ETV Bharat / state

ಕಾನ್ಸ್​ಟೇಬಲ್​ನಿಂದ ಲಂಚ ಪಡೆಯುತ್ತಿದ್ದ ಕೆಎಸ್ಆರ್‌ಪಿ ಇನ್ಸ್​ಪೆಕ್ಟರ್​ ಲೋಕಾಯುಕ್ತ ಬಲೆಗೆ - Lokayukta traps KSRP officer

ಮಂಗಳೂರಿನಲ್ಲಿ ಕಾನ್ಸ್​ಟೇಬಲ್​ನಿಂದ ಲಂಚ ಪಡೆಯುತ್ತಿದ್ದ ಕೆಎಸ್ಆರ್‌ಪಿ ಇನ್ಸ್​ಪೆಕ್ಟರ್​ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

LOKAYUKTA TRAPS KSRP OFFICER
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jul 10, 2024, 10:48 PM IST

ಮಂಗಳೂರು: ನಗರದ ಕೊಣಾಜೆಯ ಕೆಎಸ್ಆರ್‌ಪಿ 7ನೇ ಬೆಟಾಲಿಯನ್‌ ಇನ್ಸ್​ಪೆಕ್ಟರ್ ಮಹಮ್ಮದ್ ಹ್ಯಾರೀಸ್ ಎಂಬಾತ ಕಾನ್ಸ್​ಟೇಬಲ್​ವೊಬ್ಬರಿಂದ 18ಸಾವಿರ ರೂ. ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಕೆಎಸ್ಆರ್‌ಪಿ 7ನೇ ಬೆಟಾಲಿಯನ್‌‌ನ ಪೊಲೀಸ್ ಅತಿಥಿಗೃಹದಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಲು ಮೀಸಲು ಪೊಲೀಸ್ ಕಾನ್ಸ್​ಟೇಬಲ್​ನಿಂದ ಮಹಮ್ಮದ್ ಹ್ಯಾರೀಸ್ 20,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಜೊತೆಗೆ ಪ್ರತೀ ತಿಂಗಳು 6 ಸಾವಿರ ರೂ.ನಂತೆ ಹಣ ನೀಡಬೇಕೆಂದು ಲಂಚ ಕೇಳಿದ್ದ. ಅದರಂತೆ ಮೊದಲಿಗೆ 20 ಸಾವಿರ ಹಣನೀಡಿ, ಬಳಿಕ ಪ್ರತಿ ತಿಂಗಳು 6 ಸಾವಿರ ದಂತೆ ಲಂಚ ನೀಡುತ್ತಾ ಬಂದಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 50,000 ರೂ. ಲಂಚ ನೀಡಲಾಗಿತ್ತು.

ಆದರೆ, ಪೊಲೀಸ್ ಕಾನ್ಸ್​ಟೇಬಲ್ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ಲಂಚ ನೀಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಮುಹಮ್ಮದ್ ಹ್ಯಾರೀಸ್ ಪ್ರತಿದಿನ ಕರೆಮಾಡಿ 18 ಸಾವಿರ ರೂ. ಹಣ ಲಂಚವಾಗಿ ನೀಡಬೇಕೆಂದು, ಇಲ್ಲವಾದರೆ ಡ್ಯೂಟಿ ಬದಲಾಯಿಸುತ್ತೇನೆ ಎಂದು ದೂರುದಾರರಿಗೆ ಬೆದರಿಸುತ್ತಿದ್ದ. ಇದರಿಂದ ಬೇಸತ್ತ ಪೊಲೀಸ್ ಕಾನ್ಸ್​ಟೇಬಲ್ ಮಂಗಳೂರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅದರಂತೆ 18 ಸಾವಿರ ರೂ. ಲಂಚ ಪಡೆಯುತ್ತಿದ್ದಾಗಲೇ ಮುಹಮ್ಮದ್ ಹ್ಯಾರೀಸ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಇದನ್ನೂ ಓದಿ: 18 ತಿಂಗಳಲ್ಲಿ 71 ಭ್ರಷ್ಟ ಅಧಿಕಾರಿ, ಸಿಬ್ಬಂದಿಗಳಿಗೆ ಜೈಲಿನ ದಾರಿ ತೋರಿಸಿದ ಲೋಕಾಯುಕ್ತ ಪೊಲೀಸರು - Lokayuktha Cases

ETV Bharat Logo

Copyright © 2024 Ushodaya Enterprises Pvt. Ltd., All Rights Reserved.