ETV Bharat / state

ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ: ಕೆಎಸ್ಎಲ್​ಯು ಕಾರ್ಯದರ್ಶಿ ಕಳವಳ - KSLU

ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ ಪದಾರ್ಥಗಳನ್ನು ತಿನ್ನಲು ಪ್ರಯತ್ನಿಸಿದಾಗ, ಅದು ಕೆಟ್ಟಿರುವುದು ಗಮನಕ್ಕೆ ಬಂತು. ಅದರ ಮಾದರಿ ಸಂಗ್ರಹಿಸಿದ್ದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಕೆಎಸ್ಎಲ್​ಯುನ ಸದಸ್ಯ ಕಾರ್ಯದರ್ಶಿ ಎಂ.ಎಲ್.ರಘುನಾಥ್ ತಿಳಿಸಿದ್ದಾರೆ.

M.L.Raghunath
ಎಂ.ಎಲ್.ರಘುನಾಥ್ (ETV Bharat)
author img

By ETV Bharat Karnataka Team

Published : Jun 15, 2024, 2:15 PM IST

ಕೆಎಸ್ಎಲ್​ಯು ಕಾರ್ಯದರ್ಶಿ ಕಳವಳ (ETV Bharat)

ಬೆಂಗಳೂರು: ರಾಜ್ಯದ ಅಂಗನವಾಡಿಗಳಲ್ಲಿ ಮಕ್ಕಳಿಗಾಗಿ ಪೂರೈಕೆ ಮಾಡುತ್ತಿರುವ ಆಹಾರ ಪದಾರ್ಥಗಳು ಅತ್ಯಂತ ಕಳಪೆ‌ ಗುಣಮಟ್ಟದ್ದಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್ಎಲ್​ಯು)ಸದಸ್ಯ ಕಾರ್ಯದರ್ಶಿ ಎಂ.ಎಲ್.ರಘುನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದ ಕೆಎಸ್ಎಲ್​ಯು ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿಗಳಲ್ಲಿ ಅನ್ನ ಸಾಂಬರ್ ಹೊರತುಪಡಿಸಿ ಪ್ಯಾಕೆಟ್ ಗಳಲ್ಲಿ ಪೂರೈಕೆ ಮಾಡುವ ಕಿಚಡಿ, ಉಪ್ಪಿಟ್ಟು ಮುಂತಾದ ಆಹಾರ ಪದಾರ್ಥಗಳನ್ನು ತೀರ ಕಳಪೆ ಗುಣಮಟ್ಟದಿಂದ ಕೂಡಿದೆ. ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ ಪದಾರ್ಥಗಳನ್ನು ತಿನ್ನಲು ಪ್ರಯತ್ನಿಸಿದಾಗ, ಅದರ ಕೆಟ್ಟಿರುವುದು ಗಮನಕ್ಕೆ ಬಂತು. ಅದರ ಮಾದರಿ ಸಂಗ್ರಹಿಸಿದ್ದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ವರದಿರಾಗಿ ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಅಲ್ಲದೇ, ಸರ್ಕಾರದಿಂದ ಆಹಾರ ಪದಾರ್ಥಗಳನ್ನು ಪೂರೈಕೆ ಆಗುತ್ತಿರುವ ಅಂಗನವಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ನಿಲಯಗಳು, ಸರ್ಕಾರದ ಆಸ್ಪತ್ರೆಗ ಸೇರಿದಂತೆ ಇನ್ನಿತರೆಡೆಗಳಿಗೆ ಖುದ್ದು ಭೇಟಿ ನೀಡಿ ಗುಣಮಟ್ಟ ಪರಿಶೀಲನೆ ಮಾಲಾಗುತ್ತಿದೆ ಎಂದು ಅವರು ವಿವರಿಸಿದರು.

ಅಂಗನವಾಡಿಗಳಲ್ಲಿ ಮೂಲ ಸೌಲಭ್ಯ ಕೊರತೆ: ರಾಜ್ಯದಲ್ಲಿ ಅಂಗನವಾಡಿ ಸ್ಥಿತಿ ಹದಗೆಟ್ಟಿದ್ದು, ಮೂಲಸೌಕರ್ಯ ಸೇರಿದಂತೆ ಕುಡಿಯುವ ನೀರು, ಕೂರಲು ಸರಿಯಾದ ಸ್ಥಳಾವಕಾಶಗಳಿಲ್ಲದೆ, ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚಿಗೆ ನಗರದ ಸರಬಂಡೆ ಪಾಳ್ಯ, ಹರಿ ಕಾಲೋನಿ-1 ಮತ್ತು 2, ಯಾರಬ್ ನಗರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿ ಪರಿಶೀಲಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಅಂಗನವಾಡಿಗಳಲ್ಲಿ ಮಕ್ಕಳಿಗಾಗಿ ಸರ್ಕಾರ ಒದಗಿಸಿರುವ ಆಟದ ವಸ್ತುಗಳ ಬಳಕೆ ಮಾಡಿರಲಿಲ್ಲ. ನಿಯಮಗಳ ಪ್ರಕಾರ, ಮೇಲ್ವಿಚಾರಕರು ವಾರಕ್ಕೆ ಕನಿಷ್ಠ ಎರಡು ಬಾರಿ ಭೇಟಿ ನೀಡಿ ಪರಿಶೀಲಿಸಿ ಬೇಕು. ನಾಮಕೇವಾಸ್ತೆಗೆ ಮೇಲ್ವಿಚಾರಕರು ಭೇಟಿ ನೀಡಲಾಗುತ್ತಿದೆ. ಬೆಂಗಳೂರು ನಗರ ಮಾತ್ರವಲ್ಲದೇ ರಾಜ್ಯದ ಬಹುತೇಕ ಅಂಗನವಾಡಿಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಅಂಗನವಾಡಿಗಳ ನಿರ್ವಹಣೆಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ ಸದ್ಬಳಕೆ ಆಗುತ್ತಿಲ್ಲ. ಅಧಿಕಾರಿಗಳಲ್ಲಿ ಕ್ರಿಯಾ ಯೋಜನೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್​ನಲ್ಲಿ ಲೋಕ ಅದಾಲತ್: ಜುಲೈ 29 ರಿಂದ ಆಗಸ್ಟ್‌ 3ರವರೆಗೂ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ನಲ್ಲಿ ಬಾಕಿ ಉಳಿದಿರುವ ಅರ್ಜಿಗಳ ತ್ವರಿತ ಇತ್ಯರ್ಥಕ್ಕೆ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಾಗಿದೆ. ಈ ಕುರಿತಂತೆ ರಾಜ್ಯದ ಎಲ್ಲ ಜಿಲ್ಲಾ ಹಂತದಲ್ಲಿ ವಿಡಿಯೋ ಕಾನ್ಪೆರೆನ್ಸ್ ಮೂಲಕ ಕಕ್ಷಿದಾರರು ಭಾಗಿಯಾಗಿ ತಮ್ಮ ಪ್ರಕರಣಗಳ ಭಾಗಿಯಾಗಬಹುದಾಗಿದೆ. ರಾಜಿ ಸಂದಸಾನದ ಮೂಲಕ ಇತ್ಯರ್ಥವಾಗಬಹುದಾದ ಪ್ರಕರಣಗಳ ಕಕ್ಷಿದಾರರಿಗೆ ಈಗಾಗಲೇ ನೋಟಿಸ್ ನೀಡುವ ಮೂಲಕ ವಿಶೇಷ ಲೋಕ ಅದಾಲತ್​ನಲ್ಲಿ ಭಾಗಿಯಾಗಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಜೊತೆಗೆ ಜುಲೈ 13ರಂದು ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಕಕ್ಷಿದಾರರು ತಮ್ಮ ಪ್ರಕರಣಗಳ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಕೈಗಾರಿಕೆಗಳಿಗೆ ನೀಡುವ ಉತ್ತೇಜನ ಎಲ್ಲ ರಾಜ್ಯಗಳಿಗೂ ಸಮಾನವಾಗಿರಲಿ: ಸಚಿವ ಎಂ.ಬಿ.ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.