ETV Bharat / state

ಐರಾವತ ಬಸ್​ನಲ್ಲಿ ಬೆಂಕಿ: ಕೆಸರು, ಮಣ್ಣು, ನೀರೆರಚಿ ಅನಾಹುತ ತಪ್ಪಿಸಿದ ಸ್ಥಳೀಯರು - KSRTC Bus Catches Fire - KSRTC BUS CATCHES FIRE

ಕೆಎಸ್​ಆರ್​ಟಿಸಿ ಐರಾವತ ಬಸ್​ಗೆ ತಗುಲಿದ್ದ ಬೆಂಕಿಯನ್ನು ಸ್ಥಳೀಯರು ಸೇರಿ ಹತೋಟಿಗೆ ತಂದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

Dakshina Kannada  KSRTC bus caught fire  Locals put out the fire  KSRTC bus
ಕೆಎಸ್​ಆರ್​ಟಿಸಿ ಐರಾವತ ಬಸ್​ನಲ್ಲಿ ಬೆಂಕಿ (ETV Bharat)
author img

By ETV Bharat Karnataka Team

Published : Jul 19, 2024, 9:15 AM IST

ಉಪ್ಪಿನಂಗಡಿ/ದಕ್ಷಿಣ ಕನ್ನಡ: ಕೆಎಸ್​ಆರ್​ಟಿಸಿ ಐರಾವತ ಬಸ್‌ಗೆ ಬೆಂಕಿ ತಗುಲಿದ ಘಟನೆ ಇಲ್ಲಿನ ಹಳೆಗೇಟು ಸಮೀಪ ಗುರುವಾರ ಬೆಳಗ್ಗೆ ನಡೆಯಿತು. ವಿಷಯ ತಿಳಿದ ತಕ್ಷಣ ಸ್ಥಳೀಯ ಯುವಕರು ಬೆಂಕಿ ನಂದಿಸಿ ಅನಾಹುತ ತಡೆದರು.

ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಬಸ್​ನ ಹಿಂಬದಿ ಎಸಿಗೆ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಹಳೆಗೇಟು ಬಳಿ ಬಸ್ ನಿಲ್ಲಿಸಿದ್ದಾನೆ. ಪ್ರಯಾಣಿಕರು ಕೂಡಲೇ ಬಸ್‌ನಿಂದ ಇಳಿದಿದ್ದಾರೆ. ಸ್ಥಳದಲ್ಲಿದ್ದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಇಸಾಕ್, ಇಕ್ಬಾಲ್ ಹಾಗು ಸ್ಥಳೀಯರಾದ ಜಾಯಿ, ಸ್ನೇಕ್ ಝಕರಿಯಾ, ಸಿದ್ದೀಕ್ ಕೊಪ್ಪಳ ಸೇರಿದಂತೆ ಆಟೋ ಚಾಲಕರು ರಸ್ತೆಯಲ್ಲಿದ್ದ ಕೆಸರು, ಮಣ್ಣು, ನೀರು ಎರಚಿ ಬೆಂಕಿಯನ್ನು ಹತೋಟಿಗೆ ತಂದರು. ಬಸ್ ಹಿಂಬದಿಗೆ ಹಾನಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

ಇದನ್ನೂ ಓದಿ: ನದಿಯಲ್ಲಿ ತೇಲಿ ಹೋಗಿದ್ದ ಗ್ಯಾಸ್ ಟ್ಯಾಂಕರ್; ನೀರು, ಗಾಳಿಯಲ್ಲಿ 18 ಕ್ವಿಂಟಲ್ ಗ್ಯಾಸ್ ಹೊರಕ್ಕೆ! - Gas Tanker Washed Away

ETV Bharat Logo

Copyright © 2024 Ushodaya Enterprises Pvt. Ltd., All Rights Reserved.