ETV Bharat / state

'ಎರಡರಿಂದ ಮೂರು ದಿನಗಳಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ' - Sirsi

Lok Sabha Election congres candidates list: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

Lok Sabha Elections  CM Siddaramaiah  Sirsi  Lok Sabha Election Candidate List  Candidate List
ಎರಡರಿಂದ ಮೂರು ದಿನಗಳಲ್ಲಿ ಲೋಕಸಭಾ ಚುನಾವಣೆ ಅಭ್ಯರ್ಥಿ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ
author img

By ETV Bharat Karnataka Team

Published : Mar 6, 2024, 1:04 PM IST

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಶಿರಸಿ: ''ಇನ್ನು ಎರಡು ಮೂರು ದಿನಗಳಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕೇಂದ್ರ ಚುನಾವಣಾ ಸಮಿತಿ ಸಭೆಯ ನಂತರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಯಾವುದೇ ವಿವಾದ ಇಲ್ಲ. ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು ಹಾಗೂ ಮುಖಂಡರು ಸೂಚಿಸಿದವರಿಗೆ ಟಿಕೆಟ್ ನೀಡಲಾಗುತ್ತದೆ'' ಎಂದರು

ಮಂಗನ ಕಾಯಿಲೆ: ''ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಂಗನ ಕಾಯಿಲೆಯಿಂದ ಐವರು ಮೃತಪಟ್ಟಿದ್ದಾರೆ‌. ಅವರಿಗೆ ಪರಿಹಾರ ಸಿಕ್ಕಿಲ್ಲ‌. ಪರಿಹಾರ ಕೊಡುವ ಸಂಬಂಧ ಕ್ರಮ ವಹಿಸಲಾಗುತ್ತದೆ. ಉಲ್ಬಣವಾಗುತ್ತಿರುವ ಕಾಯಿಲೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಕಾಯಿಲೆಯಿಂದ ಯಾರು ಸಾಯಬಾರದು ಎನ್ನುವುದು ನಮ್ಮ‌ ಉದ್ದೇಶ'' ಎಂದು ತಿಳಿಸಿದರು.

ಪಾಕಿಸ್ತಾನ ಪರ ಘೋಷಣೆ: ''ಪಾಕಿಸ್ತಾನ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಸಂಸ್ಥೆಯವರು ಕೊಟ್ಟಿರುವ ವರದಿ ಅಂತಿಮವಲ್ಲ. ಪೊಲೀಸರ ಎಫ್​ಎಸ್ಎಲ್ ವರದಿ ಮೇಲೆ ತ‌ನಿಖೆ ಮಾಡಲಾಗಿದೆ'' ಎಂದು ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಿವರಾಮ್​ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯಾಗುವ ವಿಚಾರಕ್ಕೆ, ''ರಾಜಕೀಯ ನಿಂತ‌ ನೀರಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರಾದರೂ ಬರಬಹದು. ಆದರೆ, ನನ್ನೊಂದಿಗೆ ಇನ್ನೂ ಹೆಬ್ಬಾರ್ ಕಾಂಗ್ರೆಸ್​ ಪಕ್ಷ ಸೇರ್ಪಡೆ ಕುರಿತು ಮಾತನಾಡಿಲ್ಲ. ಒಂದೊಮ್ಮೆ ಪಕ್ಷ ಸೇರುವುದಾದರೆ ಜಿಲ್ಲೆಯ ಎಲ್ಲಾ ನಾಯಕರ ಒಪ್ಪಿಗೆ ನೀಡದರೆ ಮಾತ್ರ ಸೇರಿಸಲಾಗುವುದು'' ಎಂದು ಹೇಳಿದರು.

ಕಾಂತರಾಜ ವರದಿ ಜಾರಿ ಸಂಬಂಧ ಪ್ರತಿಕ್ರಿಯಿಸಿ, ''ಕಾಂತರಾಜ ವರದಿಯನ್ನು ಕ್ಯಾಬಿನೆಟ್​ನಲ್ಲಿ ಮೊದಲು ಇಡಬೇಕು. ಅದರ ಬಗ್ಗೆ ಗೊತ್ತಿಲ್ಲದೇ ಕೆಲವರು ವಿರೋಧ ಮಾಡುತ್ತಿದ್ದಾರೆ. ಆದರೆ, ಕ್ಯಾಬಿನೆಟ್ ಚರ್ಚೆಯ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ'' ಎಂದರು.

''ಬಿಜೆಪಿಗರು ಆಪರೇಷನ್ ಕಮಲ ಮಾಡುವುದರಲ್ಲಿ‌ ನಿಸ್ಸಿಮರು. ಅವರು ಯಾವಾಗ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದಾರೆ? ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ, ಸಂವಿಧಾನದ ಮೇಲೆ ನಂಬಿಕೆ ಇಲ್ಲ. ನಂಬಿಕೆ ಇದ್ದವರು ಪಕ್ಷಾಂತರ ಮಾಡಿಸುತ್ತಾರಾ? ಈ ಹಿಂದೆ ರಾಜೀವ್ ಗಾಂಧಿಯವರು ಪಕ್ಷಾಂತರ ಮಾಡುವ ಬಗ್ಗೆ ಕಾನೂನು ತಂದರು. ಅದನ್ನು ಉಲ್ಲಂಘಿಸಿ ಬಿಜೆಪಿಗರು ಪಕ್ಷಾಂತರ ಮಾಡಿಸಿದ್ದಾರೆ'' ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಪ್ರಣಾಳಿಕೆ ಸಿದ್ಧ: ಇಂದು ರಾಹುಲ್​ ಗಾಂಧಿ 10 ಚುನಾವಣಾ ಭರವಸೆ ಪ್ರಕಟಿಸುವ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.