ಮಂಗಳೂರು: ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ವತಿಯಿಂದ ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆದಿದ್ದ 'ನವರಾತ್ರಿ ನವದುರ್ಗೆಯರ ದರ್ಶನ' ಸೇರಿದಂತೆ ಟೂರ್ ಪ್ಯಾಕೇಜ್ಗಳು ಮತ್ತೆ ಬಂದಿವೆ. ದಸರಾ ಪ್ರಯುಕ್ತ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕಾಗಿ ಅಕ್ಟೋಬರ್ 3ರಿಂದ 12ರ ವರೆಗೆ ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು, ಮಂಗಳೂರು-ಮುರುಡೇಶ್ವರ ನಡುವೆ ವಿಶೇಷ ಪ್ಯಾಕೇಜ್ ಕಲ್ಪಿಸಲಾಗುತ್ತಿದೆ.
ಮಂಗಳೂರು ದಸರಾ ನವದುರ್ಗಾ ದರ್ಶನ ಪ್ಯಾಕೇಜ್: ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಟು ಮಂಗಳಾದೇವಿ ದೇವಸ್ಥಾನ-ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ-ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ-ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ-(ಮಧ್ಯಾಹ್ನದ ಊಟ)-ಸಸಿಹಿತ್ಲು ಭಗವತಿ ದೇವಸ್ಥಾನ ಹಾಗೂ ಬೀಚ್-ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ-ಉರ್ವ ಮಾರಿಯಮ್ಮ ದೇವಸ್ಥಾನ (ಸಂಜೆ ಉಪಹಾರ)-ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಮೂಲಕ ನವದುರ್ಗಾ ದರ್ಶನದ ಬಸ್ ರಾತ್ರಿ 8ಗಂಟೆಗೆ ಮಂಗಳೂರು ನಿಲ್ದಾಣಕ್ಕೆ ಹಿಂದಿರುಗಲಿದೆ. ಪ್ರಯಾಣ ದರವು (ಊಟ, ಉಪಹಾರ ಹೊರತುಪಡಿಸಿ) ವಯಸ್ಕರಿಗೆ 400 ರೂ. ಹಾಗೂ ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) 300 ರೂ. ಇರಲಿದೆ.
ಮಡಿಕೇರಿ ಟೂರ್ ಪ್ಯಾಕೇಜ್: ಈ ಬಸ್ ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮಡಿಕೇರಿ-ರಾಜಾಸೀಟ್ -ಅಬ್ಬಿಫಾಲ್ಸ್-ನಿಸರ್ಗಧಾಮ ಹಾಗೂ ಗೋಲ್ಡನ್ ಟೆಂಪಲ್ ಪ್ರವಾಸ ಕೈಗೊಂಡು ರಾತ್ರಿ 9 ಗಂಟೆಗೆ ಮಂಗಳೂರು ನಿಲ್ದಾಣಕ್ಕೆ ಮರಳಲಿದೆ. ಪ್ರಯಾಣದ ದರವನ್ನು ವಯಸ್ಕರಿಗೆ 500 ರೂ. ಹಾಗೂ ಮಕ್ಕಳಿಗೆ 400 ರೂ. ನಿಗದಿಪಡಿಸಲಾಗಿದೆ.
ಮಂಗಳೂರು-ಕೊಲ್ಲೂರು ಟೂರ್ ಪ್ಯಾಕೇಜ್: ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಟು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ-ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ)-ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಗಳ ಪ್ರವಾಸ ಕೈಗೊಂಡು ರಾತ್ರಿ 7 ಗಂಟೆಗೆ ಮಂಗಳೂರು ನಿಲ್ದಾಣಕ್ಕೆ ಹಿಂದಿರುಗಲಿದೆ. ಪ್ರಯಾಣದ ದರವು ವಯಸ್ಕರಿಗೆ 500 ರೂ. ಹಾಗೂ ಮಕ್ಕಳಿಗೆ 400 ರೂ. ನಿಗದಿಯಾಗಿದೆ.
ಮಂಗಳೂರು-ಮುರುಡೇಶ್ವರ ಟೂರ್ ಪ್ಯಾಕೇಜ್: ಈ ಬಸ್ ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮುರುಡೇಶ್ವರ ದೇವಸ್ಥಾನ-ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಭಾಶಿ-ಆನೆಗುಡ್ಡೆ ಗಣಪತಿ ದೇವಸ್ಥಾನ ಹಾಗೂ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಗಳ ಪ್ರವಾಸ ಕೈಗೊಂಡು ರಾತ್ರಿ 7 ಗಂಟೆಗೆ ಮಂಗಳೂರು ನಿಲ್ದಾಣಕ್ಕೆ ಮರಳಲಿದೆ. ವಯಸ್ಕರಿಗೆ 550 ರೂ. ಹಾಗೂ ಮಕ್ಕಳಿಗೆ 450 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಈ ಮೇಲಿನ ಸಾರಿಗೆಗಳಿಗೆ https://www.ksrtc.in ನಲ್ಲಿ ಮುಂಗಡ ಆಸನ ಕಾಯ್ದಿರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 7760990702, 7760990711, ಮಂಗಳೂರು-1ನೇ ಘಟಕ ವ್ಯವಸ್ಥಾಪಕರು, ದೂರವಾಣಿ ಸಂಖ್ಯೆ: 7760990713, ಮಂಗಳೂರು-3ನೇ ಘಟಕ ವ್ಯವಸ್ಥಾಪಕರು, ದೂರವಾಣಿ ಸಂಖ್ಯೆ: 7760990723, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್, ದೂರವಾಣಿ ಸಂಖ್ಯೆ: 9663211553, ಮಂಗಳೂರು ಬಸ್ ನಿಲ್ದಾಣ, ದೂರವಾಣಿ ಸಂಖ್ಯೆ: 7760990720 ಸಂಪರ್ಕಿಸುವಂತೆ ಕೆಎಸ್ಆರ್ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ 'ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆ'ಯಡಿ ವಸತಿ ಸೌಲಭ್ಯ: ಎಲ್ಲೆಲ್ಲಿ ಜಾರಿ? - CM Multistorey Housing Scheme