ದಾವಣಗೆರೆ: ಸರ್ಕಾರಿ ಶಾಲೆಯಲ್ಲಿ ಮುಸಿಯಾಗಳ (ಕೋತಿ)ಕಾಟ ಹೆಚ್ಚಾಗಿದೆ. ಶಾಲೆಯಲ್ಲಿದ್ದ ನಾಲ್ವರು ವಿದ್ಯಾರ್ಥಿಗಳ ಮೇಲೆ ಈ ಕೋತಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಬಳಿ ಇರುವ ಹೊಸೂರು ಉರ್ದು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಮಧ್ಯಾಹ್ನದ ಬಿಸಿಯೂಟದ ವೇಳೆ ಆಹಾರ ಅರಸಿ ಶಾಲೆಗೆ ನುಗ್ಗುವ ಕೋತಿ ಮೊದಲಿಗೆ ಇಲ್ಲಿಯ ಮಕ್ಕಳು ಸಿಬ್ಬಂದಿಯ ಜೊತೆ ಸ್ನೇಹಿತನಂತೆ ವರ್ತಿಸಿ ಇದ್ದಕ್ಕಿದ್ದಂತೆ ಉಗ್ರ ಸ್ವರೂಪಿಯಾಗಿ ದಾಳಿ ಮಾಡುತ್ತದೆ ಎಂದು ಶಾಲೆಯ ಸಿಬ್ಬಂದಿ ಹೇಳಿದ್ದಾರೆ. ಸಂತೆಬೆನ್ನೂರ ಸಮೀಪದ ಹೊಸೂರಿನ ಸರ್ಕಾರಿ ಉರ್ದು ಶಾಲೆಯ ಮಕ್ಕಳು ಹಾಗು ಸಿಬ್ಬಂದಿ ಭಯದಲ್ಲೇ ಶಾಲೆಗೆ ಆಗಮಿಸುತ್ತಿದ್ದಾರೆ.
ಈ ಮುಸಿಯಾನ ಕಾಟ ಕಳೆದ ಮೂರು ತಿಂಗಳಿಂದ ವಿಪರೀತವಾಗಿತ್ತು. ಇದರಿಂದ ಶಾಲೆಯ ವಿದ್ಯಾರ್ಥಿಗಳೇ ಸೇರಿ ಒಂದು ಬಾರಿ ಈ ಮುಸಿಯಾಅನ್ನು ಹಿಡಿದು ಸೂಳೆಕೆರೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು. ಆದರೆ ಚಾಲಾಕಿ ಮುಸಿಯಾ ಮತ್ತೆ ಶಾಲೆಗೆ ಬಂದು ಉಪಟಳ ಶುರು ಮಾಡಿದೆ. ಶಾಲೆಗೆ ಬರುತ್ತಿದ್ದಂತೆ ಶಿಕ್ಷಕರ ಕುರ್ಚಿ ಮೇಲೆ ಕುಳಿತುಕೊಳ್ಳುವುದು. ನಂತರ ದಾಳಿ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.
ಇವುಗಳ ದಾಳಿಯಿಂದ ಬೇಸತ್ತ ಶಾಲಾ ಶಿಕ್ಷಕರು ಹಾಗೂ ಪಾಲಕರು ಕೋತಿ ಹಿಡಿದು ಅರಣ್ಯಪ್ರದೇಶಕ್ಕೆ ಬಿಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಶ್ವವಿದ್ಯಾಲಯ, ಮನಸೂರು ಗ್ರಾಮದ ಬಳಿ ಚಿರತೆ ಪ್ರತ್ಯಕ್ಷ, ಸ್ಥಳಕ್ಕೆ ಡಿಸಿ ಭೇಟಿ - Leopard Found