ETV Bharat / state

ಬೆಸ್ಟ್ ಬ್ರ್ಯಾಂಡಿಂಗ್​, ಕಂಟೆಂಟ್, ಸೇಫ್ಟಿ: KSRTC ಮುಡಿಗೇರಿದ 16 ರಾಷ್ಟ್ರಮಟ್ಟದ ಪ್ರಶಸ್ತಿಗಳು - KSRTC won National Level Awards

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಲವು ವಿಭಾಗಗಳಲ್ಲಿ ರಾಷ್ಟ್ರದ ಮಟ್ಟದ 16 ಪ್ರಶಸ್ತಿಗಳನ್ನು ಪಡೆದಿದೆ.

KSRTC ಮುಡಿಗೇರಿದ 16 ರಾಷ್ಟ್ರಮಟ್ಟದ ಪ್ರಶಸ್ತಿಗಳು
KSRTC ಮುಡಿಗೇರಿದ 16 ರಾಷ್ಟ್ರಮಟ್ಟದ ಪ್ರಶಸ್ತಿಗಳು (ETV Bharat)
author img

By ETV Bharat Karnataka Team

Published : Aug 30, 2024, 8:00 PM IST

ಬೆಂಗಳೂರು: ಹೊಸ ಹೊಸ ಬ್ರ್ಯಾಂಡ್​ಗಳ ಪರಿಚಯದ ಮೂಲಕ ಗಮನ ಸೆಳೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​ಟಿಸಿ)ಕ್ಕೆ ರಾಷ್ಟ್ರ ಮಟ್ಟಡ 16 ಪ್ರಶಸ್ತಿಗಳು ಒಲಿದಿವೆ. 8 ವಿಡಿಯೋ -ವಿಐಡಿಇಎ, 5 ಎಮ್ಕ್ಯೂಬ್ -ಎಂಕ್ಯೂಬಿಇ ಮತ್ತು 2 ಸ್ಕಾಚ್ ಆರ್ಡರ್ ಆಫ್ ಮೆರಿಟ್ ಮತ್ತು 1 ಸ್ಕಾಚ್ ಪ್ರಶಸ್ತಿ ಸೇರಿ ಒಟ್ಟು 16 ಪುರಸ್ಕಾರಗಳು ಸಾರಿಗೆ ಸಂಸ್ಥೆಗೆ ಲಭಿಸಿವೆ.

ಹಲವು ವಿಭಾಗಗಳಲ್ಲಿ ಪ್ರಶಸ್ತಿ ಬಂದಿರುವ ಕುರಿತು ಕೆಎಸ್ಆರ್​ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಅಧಿಕೃತ ಮಾಹಿತಿ ನೀಡಿದೆ.

ಸಾರಿಗೆ ಸಂಸ್ಥೆಗೆ ಒಲಿದ ಪ್ರಶಸ್ತಿಗಳ ಮಾಹಿತಿ ಹೀಗಿದೆ:

1. ಪಲ್ಲಕ್ಕಿ ಬ್ರ್ಯಾಂಡಿಂಗ್​ಗಾಗಿ ಪ್ರಾಡಕ್ಟ್ ಪ್ಲೇಸ್ಮೆಂಟ್​ನಲ್ಲಿ ಅತ್ಯುತ್ತಮ ವಿಡಿಯೋ ಕಂಟೆಂಟ್.
2. ಅಶ್ವಮೇಧ ಬ್ರ್ಯಾಂಡಿಂಗ್​ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್​ಲೈನ್​) ನಲ್ಲಿ ಅತ್ಯುತ್ತಮ ವಿಡಿಯೋ ಕಂಟೆಂಟ್.

3. ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವಿಡಿಯೋ ಕಂಟೆಂಟ್.

4. ಅಶ್ವಮೇಧ ಬ್ರ್ಯಾಂಡಿಂಗ್​ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವಿಡಿಯೋ ಕಂಟೆಂಟ್.

5. ಪಲ್ಲಕ್ಕಿ ಬ್ರ್ಯಾಂಡಿಂಗ್​ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್ ಕ್ಯಾಂಪೇನ್​ನಲ್ಲಿ ಅತ್ಯುತ್ತಮ ವಿಡಿಯೋ ಕಂಟೆಂಟ್.

6. ಅಂಬಾರಿ ಉತ್ಸವದ ಬ್ರ್ಯಾಂಡಿಂಗ್​ಗಾಗಿ ಇನ್​ಸ್ಟಾಗ್ರಾಮ್​ ಕ್ಯಾಂಪೇನ್​ನಲ್ಲಿ ಅತ್ಯುತ್ತಮ ವಿಡಿಯೋ ಕಂಟೆಂಟ್.
7. ಅಶ್ವಮೇಧ ಬ್ರ್ಯಾಂಡಿಂಗ್​ಗಾಗಿ ಮೊಬೈಲ್ ಮಾರ್ಕೆಟಿಂಗ್ ಕ್ಯಾಂಪೇನ್ - ಒಟ್ಟಾರೆ ಅತ್ಯುತ್ತಮ ವಿಡಿಯೋ ಕಂಟೆಂಟ್.
8. ಶ್ರೇಷ್ಠ ವಿಡಿಯೋ ಕಂಟೆಂಟ್ ಬ್ರಾಂಡ್ಸ್ ಎಂಟರ್ಪ್ರೈಸ್ - ಕೆಎಸ್​ಆರ್​ಟಿಸಿ.

ಎಂ ಕ್ಯೂಬ್ ಪ್ರಶಸ್ತಿಗಳು:
1. ಬ್ರ್ಯಾಂಡಿಂಗ್​ಗಾಗಿ ಶ್ರೇಷ್ಠ ಪಿಆರ್ ಕ್ಯಾಂಪೇನ್.
2. ಬ್ರ್ಯಾಂಡಿಂಗ್​ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್​ಲೈನ್​).
3. ಪ್ರವಾಸ ಮತ್ತು ಪ್ರಯಾಣದ ಶ್ರೇಷ್ಠ ಎಟಿಎಲ್ ಕ್ಯಾಂಪೇನ್.
4. ಶಕ್ತಿ ಯೋಜನೆಗಾಗಿ ಶ್ರೇಷ್ಠ ಬ್ರ್ಯಾಂಡ್​ ಕಂಟೆಂಟ್.
5. ಬ್ರ್ಯಾಂಡಿಂಗ್​ಗಾಗಿ ಶ್ರೇಷ್ಠ ಆನ್​ಲೈನ್​ ಪಿಆರ್ ಕ್ಯಾಂಪೇನ್

ನಿಗಮವು ಸಾರಿಗೆ ಸಂಜೀವಿನಿ - ನೌಕರರ ಹೃದಯ ರೋಗ ತಪಾಸಣೆಗಾಗಿ ಮತ್ತು ರಸ್ತೆ ಸುರಕ್ಷತೆ ಉಪಕ್ರಮಗಳಿಗಾಗಿ 2 ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಮತ್ತು 1 ಸ್ಕೋಚ್ ಪ್ರಶಸ್ತಿಯನ್ನು ಪಡೆದಿರುತ್ತದೆ ಎಂದು ಕೆಎಸ್​ಆರ್​ಟಿಸಿ ಪ್ರಕಟಣೆ ಮೂಲಕ ತಿಳಿಸಿದೆ‌.

ವಿಐಡಿಇಎ ಪ್ರಶಸ್ತಿ ಮತ್ತು ಎಂಕ್ಯೂಯುಬಿಇ ಪ್ರಶಸ್ತಿಗಳನ್ನು ಗುರುಗಾಂವ್​ನಲ್ಲಿ ಪ್ರದಾನ ಮಾಡಲಾಯಿತು. ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಆನ್​ಲೈನ್​ನಲ್ಲಿ ಪ್ರದಾನ ಮಾಡಲಾಯಿತು. ಸ್ಕೋಚ್ ಪ್ರಶಸ್ತಿ ಸಮಾರಂಭವು 2024 ಸೆಪ್ಟೆಂಬರ್ 21ರಂದು ನವದೆಹಲಿಯಲ್ಲಿ ನಡೆಯಲಿದೆ ಎಂದು ನಿಗಮ ತಿಳಿಸಿದೆ.

ಇದನ್ನೂ ಓದಿ: ಮಂಡ್ಯ: ಬಸ್​ಗೆ ಕಲ್ಲೆಸೆದ ಯುವಕರು, ಗಾಜು ಪುಡಿ ಪುಡಿ - STONE PELTING ON KSRTC BUS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.