ETV Bharat / state

ಉಡುಪಿ : ಕೃಷ್ಣ ಮಠದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ - LAKSHA DEEPOTSAVA IN KRISHNA MATH

ಉಡುಪಿಯ ಕೃಷ್ಣ ಮಠದಲ್ಲಿ ಲಕ್ಷ ದೀಪೋತ್ಸವ ಆರಂಭವಾಗಿದೆ. ನಾಲ್ಕು ದಿನಗಳ ಕಾಲ ಕೃಷ್ಣನಗರಿ ಬೆಳಕಿನಲ್ಲಿ ಜಗಮಗಿಸಲಿದೆ.

Rathotsva
ರಥೋತ್ಸವ (ETV Bharat)
author img

By ETV Bharat Karnataka Team

Published : Nov 14, 2024, 4:10 PM IST

Updated : Nov 14, 2024, 4:39 PM IST

ಉಡುಪಿ : ಕೃಷ್ಣಮಠದ ರಥಬೀದಿಯಲ್ಲಿ ಬುಧವಾರ ಸಂಜೆ ರಥೋತ್ಸವದ ಮೂಲಕ ಮಳೆಗಾಲದ ನಂತರದ ನಿತ್ಯೋತ್ಸವಗಳಿಗೆ ಚಾಲನೆ ನೀಡಲಾಯಿತು. ಈ ಹಿನ್ನೆಲೆ 4 ದಿನಗಳ ಕಾಲ ನಡೆಯುವ ಲಕ್ಷ ದೀಪೋತ್ಸವವೂ ಆರಂಭವಾಯಿತು.

ಇದಕ್ಕೂ ಮುನ್ನ ಮಧ್ಯಾಹ್ನ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯರೊಂದಿಗೆ ಸಂಪ್ರದಾಯದಂತೆ ರಥಬೀದಿಯಲ್ಲಿ ಅಟ್ಟಳಿಗೆಯ ಮೇಲೆ ಹಣತೆಗಳನ್ನು ಇಟ್ಟು ಲಕ್ಷದೀಪೋತ್ಸವಕ್ಕೆ ಮುಹೂರ್ತ ನಡೆಸಿದರು.

ಕೃಷ್ಣ ಮಠದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ (ETV Bharat)

ಅದ್ಧೂರಿ ತೆಪ್ಪೋತ್ಸವ; ಉಡುಪಿಯ ಶ್ರೀ ಕೃಷ್ಣ ಮಠದ ಮಧ್ವ ಸರೋವರದಲ್ಲಿ ಉತ್ಥಾನ ದ್ವಾದಶಿಯ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರು ಕ್ಷೀರಾಬ್ಧಿಯನ್ನು ಮಾಡಿ, ಅರ್ಘ್ಯವನ್ನು ನೀಡಿದರು. ನಂತರ ಲಕ್ಷದೀಪೋತ್ಸವದ ಅಂಗವಾಗಿ ಮಧ್ವ ಸರೋವರದಲ್ಲಿ ಪಾರ್ಥ ಸಾರಥಿ ರಥದ ಮಾದರಿಯ ತೆಪ್ಪದಲ್ಲಿ ಆಕರ್ಷಕ ತೆಪ್ಪದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರನ್ನಿಟ್ಟು ತೆಪ್ಪೋತ್ಸವ ನೆರವೇರಿಸಲಾಯಿತು.

ಮಧ್ವ ಮಂಟಪದಲ್ಲಿ ತೊಟ್ಟಿಲು ಪೂಜೆ; ತದನಂತರ ಅಲಂಕೃತ ರಥಗಳಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ಹಾಗೂ ಅನಂತೇಶ್ವರ, ಚಂದ್ರೇಶ್ವರ ದೇವರನ್ನಿಟ್ಟು ರಥಬೀದಿಯ ಸುತ್ತಲೂ ವೈವಿಧ್ಯಮಯ ಲಕ್ಷ ದೀಪಗಳ ನಡುವೆ, ನಾದಸ್ವರ, ಪಂಚ ವಾದ್ಯ, ಚಂಡೆ ವಾದ್ಯಗಳೊಂದಿಗೆ ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ತುಳಸಿ ಸಂಕೀರ್ಥನೆಯೊಂದಿಗೆ ರಥೋತ್ಸವವು ಅತ್ಯಂತ ವೈಭವದಿಂದ ಜರುಗಿತು. ನಂತರ ಮಧ್ವ ಮಂಟಪದಲ್ಲಿ ತೊಟ್ಟಿಲು ಪೂಜೆಯು ನಡೆಯಿತು.

ಇದನ್ನೂ ಓದಿ : ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ಲಕ್ಷದೀಪೋತ್ಸವ ವೈಭವ

Last Updated : Nov 14, 2024, 4:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.