ETV Bharat / state

ಜೀವ ಬೆದರಿಕೆ ಆರೋಪ: ಶಾಸಕ ಅರವಿಂದ ಬೆಲ್ಲದ, ಉಪಮೇಯರ್ ಸತೀಶ್ ಹಾನಗಲ್ ವಿರುದ್ಧ ದೂರು ದಾಖಲು - Complaint against MLA and Deputy Mayor - COMPLAINT AGAINST MLA AND DEPUTY MAYOR

4ನೇ ಎಸಿಜಿ ನ್ಯಾಯಾಲಯದ ಸೂಚನೆ ಮೇರೆಗೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹಾಗೂ ಉಪಮೇಯರ್ ಸತೀಶ್ ಹಾನಗಲ್ ವಿರುದ್ಧ ಪ್ರಕರಣ ದಾಖಲಾಗಿದೆ.

MLA Arvinda Bellada, Deputy Mayor Satish Hanagal
ಶಾಸಕ ಅರವಿಂದ ಬೆಲ್ಲದ, ಉಪಮೇಯರ್ ಸತೀಶ್ ಹಾನಗಲ್ (ETV Bharat)
author img

By ETV Bharat Karnataka Team

Published : Jun 10, 2024, 11:28 AM IST

ಹುಬ್ಬಳ್ಳಿ: ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹಾಗೂ ಹು-ಧಾ ಮಹಾನಗರ ಪಾಲಿಕೆ ಉಪಮೇಯರ್ ಸತೀಶ್ ಹಾನಗಲ್ ಸೇರಿ ಮೂವರ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2023 ಡಿ. 30ರಂದು ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆ ಸಭೆ ಜರುಗಿತ್ತು. ಅಂದು, ಆನಂದನಗರದ ಕೃಷ್ಣಾ ಕಾಲೊನಿಗೆ ಸಂಬಂಧಿಸಿದ ಖಾಲಿ ಜಾಗವನ್ನು, ಕೊಳಚೆ ನಿರ್ಮೂಲನೆ ಮಂಡಳಿಯವರು ಅಕ್ರಮವಾಗಿ ಬೇರೆವರಿಗೆ ಹಕ್ಕುಪತ್ರ ವಿತರಣೆ ಮಾಡಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಕುರಿತಂತೆ ಪರಶುರಾಮ ದಾವಣಗೆರೆ ಎಂಬುವವರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಹಿಂಪಡೆಯುವಂತೆ ಪರಶುರಾಮ ದಾವಣಗೆರೆ ಎಂಬವರಿಗೆ ಶಾಸಕ ಅರವಿಂದ್ ಬೆಲ್ಲದ್ ಹಾಗೂ ಉಪಮೇಯರ್ ಸತೀಶ್ ಹಾನಗಲ್ ಕುಮ್ಮಕ್ಕಿನಿಂದ ಲಕ್ಷ್ಮಣ್ ಭೋವಿ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರವಾದ ಆರೋಪ ಕೇಳಿ ಬಂದಿದೆ.

ಆರೋಪಿತರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು 4ನೇ ಎಸಿಜಿ ನ್ಯಾಯಾಲಯದಲ್ಲಿ ಪರಶುರಾಮ ಅವರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಳ್ಳುವಂತೆ ನ್ಯಾಯಾಲಯ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಮಂಗಳೂರು: ಕೆನಡಾ ವೀಸಾ ಮಾಡಿಕೊಡುವುದಾಗಿ ನಂಬಿಸಿ ₹15 ಲಕ್ಷ ವಂಚನೆ - Visa Fraud Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.