ETV Bharat / state

ವಾಲ್ಮೀಕಿ ಹಗರಣದಲ್ಲಿ ಸಿಎಂಗೂ ಎಸ್ಐಟಿ ನೋಟಿಸ್ ನೀಡಲಿ: ಪ್ರಲ್ಹಾದ್​ ಜೋಶಿ - Union Minister Pralhad Joshi

ಅಷ್ಟು ದೊಡ್ಡ ಮೊತ್ತ ಸಿಎಂ ಅವರ ಗಮನಕ್ಕೆ ಬಾರದೆ ವರ್ಗಾವಣೆ ಆಗಲು ಸಾಧ್ಯವೇ ಇಲ್ಲ. ಹಾಗಾಗಿ ಸಿಎಂ ವಿರುದ್ಧ ನೇರ ತನಿಖೆ ನಡೆಯಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಆರೋಪಿಸಿದ್ದಾರೆ.

Union Minister Pralhad Josi
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (ETV Bharat)
author img

By ETV Bharat Karnataka Team

Published : Jul 13, 2024, 6:54 AM IST

Updated : Jul 13, 2024, 9:56 AM IST

ಬೆಂಗಳೂರು: "ರಾಜ್ಯದಲ್ಲಿ ನಡೆದ ಎರಡು ಪ್ರಮುಖ ಹಗರಣಗಳಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರದ ಬಗ್ಗೆ ತನಿಖೆ ಆಗಲೇಬೇಕು. ಸಿಎಂಗೂ ಎಸ್ಐಟಿ ನೋಟಿಸ್ ನೀಡಿ ತನಿಖೆ ನಡೆಸಬೇಕು" ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (ETV Bharat)

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇರ ಪಾತ್ರ ಇದ್ದೇ ಇದೆ" ಎಂದು ಗಂಭೀರ ಆರೋಪ ಮಾಡಿದರು. "ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೇ 187 ಕೋಟಿ ರೂಪಾಯಿಯಷ್ಟು ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಲು ಸಾಧ್ಯವೇ ಇಲ್ಲ" ಎಂದು ಜೋಶಿ ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಹಗರಣದಲ್ಲಿ ಸಿಎಂ ಅವರಿಗೂ SIT ನೋಟಿಸ್ ನೀಡಬೇಕು ಮತ್ತು ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು. ಇನ್ನು, ಮುಡಾ ಹಗರಣದಲ್ಲಿ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿದೆ. ಅವರ ಹಸ್ತಕ್ಷೇಪ, ಭಾಗಿ ಇಲ್ಲದೇ ಇರಲು ಸಾಧ್ಯವಿಲ್ಲ. ಹಾಗಾಗಿ ಇದರಲ್ಲಿ ಸಿಎಂ ವಿರುದ್ಧ ನೇರ ತನಿಖೆ ಆಗಬೇಕು" ಎಂದು ಪ್ರಲ್ಹಾದ ಜೋಶಿ ಒತ್ತಾಯಿಸಿದರು.

ಸಿಎಂ ನೇರ ಹೊಣೆ: "ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ. ಅವರ ಭಾಗಿತ್ವ ಇಲ್ಲದೇ ಈ ಮಟ್ಟದ ಭ್ರಷ್ಟಾಚಾರ ಅಸಾಧ್ಯ. ಅವರಿಗೆ ಗೊತ್ತಿದ್ದೆ ವಂಚನೆ ನಡೆದಿದೆ. ಮುಡಾ ಹಗರಣದಲ್ಲಿ ಸಿಎಂ ನೈತಿಕ ಹೊಣೆ ಹೊರಬೇಕು. ಈ ಎರಡೂ ಬಹು ದೊಡ್ಡ ಹಗರಣಗಳಲ್ಲಿ ಸಿಎಂ ವಿರುದ್ಧ ತನಿಖೆ ಆಗಬೇಕು" ಎಂದು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಇದನ್ನೂ ಓದಿ: ಮುಡಾ ಹಗರಣ ಕೇಸ್​ನಲ್ಲಿ ಬಿಜೆಪಿಯಿಂದ ಕಾನೂನು ಹೋರಾಟ: ಸಿಎಂಗೆ ಎಚ್ಚರಿಕೆ ನೀಡಿದ ಪಲ್ಹಾದ್​ ಜೋಶಿ - Muda scam case

Last Updated : Jul 13, 2024, 9:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.