ಹಾವೇರಿ: ಕುಮಾರಣ್ಣ ಹತಾಶರಾಗಿದ್ದಾರೆ. ದಿನಕ್ಕೊಂದು ಸ್ಟ್ಯಾಂಡ್ ಚೇಂಜ್ ಮಾಡ್ತಿದ್ದಾರೆ. ರೇವಣ್ಣ ಮುಹೂರ್ತ ಇಟ್ಟುಕೊಂಡು ಕ್ಯಾಸೆಟ್ ಬಿಡುಗಡೆ ಮಾಡಲಿ. ನಾನು ಎಲ್ಲದಕ್ಕೂ ರೆಡಿಯಾಗಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ರಾಣೇಬೆನ್ನೂರಿನಲ್ಲಿ ಇಂದು ಮಾತನಾಡಿದ ಅವರು, ಒಂದು ದಿನ ಉಪ್ಪು ತಿಂದವರು ನೀರು ಕುಡೀಲೇಬೇಕು ಅಂತಾರೆ. ಮತ್ತೊಂದಿನ ಅವರ ಫ್ಯಾಮಿಲಿ ಬೇರೆ, ನಮ್ಮ ಫ್ಯಾಮಿಲಿ ಬೇರೆ ಅಂತಾರೆ. ಒಂದಿನ ಕುಟುಂಬದವರಿಗೆ ಟಿಕೆಟ್ ಕೊಡಲ್ಲ ಅಂದ್ರು, ಹಿಂದೆಲ್ಲಾ ಬಿಜೆಪಿಯವರಿಗೆ ಬೈಯ್ದಿದ್ದರು. ಒಂದಿನ ನನ್ನ 420 ಅಂತಾ ಹೇಳ್ತಿದ್ರು. ಅವರು ಕೋಪದಲ್ಲಿದ್ದಾರೆ, ಶಾಂತವಾಗಲಿ. ಆಮೇಲೆ ಚರ್ಚೆ ಮಾಡೋಣ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರನ್ನು ದೇವರಾಜೇಗೌಡ ಭೇಟಿ ಮಾಡಿದ್ದಾರೋ ಅಥವಾ ಇಲ್ಲವೋ ಗೊತ್ತಿಲ್ಲ. ಪೊಲೀಸರು ಮತ್ತೊಂದು ಎಫ್ಐಆರ್ ಹಾಕಿದ್ದಾರೆಂದು ಕೇಳಿದ್ದೀನಿ. ಪೊಲೀಸರ ಹತ್ತಿರ ನಾವ್ಯಾಕೆ ಕೇಳೋಣ. ಮಾಧ್ಯಮದಲ್ಲಿ ಬಂದಿದ್ದನ್ನು ನೋಡಿದ್ದೀವಿ. ನನಗೆ ಉತ್ತರ ಬೇಕಾಗಿರುವುದು ಲೋಕಲ್ ಬಿಜೆಪಿ ಲೀಡರ್ಗಳ ಕಡೆಯಿಂದ. ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಪಾಪ ಕುಮಾರಸ್ವಾಮಿ ಒಬ್ಬರ ಕೈಯಲ್ಲಿ ಯಾಕೆ ಮಾತನಾಡಿಸ್ತೀರಿ?. ನಿಮ್ಮ ಪಾರ್ಟ್ನರ್ ಅಲ್ವಾ ಕುಮಾರಸ್ವಾಮಿ?. ರಾಜಕಾರಣ ಇದು, ರಾಜಕಾರಣ ಅಂದ ಮೇಲೆ ಎಲ್ಲವನ್ನೂ ಬಳಸಿಕೊಳ್ಳೋದೇ ಎಂದರು.
ಕ್ಯಾಸೆಟ್ ವಿಚಾರವಾಗಿ ಮಾತನಾಡಿ, ರೇವಣ್ಣನವರು ಮುಹೂರ್ತ ಇಟ್ಟುಕೊಂಡು ಕ್ಯಾಸೆಟ್ ಬಿಡುಗಡೆ ಮಾಡಲಿ. ನಾನು ಎಲ್ಲದಕ್ಕೂ ರೆಡಿಯಾಗಿದ್ದೇನೆ. ಕ್ಯಾಸೆಟ್ ಬಿಡುಗಡೆ ಮಾಡಲು ಯಾರು ಬೇಡ ಅಂತಾ ಹೇಳಿದ್ದಾರೆ. ಅವರ ತಂದೆ ಹೇಳ್ತಿದ್ರು ಅದ್ಯಾವುದೋ ಒಂಭತ್ತು ವರ್ಷದ ಹೆಣ್ಣು ಮಗಳು ಅಂತಾ. ಅದನ್ನು ಯಾಕೆ ಇನ್ನೂ ರಿಲೀಸ್ ಮಾಡಲಿಲ್ಲ. ಟೈಂ ಫಿಕ್ಸ್ ಮಾಡಲಿ. ಸುಮ್ಮನೆ ಖಾಲಿ ಮಾತನಾಡೋದು ಬೇಡ. ನಾವು ಗಂಡಸರಲ್ಲ, ಅವರೇ ಗಂಡಸರು. ನಮಗ್ಯಾರಿಗೂ ತಾಕತ್ ಇಲ್ಲ, ಅವರಿಗಿರುವ ತಾಕತ್ ನಮಗಿಲ್ಲ ಎಂದು ಡಿಕೆಶಿ ಹೇಳಿದರು.
ಬಾಗಲಕೋಟೆಯಲ್ಲಿ ಡಿಕೆಶಿ ಪ್ರತಿಕ್ರಿಯೆ: ನಗರದಲ್ಲಿ ಮಾತನಾಡಿದ ಡಿಕೆಶಿ, ಹಾಸನ ಪೆನ್ಡ್ರೈವ್ ಪ್ರಕರಣವನ್ನು ಪೊಲೀಸ್ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ಅವ್ರಿಗೆ ನಾವು ಫ್ರೀ ಹ್ಯಾಂಡ್ ಕೊಟ್ಟಿದ್ದೀವಿ. ಕುಮಾರಣ್ಣ ಕೂಡ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ, ಬಿಜೆಪಿಯವರು ಸಹ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ. ಉಪ್ಪು ತಿಂದವರು ನೀರು ಕುಡೀಬೇಕು ಅಂತಾ ಕುಮಾರಣ್ಣ ಹೇಳಿದ್ದಾರೆ ಎಂದರು.
ಮಾಜಿ ಶಾಸಕ ರಾಜುಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಹಳ ಸಂತೋಷ, ನನ್ನ ಆಗಾಗ ಬಿಜೆಪಿಯವ್ರು ಮತ್ತು ದಳದರವರು ನೆನೆಪಿಸಿಕೊಳ್ಳುತ್ತಾರೆ. ಅವ್ರೆಲ್ಲ ನೆನೆಪಿಸಿಕೊಳ್ಳಲೇ ಬೇಕು. ಯಾಕಂದರೆ ನಾನು ಒಂದು ಪಕ್ಷದ ಅಧ್ಯಕ್ಷ. ಕ್ಯಾಪ್ಟನ್ ನೆನಪಿಸಿಕೊಳ್ಳದೇ ಇನ್ಯಾರನ್ನು ನೆನಪಿಸಿಕೊಳ್ತಾರೆ ಎಂದು ವ್ಯಂಗ್ಯವಾಡಿದರು.
ನಾವು ಕೂಡ ಬಿಜೆಪಿಯವರು ಏನೇ ಮಾಡಿದ್ರೂ ಮೋದಿ ಹಾಗೂ ಬಿಜೆಪಿ ನಾಯಕರನ್ನೇ ಅಟ್ಯಾಕ್ ಮಾಡುವುದು. ನಾನು ಮತ್ತು ಸಿದ್ದರಾಮಯ್ಯ ಒಂದು ಪ್ರಶ್ನೆ ಕೇಳ್ತಿದ್ದೇವೆ. ಬಿಜೆಪಿ ಲೀಡರ್ಗಳು ಯಾಕೆ ಮಾತಾಡ್ತಿಲ್ಲ. ಯಾಕೆ ಹೆಣ್ಣುಮಕ್ಕಳಿಗೆ ಸಾಂತ್ವನ ಹೇಳಲು ಹೋಗ್ತಿಲ್ಲ. ಎಲ್ಲಿ ಹೋದ್ರು ಸಿ.ಟಿ.ರವಿ?, ಎಲ್ಲಿ ಹೋದ್ರು ಶೋಭಕ್ಕ?, ಎಲ್ಲಿ ಹೋದ್ರು ಬೊಮ್ಮಾಯಿ?, ಪ್ರಲ್ಹಾದ್ ಜೋಶಿ?. ಯಾಕೆ ಯಾರೂ ಮಾತಾಡ್ತಿಲ್ಲ ಡಿಕೆಶಿ ವ್ಯಂಗ್ಯವಾಡಿದರು.
ಇದನ್ನೂ ಓದಿ: ರಾಜತಾಂತ್ರಿಕ ಪಾಸ್‌ಪೋರ್ಟ್ ಎಂದರೇನು?, ಇದರಿಂದ ಸಂಸದರಿಗೆ ಸಿಗುವ ಸವಲತ್ತುಗಳೇನು? - Diplomatic Passport