ಶಿವಮೊಗ್ಗ: ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ. ಎಸ್ ಈಶ್ವರಪ್ಪ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಫೋಟೋವನ್ನು ಬಳಸಿಕೊಳ್ಳಬೇಕೆಂಬ ವಿಚಾರದ ಕುರಿತು ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ಇಂದು ಕೆವಿಯಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ಮೂಲಗಳ ಮಾಹಿತಿ ತಿಳಿದು ಬಂದಿದೆ.
ನರೇಂದ್ರ ಮೋದಿ ಅವರ ಫೋಟೋವನ್ನು ಈಶ್ವರಪ್ಪ ತಮ್ಮ ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದು, ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಸಂಬಂಧ ಸುದ್ದಿಗೋಷ್ಠಿಯೊಂದರಲ್ಲಿ ಹಾಲಿ ಸಂಸದ ಬಿ.ವೈ ರಾಘವೇಂದ್ರ ಅವರು ಪ್ರತಿಕ್ರಿಯಿಸಿ, ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿ. ಮೋದಿಜಿ ಅವರ ಫೋಟೋವನ್ನು ಬಳಸಿಕೊಳ್ಳುವ ಹಕ್ಕು ಬಿಜೆಪಿಗೆ ಮಾತ್ರ ಇದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕೆ.ಎಸ್ ಈಶ್ವರಪ್ಪ ನಾನು ಕೂಡ ಮೋದಿಜಿ ಅವರ ಅಭಿಮಾನಿ. ನನ್ನ ಹೃದಯ ಬಗೆದರೆ, ಒಂದು ಕಡೆ ಶ್ರೀರಾಮ ಇನ್ನೊಂದು ಕಡೆ ಮೋದಿ ಇದ್ದಾರೆ. ಮೋದಿ ಅವರಪ್ಪನ ಆಸ್ತಿನಾ ಎಂದು ಕೇಳಿದ್ದರು. ಈಗ ಮೋದಿ ಫೋಟೋವನ್ನು ಬಳಕೆ ಮಾಡಿಕೊಳ್ಳುವ ವಿಚಾರದಲ್ಲಿ ಈಶ್ವರಪ್ಪ ಜಿಲ್ಲಾ ನ್ಯಾಯಾಲಯದಲ್ಲಿ ಕೆವಿಯಟ್ ಸಲ್ಲಿಕೆ ಮಾಡಿದ್ದಾರೆ. ಮೋದಿಜಿ ಫೋಟೋವನ್ನು ತಾವು ಯಾಕೆ ಬಳಕೆ ಮಾಡಿಕೊಳ್ಳಬಾರದು ಎಂಬ ಪ್ರಶ್ನೆಯೊಂದಿಗೆ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : "ನಾನು ದೆಹಲಿಯಲ್ಲಿ ಅಮಿತ್ ಶಾ ಮನವೊಲಿಸಿ ಸ್ಪರ್ಧಿಸುತ್ತೇನೆ": ಕೆ.ಎಸ್. ಈಶ್ವರಪ್ಪ - K S ESHWARAPPA