ETV Bharat / state

ಲೋಕಾಯುಕ್ತ ಪೊಲೀಸರು ಸ್ನೇಹಮಯಿ ಕೃಷ್ಣನನ್ನು ಬಂಧಿಸಲಿ: ಎಂ.ಲಕ್ಷ್ಮಣ್‌ - M LAKSHMAN

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಬಿಜೆಪಿ ನಾಯಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾನೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಟೀಕಿಸಿದರು.

ಎಂ ಲಕ್ಷ್ಮಣ್‌
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ (ETV Bharat)
author img

By ETV Bharat Karnataka Team

Published : Oct 15, 2024, 5:23 PM IST

ಮೈಸೂರು: "ಸ್ನೇಹಮಯಿ ಕೃಷ್ಣ ಒಬ್ಬ ಕ್ರಿಮಿನಲ್‌ ಹಿನ್ನೆಲೆ ಇರುವ ವ್ಯಕ್ತಿ. ಈತನ ವಿರುದ್ಧ 43 ಪ್ರಕರಣಗಳಿವೆ" ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆರೋಪಿಸಿದರು.

ನಗರದಲ್ಲಿರುವ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿಂದು ಮಾತನಾಡಿದ ಅವರು, "ಸಿಎಂ ಸಿದ್ದರಾಮಯ್ಯರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಪದೇ ಪದೆ ಆಗ್ರಹಿಸುತ್ತಿದ್ದಾನೆ. ಪ್ರತಿನಿತ್ಯ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾನೆ. ಬಿಜೆಪಿ ನಾಯಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾನೆ" ಎಂದು ದೂರಿದರು.

ಎಂ.ಲಕ್ಷ್ಮಣ್‌ (ETV Bharat)

"ನಾನು ಪ್ರತಿನಿತ್ಯ ಲೋಕಾಯುಕ್ತಗೆ ಹೋಗುತ್ತಿದ್ದಾರೆಂದು ಆರೋಪಿಸಿದ್ದಾರೆ. ಆದರೆ ನಾನು ಒಮ್ಮೆ ಮಾತ್ರ ಹೋಗಿದ್ದೇನೆ. ಲೋಕಾಯುಕ್ತ ಕಚೇರಿ ಪಕ್ಕದಲ್ಲಿರುವ ಹೋಟೆಲ್‌ಗೆ ಕಾಫಿ ಕುಡಿಯಲು ನಿತ್ಯ ಹೋಗುತ್ತೇನೆ. ಸ್ನೇಹಮಯಿ ಕೃಷ್ಣ ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾನೆ. ಆತ ಕೇಂದ್ರ ಸರ್ಕಾರದ ಏಜೆಂಟ್‌ನಂತೆ ವರ್ತಿಸಿತ್ತಿದ್ದು, ಮೊದಲು ಅವನನ್ನು ಲೋಕಾಯುಕ್ತ ಪೊಲೀಸರು ಬಂಧಿಸಬೇಕು" ಎಂದು ಆಗ್ರಹಿಸಿದರು.

ಸರ್ಕಾರ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಮೇಲಿನ ಪ್ರಕರಣ ವಾಪಸ್‌ ಪಡೆದ ವಿಚಾರವಾಗಿ ಮಾತನಾಡಿ, ಮುಸ್ಲಿಂ ಸಮುದಾಯದ ಹೆಸರು ಇರುವುದಕ್ಕೆ ಬಿಜೆಪಿಯವರು ಟೀಕಿಸುತ್ತಾರೆ. ಬಿಜೆಪಿಯವರು ಮುಸ್ಲಿಮರನ್ನು ಭಯೋತ್ಪಾದಕರಿಗೆ ಹೋಲಿಸುತ್ತಾರೆ. ಆದರೆ ನಿಜವಾಗಿಯೂ ಬಿಜೆಪಿ, ಆರ್​ಎಸ್​ಎಸ್‌ನವರು ಭಯೋತ್ಪಾದಕರು. ರಾಜ್ಯ ಸರ್ಕಾರ 43 ಪ್ರಕರಣಗಳನ್ನು ಕೈಬಿಟ್ಟಿದೆ. ಅದರಲ್ಲಿ 9 ಪ್ರಕರಣಗಳು ಕಾಂಗ್ರೆಸ್‌ ಸರ್ಕಾರದ ಅವಧಿಯದ್ದಾಗಿದ್ದರೆ, ಉಳಿದ 34 ಪ್ರಕರಣಗಳು ಬಿಜೆಪಿ ಸರ್ಕಾರದ ಅವಧಿಯದ್ದು" ಎಂದು ತಿಳಿಸಿದರು.

ಇದನ್ನೂ ಓದಿ: ಅತ್ಯಾಚಾರ ಆರೋಪ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.