ETV Bharat / state

ಮಂಗಳೂರು ಅಲೋಶಿಯಸ್​ ಕಾಲೇಜಿನ ಉಪನ್ಯಾಸಕಿ ಮೆಟ್ಟಿಲಿನಿಂದ ಬಿದ್ದು ಸಾವು, ಅಂಗಾಂಗ ದಾನ - ORGAN DONATION

ಮಂಗಳೂರಿನ ಅಲೋಶಿಯಸ್​ ಪದವಿ ಕಾಲೇಜಿನ ಉಪನ್ಯಾಸಕಿ ಕಾಲೇಜು ಮೆಟ್ಟಿಲಿನಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದು, ಅವರ ಅಂಗಾಂಗಗಳನ್ನು ದಾನ ಮಾಡಲಾಗಿದೆ.

ಮೃತ ಉಪನ್ಯಾಸಕಿ ಗ್ಲೋರಿಯಾ ಆಶಾ ರೋಡ್ರಿಗಸ್
ಉಪನ್ಯಾಸಕಿ ಗ್ಲೋರಿಯಾ ಆಶಾ ರೋಡ್ರಿಗಸ್ (ETV Bharat)
author img

By ETV Bharat Karnataka Team

Published : Nov 14, 2024, 11:48 AM IST

ಮಂಗಳೂರು: ನಗರದ ಅಲೋಶಿಯಸ್​ ಪದವಿ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ಆಶಾ ರೋಡ್ರಿಗಸ್ (23) ಅವರು ಕಾಲೇಜು ಮೆಟ್ಟಿಲಿನಿಂದ ಆಕಸ್ಮಿಕವಾಗಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಬಜ್ಪೆ ಪಡು ಪೆರಾರ ನಿವಾಸಿ ಗ್ಲೋರಿಯಾ ಆಶಾ ರೋಡ್ರಿಗಸ್​ ಒಂದು ವರ್ಷದ ಹಿಂದಷ್ಟೇ ಅಲೋಶಿಯಸ್ ಕಾಲೇಜಿನಲ್ಲಿಯೇ ಸ್ನಾತಕೋತ್ತರ ಪದವಿ ಪಡೆದಿದ್ದರು. ಬಳಿಕ ಇದೇ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ಕಾಮರ್ಸ್ ವಿಷಯದಲ್ಲಿ ಉಪನ್ಯಾಸಕಿಯಾಗಿ ಸೇರ್ಪಡೆಗೊಂಡಿದ್ದರು. ನ.8ರಂದು ಕಾಲೇಜಿನಲ್ಲಿ ಮೆಟ್ಟಲು ಇಳಿಯುತ್ತಿದ್ದಾಗ ತಲೆಸುತ್ತು ಬಂದು ಬಿದ್ದ ಅವರ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಕಂಕನಾಡಿ ಫಾದರ್​ ಮುಲ್ಲರ್ ಆಸ್ಪತ್ರೆಗೆ ಸೇರಿಸಲಾಗಿತ್ತು.

ಕೋಮಾ ಸ್ಥಿತಿಯಲ್ಲಿದ್ದ ಗ್ಲೋರಿಯಾ, ನ.13ರ ಬುಧವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಈ ದುಃಖದ ನಡುವೆಯೂ ಕುಟುಂಬಸ್ಥರು ಅವರ ದೇಹದ ಅಂಗಾಂಗ ದಾನ ಮಾಡಿದ್ದಾರೆ. ಗ್ಲೋರಿಯಾ ಅಂತ್ಯಕ್ರಿಯೆ ನ.14ರ ಮಧ್ಯಾಹ್ನ ಬಜ್ಪೆಯ ಸೈಂಟ್ ಜೋಸೆಫ್ ಚರ್ಚ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ: ತಂದೆಯ ಮೃತದೇಹವನ್ನು ವೈದ್ಯ ಮಗ ಛೇದಿಸಿದ ದಾಖಲೆಗೆ 14 ವರ್ಷ: ದೇಹದಾನಕ್ಕೆ ಪ್ರೇರಣೆಯಾದ ಅಪರೂಪದ ಘಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.