ETV Bharat / state

ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಹಕ್ಕು ಚಲಾವಣೆಗೆ ಸಿದ್ದವಾಗಿರುವ 1,08,247 ಯುವ ಮತದಾರರು - Lok Sabha Election

ಬೆಳಗಾವಿ ಜಿಲ್ಲೆಯಲ್ಲಿ ಹೊಸದಾಗಿ ನೋಂದಣಿ ಆಗಿರುವ 1,08,262 ಯುವ ಮತದಾರರ ಪೈಕಿ 59,435 ಯುವಕರು, 48,812 ಯುವತಿಯರು ಹಾಗೂ 15 ತೃತೀಯ ಲಿಂಗಿಗಳಿದ್ದಾರೆ. ಇನ್ನೂ ಅನೇಕರು ಅರ್ಜಿ ಸಲ್ಲಿಸಿ ನೋಂದಣಿಗೆ 18 ವರ್ಷ ತುಂಬುವುದನ್ನು ಕಾಯುತ್ತಿದ್ದಾರೆ. 2024ರ ಏಪ್ರಿಲ್​ 1ಕ್ಕೆ 18 ವರ್ಷ ತುಂಬುವವರ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಪಡಿಸಲು ಇನ್ನೂ ತಯಾರಿ ನಡೆಸಿದೆ.

Young people to exercise their first right to vote
ಮೊದಲ ಮತದಾನ ಹಕ್ಕು ಚಲಾಯಿಸುವ ಯುವಜನ
author img

By ETV Bharat Karnataka Team

Published : Mar 14, 2024, 8:44 PM IST

Updated : Mar 14, 2024, 10:36 PM IST

ಯುವ ಮತದಾರರು

ಬೆಳಗಾವಿ: ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಲು ಕ್ಷಣಗಣನೆ ಶುರುವಾಗಿದ್ದು, ಬೆಳಗಾವಿ ಜಿಲ್ಲೆಯ ಲಕ್ಷಕ್ಕೂ ಅಧಿಕ ಯುವ ಮತದಾರರು ತಮ್ಮ ಚೊಚ್ಚಲ ಮತದಾನ ಹಕ್ಕು ಚಲಾಯಿಸಲು ಕಾತರರಾಗಿದ್ದಾರೆ. ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಿಸಿದ್ದು ಈ ವರೆಗೆ 1,08,247 ಯುವ ಮತದಾರರು ತಮ್ಮ ಹಕ್ಕು ಚಲಾಯಿಸಲು ಹೆಸರು ನೋಂದಾಯಿಸಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರ: ಹೌದು ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿ ವಿಧಾನಸಭಾ ಕ್ಷೇತ್ರಗಳಾದ ಅರಭಾವಿ 7,554, ಗೋಕಾಕ 6,675, ಬೆಳಗಾವಿ ಉತ್ತರ 5,626, ಬೆಳಗಾವಿ ದಕ್ಷಿಣ 5,038, ಬೆಳಗಾವಿ ಗ್ರಾಮೀಣ 6,209, ಬೈಲಹೊಂಗಲ 5,127, ಸವದತ್ತಿ ಯಲ್ಲಮ್ಮ 5,659 ಹಾಗೂ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 5,083 ಯವಜನರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಇನ್ನು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರ ನಿಪ್ಪಾಣಿಯಲ್ಲಿ 5966, ಚಿಕ್ಕೋಡಿ-ಸದಗಲಾ 6949, ಅಥಣಿ 7,543, ಕಾಗವಾಡ 5,523, ಕುಡಚಿ 5,771, ರಾಯಬಾಗ 6,448, ಹುಕ್ಕೇರಿ 5,974, ಯಮಕನಮರಡಿ ವಿಧಾನಸಭೆ ಕ್ಷೇತ್ರದಲ್ಲಿ 6,234 ಯುವ ಮತದಾರರು ಇದೇ ಮೊದಲ ಬಾರಿ ಮತದಾನಕ್ಕೆ ಸಿದ್ಧರಾಗಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ:ಇನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಬರುವ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ 5,741 ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರ 5,142 ಯುವ ಮತದಾರರಿದ್ದಾರೆ. ಜಿಲ್ಲೆಯ ಒಟ್ಟು 1,08,262 ಹೊಸ ಮತದಾರರ ಪೈಕಿ 59,435 ಯುವಕರು, 48,812 ಯುವತಿಯರು ಹಾಗೂ 15 ತೃತೀಯ ಲಿಂಗಿಗಳಿದ್ದಾರೆ. ಇನ್ನೂ ಅನೇಕರು ಅರ್ಜಿ ಸಲ್ಲಿಸಿ ನೋಂದಣಿಗೆ 18 ವರ್ಷ ತುಂಬುವುದನ್ನು ಕಾಯುತ್ತಿದ್ದಾರೆ. 2024ರ ಏಪ್ರೀಲ್ 1ಕ್ಕೆ 18 ವರ್ಷ ತುಂಬುವವರ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಪಡಿಸುವುದಕ್ಕೆ ತಯಾರಿ ನಡೆಸಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಂಟ್ರೋಲ್ ರೂಂ. ಸ್ಥಾಪಿಸಲಾಗಿದ್ದು, ಟೋಲ್ ಫ್ರೀ ಸಂಖ್ಯೆ ‘1950’ ಗೆ ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಜಿಲ್ಲಾಡಳಿತ ಕೋರಿದೆ.

ಜಿಲ್ಲೆಯಲ್ಲಿ ಒಟ್ಟು 40,60,601 ಮತದಾರರು: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ವಯೋಮಾನದವರು ಸೇರಿ ಒಟ್ಟು 19,03,454 ಮತದಾರರಿದ್ದು, 9,47,987 ಪುರುಷರು, 9,55,375 ಮಹಿಳೆಯರು, 92 ಇತರ ಮತದಾರರಿದ್ದಾರೆ. ಇನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,92,287 ಮತದಾರರಿದ್ದು, ಈ ಪೈಕಿ ಪುರುಷರು 8,75,601, ಮಹಿಳೆಯರು 8,65,264 ಹಾಗೂ 74 ಇತರೆ ಮತದಾರರಿದ್ದಾರೆ. ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಖಾನಾಪುರ 2,17494, ಕಿತ್ತೂರು 19,8714 ಮತದಾರರಿದ್ದಾರೆ. 18 ವಿಧಾನಸಭಾ ಕ್ಷೇತ್ರ ಸೇರಿ ಒಟ್ಟು 40,60,601 ಮತದಾರರು ಬೆಳಗಾವಿ ಜಿಲ್ಲೆಯಲ್ಲಿದ್ದಾರೆ.

ಯುವ ಮತದಾರರು ಏನಂತಾರೆ.?: ಈಟಿವಿ ಭಾರತದೊಂದಿಗೆ ಬೆಳಗಾವಿ ಲಿಂಗರಾಜ ಕಾಲೇಜಿನ ವಿದ್ಯಾರ್ಥಿ ನವೀನ ಕುಮಾರ್ ಮಾತನಾಡಿ,
ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿ ಮತದಾನ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಒಳ್ಳೆಯ ಸರ್ಕಾರ ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಇದು ನಮ್ಮೆಲ್ಲರ ಕರ್ತವ್ಯ ಎಂದರು.

ವಿದ್ಯಾರ್ಥಿ ಸಚಿನ ಜಾಧವ್​ ಮಾತನಾಡಿ, ಮತದಾನ ಸಂವಿಧಾನ ನಮಗೆ ನೀಡಿರುವ ಅತ್ಯಮೂಲ್ಯ ಹಕ್ಕು. ಮೊದಲ ಬಾರಿಗೆ ಮತ ಚಲಾಯಿಸುವ ಎಲ್ಲ ಯುವಕರು ಯಾವುದೇ ರೀತಿ ಹಣ, ಮತ್ತಿತರ ಆಮಿಷಗಳಿಗೆ ತಮ್ಮ ಮತವನ್ನು ಮಾರಿಕೊಳ್ಳಬೇಡಿ. ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ತರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡೋಣ ಎಂದರು.

ಮೊದಲ ಮತದಾನ ಮಾಡಲು ತುಂಬಾ ಸಂತೋಷ ಆಗುತ್ತಿದೆ. ಒಳ್ಳೆಯ ನಾಯಕನಿಗೆ ಮತ ಕೊಡುವದರಿಂದ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ, ನಮ್ಮ ಅಮೂಲ್ಯವಾದ ಮತವನ್ನು ಕೆಲವರು ಹಣ ಸೇರಿ ಮತ್ತಿತರ ಆಮಿಷಗಳಿಗೆ ಮಾರಿಕೊಳ್ಳುತ್ತಾರೆ. ಇದು ನಮ್ಮನ್ನು ನಾವೇ ಮಾರಿಕೊಂಡಂತೆ ಎಂಬ ಅರಿವು ನಮ್ಮಲ್ಲಿ ಇರಬೇಕು ಶಿಲ್ಪಾ ಕರ್ವೆ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾಯಿಸಲು ನನಗೆ ಅವಕಾಶ ಸಿಕ್ಕಿದೆ. ಮತದಾನದ ಮಹತ್ವ ತಿಳಿಬೇಕಾದರೆ ಎಲ್ಲರೂ ವಿದ್ಯಾವಂತರಾಗಬೇಕು. ಅದೇ ರೀತಿ ಅಭ್ಯರ್ಥಿಯು ವಿದ್ಯಾವಂತನಾ ಎಂದು ತಿಳಿದು ಮತ ಚಲಾಯಿಸಬೇಕು. ಜನರ ಹಿತಕ್ಕಾಗಿ, ಕರ್ನಾಟಕ ಮತ್ತು ಭಾರತ ಅಭಿವೃದ್ಧಿ ಮಾಡುವ ಚಿಂತನೆ ಹೊಂದಿರುವರಿಗೆ ಮಾತ್ರ ಮತ ಹಾಕಬೇಕು ಎಂದು ವಿದ್ಯಾರ್ಥಿನಿ ರಿಯಾ ಕೋಲಕಾರ ಹೇಳಿದರು.

ಭಾರತ ದೇಶದ ಎಲ್ಲ ಯುವಕರು ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ಜೊತೆಗೆ ದೇಶದ ಅಭಿವೃದ್ಧಿ ಮತ್ತು ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂಥ ಅಭ್ಯರ್ಥಿ ಆಯ್ಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ವಿದ್ಯಾರ್ಥಿನಿ ಅಮೃತಾ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂಓದಿ:ಚುನಾವಣೆ ನಿರ್ವಹಣಾ ಸಮಿತಿಯ ರಾಜ್ಯ ಸಂಚಾಲಕರಾಗಿ ಸುನೀಲ್ ಕುಮಾರ್ ನೇಮಕ: ವಿಜಯೇಂದ್ರ ಆದೇಶ

Last Updated : Mar 14, 2024, 10:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.