ ಬಳಿಕ ನಡೆಯುವ ಮಹಾಮಸ್ತಕಾಭಿಷೇಕ ಹಲವು ವಿಶೇಷತೆಗಳಿಂದ ಕೂಡಿರಲಿದೆ. 27 ಪದಾರ್ಥಗಳು, 18 ದಿಗಂಬರ ಆಚಾರ್ಯರು, ಶ್ವೇತಾಂಬರ, ದಿಗಂಬರ ಹಾಗೂ ಮೂರ್ತಿಪೂಜಕರು ಆಗಮಿಸಲಿದ್ದು, ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಒಂಬತ್ತು ದೇಶಗಳ ಮೂಲಕ ಒಂಬತ್ತು ವಿಶೇಷ ಹೂವುಗಳಿಂದ ಪುಷ್ಪವೃಷ್ಟಿ ಮಾಡಲಾಗುತ್ತದೆ. ಸರ್ವಧರ್ಮ ಸಮ್ಮೇಳನದ ಜೊತೆಗೆ ಜೈನ​ ಸಾಹಿತ್ಯ ಸಮ್ಮೇಳನ ನಡೆಯಲಿದೆ. 24 ಆನೆ‌, ಕುದುರೆ ಹಾಗೂ 108 ರಥದಿಂದ ಮಹಾ ಮೆರವಣಿಗೆ ನಡೆಯಲಿದೆ.

ಹತ್ತು‌ ದಿನಗಳ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಕಲಾವಿದರು ಭಾಗಿಯಾಗಲಿದ್ದಾರೆ. ರಾಷ್ಟ್ರಪತಿ ಸೇರಿದಂತೆ ನಾನಾ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ. ಭಗವಾನ್​ ಪಾರ್ಶ್ವನಾಥ ತೀರ್ಥಂಕರರ ಜೀವನ ದರ್ಶನದ ಮೂಲಕ ಮಹಾಮಸ್ತಕಾಭಿಷೇಕದಿಂದ ಲೋಕ‌ಕಲ್ಯಾಣದ ಸಂಕಲ್ಪ ಮಾಡಲಾಗಿದೆ ಎಂದು ಗುಣಧರನಂದಿ ಮಹಾರಾಜರು ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಭುವನೇಶ್ವರ-ಬೆಳಗಾವಿ ನಡುವೆ ವಿಶೇಷ ರೈಲು: ಹಲವು ರೈಲುಗಳ ವೇಳಾಪಟ್ಟಿ ಬದಲು - Special Train Services

ETV Bharat Logo

Copyright © 2024 Ushodaya Enterprises Pvt. Ltd., All Rights Reserved.