ದಾವಣಗೆರೆ: ಹರಿಹರದ ಪಂಚಮಸಾಲಿ ಮಠದ ವಚನಾನಂದ ಶ್ರೀಗಳು ಸಮಂಜಸ ಅಲ್ಲದ ಹೇಳಿಕೆಗಳನ್ನು ಕೊಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಮಹಾಂತೇಶ್ ಅಗಡಿ, ಜಾಗತಿಕ ಲಿಂಗಾಯತ ಮಹಾಸಭೆ, ಬಸವ ಬಳಗ ಸದಸ್ಯರಾದ ಮಹಾಂತೇಶ್ ಅಗಡಿ ತಿಳಿಸಿದರು.
ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು, ಲಿಂಗಾಯತರು ಹಿಂದೂ ಧರ್ಮದ ರೆಂಬೆ ಮತ್ತು ಕೊಂಬೆ ಇದ್ದಂತೆ, ಹಿಂದೂ ಧರ್ಮ ಮಹಸಾಗರ ಇದ್ದಂತೆ ಎಂದು ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸ್ವಾಮೀಜಿ ಅವರು ಈ ರೀತಿಯ ಹೇಳಿಕೆಗಳನ್ನು ಕೊಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಮಹಾಂತೇಶ್ ಒತ್ತಾಯಿಸಿದರು.
ವಚನಾನಂದ ಶ್ರೀಗಳ ಹೆಸರಿನಲ್ಲೇ ವಚನ ಎಂಬ ಪದ ಇದೆ. ಅವರು ಮೊದಲು ವಚನಗಳನ್ನು ಸರಿಯಾಗಿ ಓದಬೇಕು. ಅವುಗಳನ್ನು ಅರ್ಥ ಮಾಡಿಕೊಳ್ಳಬೇಕು. ಆ ಬಳಿಕ ಲಿಂಗಾಯತ ಎಂಬುದು ಸ್ವತಂತ್ರ ಧರ್ಮ ಎಂದು ಜನರಿಗೆ ತಿಳಿ ಹೇಳಬೇಕು ಎಂದು ಆಗ್ರಹಿಸಿದರು.
ಅವರು ಉದ್ದೇಶ ಪೂರ್ವಕವಾಗಿ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆಂದು ಅನ್ನಿಸುತ್ತಿದೆ. ಈ ರೀತಿಯ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು. ಮೊದಲ ವಚನಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಅವರಿಗೆ ತಿಳುವಳಿಕೆ ಇಲ್ಲ ಅಂತ ಅಲ್ಲ, ಅದರೆ, ಸ್ವಲ್ಪ ಲಿಂಗಾಯತ ಧರ್ಮದ ಬಗ್ಗೆ ತಿಳಿದುಕೊಂಡು ಮಾತಾಡಲಿ ಎಂದರು.
ಈ ಬಗ್ಗೆ ದೂರು ಕೊಡುತ್ತೀರಾ ಎಂಬ ಪ್ರಶ್ನೆಗೆ, ಕೊಡುವುದೇನು ಇಲ್ಲ, ಅವರಿಗೆ ಮನವಿ ಮಾಡುತ್ತಿದ್ದೇವೆ, ಅವರು ತಿಳಿದುಕೊಳ್ಳಬೇಕು. ಈ ವಿಚಾರವಾಗಿ ಚರ್ಚೆಗೆ ಆಹ್ವಾನಿಸಿದರೆ ನಾವು ಸಿದ್ಧರಿದ್ದೇವೆ. ನಾವು ಹಿಂದೂ ಧರ್ಮದ ಭಾಗವಲ್ಲ ಎಂದು ಮಹಾಸಭೆಯವರು ಈಗಾಗಲೇ ಹೇಳಿದ್ದಾರೆ. ಅದರೆ, ವಚನಾನಂದ ಶ್ರೀಗಳು ಗೊಂದಲ ಸೃಷ್ಟಿ ಮಾಡಲು ಹೇಳುತ್ತಿದ್ದಾರೆ ಎಂದು ಅನಿಸುತ್ತಿದೆ. ಈ ರೀತಿಯಾಗಿ ಮಾತನಾಡಿ ಎಂಬ ಒತ್ತಡ ಇರಬಹುದು, ಅದಕ್ಕೆ ಈ ರೀತಿ ಅವರು ಮಾತನಾಡುತ್ತಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜನಗಣತಿಯಲ್ಲಿ ಲಿಂಗಾಯತ ಎಂದೋ, ಪಂಚಮಸಾಲಿ ಎಂದು ಬರೆಸಲು ತೀರ್ಮಾನಿಸಬೇಕಿದೆ: ವಚನಾನಂದ ಶ್ರೀ - Vachanananda Shri