ETV Bharat / state

ನಿಮ್ಮ ಕುಲಘಾತಕ ಸಂಸ್ಕೃತಿಯನ್ನು ಸಮಾಜ ಒಪ್ಪುವುದಿಲ್ಲ: ಸಂಸದ ರಾಘವೇಂದ್ರಗೆ ಆಯನೂರು ಮಂಜುನಾಥ್ ತಿರುಗೇಟು - Lok Sabha Election 2024 - LOK SABHA ELECTION 2024

ಈಶ್ವರಪ್ಪನವರು ನಿಮ್ಮ ತಂದೆ ಯಡಿಯೂರಪ್ಪ ಅವರನ್ನು ಬಾಯಿಗೆ ಬಂದಂತೆ ಬೈದಿದ್ದರೂ ಸುಮ್ಮನಿರುವಿರಿ. ನಿಮ್ಮ ತಂದೆ ಸಂಕಷ್ಟದಲ್ಲಿದ್ದಾಗ ಅವರೊಂದಿಗೆ ನಿಲ್ಲದಿರುವ ಕುಲಘಾತಕ ಸಂಸ್ಕೃತಿ ನಿಮ್ಮದು, ನಿನ್ನೆ ಸಂಸದರು ಸಚಿವರ ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ. ಆ ರೀತಿ‌ ಸಂಸ್ಕೃತಿ ಅಳೆಯಲು ಹೋಗಬಾರದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿರುಗೇಟು ನೀಡಿದರು.

KPCC spokesperson Ayanur Manjunath spoke to the media.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾಧ್ಯಮದವರೊಂದಿಗೆ ಮಾತನಾಡಿದರು.
author img

By ETV Bharat Karnataka Team

Published : Mar 29, 2024, 5:11 PM IST

Updated : Mar 29, 2024, 5:45 PM IST

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಶಿವಮೊಗ್ಗ: ಈಶ್ವರಪ್ಪನವರು ನಿಮ್ಮ ತಂದೆ ಯಡಿಯೂರಪ್ಪ ಅವರನ್ನು ಬಾಯಿಗೆ ಬಂದ ಹಾಗೆ ಬೈದಿದ್ದರೂ ಸುಮ್ಮನಿರುವಿರಿ. ನಿಮ್ಮ ತಂದೆ ಸಂಕಷ್ಟದಲ್ಲಿದ್ದಾಗ ಅವರ ಜೊತೆ ನಿಲ್ಲದ ಕುಲಘಾತಕ ಸಂಸ್ಕೃತಿ ನಿಮ್ಮದು, ಇಂಥ ನಿಮ್ಮ ಕುಲಘಾತಕ ಸಂಸ್ಕೃತಿಯನ್ನು ಸಮಾಜ ಒಪ್ಪುವುದಿಲ್ಲ. ಮೊದಲು ಸಂಸ್ಕೃತಿ ಬಿಟ್ಟಿರುವ ತಾವು, ನಂತರ ಮಧು ಬಂಗಾರಪ್ಪ ಅವರ ಸಂಸ್ಕೃತಿ ಬಗ್ಗೆ ಮಾತನಾಡಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರು ಸಂಸದ ರಾಘವೇಂದ್ರಗೆ ತಿರುಗೇಟು ನೀಡಿದರು.

ಸಚಿವ ಮಧು ಬಂಗಾರಪ್ಪ ಅವರ ಶಿವಮೊಗ್ಗದ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಸಂಸದರು ಜಿಲ್ಲಾ ಸಚಿವರ ಸಂಸ್ಕೃತಿಯನ್ನು ಅಳೆದಿದ್ದಾರೆ. ಆ ರೀತಿ‌ ಸಂಸ್ಕೃತಿಯನ್ನು ಅಳೆಯಲು ಹೋಗಬಾರದು. ನಿಮ್ಮ ತಂದೆಯವರಿಗೆ ಈಗ ನಿಮ್ಮದೇ ಪಕ್ಷದ ಈಗ ಬಂಡಾಯ ಎದ್ದಿರುವ ಈಶ್ವರಪ್ಪನವರು ನಿಮ್ಮ ತಂದೆ ಎದೆ ಬಗೆದರೆ ಒಂದು ಕಡೆ ಮಕ್ಕಳು ಇನ್ನೊಂದು ಕಡೆ ಶೋಭಾ ಕರಂದ್ಲಾಜೆ ಎಂದು ಹೇಳಿದರೂ, ನೀವು ಮಕ್ಕಳಾಗಿ ಖಂಡಿಸಲಿಲ್ಲ. ಒಂದು ಸಣ್ಣ ಬೆದರಿಕೆಯನ್ನು ಹಾಕಲಿಲ್ಲ. ನಿಮ್ಮ ತಂದೆಯವರನ್ನು ಬೈದಾಗ ಅದರಲ್ಲೂ ರಾಜಕೀಯ ಬೇಳೆ ಬೇಯಿಸಿಕೊಂಡ್ರಲ್ಲ. ಅವರು ವಿಷಾದದಿಂದ ಅಧಿಕಾರ ತ್ಯಾಗ, ಇಡೀ ರಾಜ್ಯದ ಜನ ಕಣ್ಣೀರು ಹಾಕಿದಾಗ ನೀವು ನೋವು ಪಡೆಯಲಿಲ್ಲ. ನೀವು ಆಸ್ತಿ ಹಾಗೂ ಅಧಿಕಾರಕ್ಕೆ ಜೋತು ಬಿದ್ದ ಸಂಸ್ಕೃತಿ ನಿಮ್ಮದು ಎಂದು ಪ್ರಶ್ನಿಸಿದರು.

ಅಧಿಕಾರದ ಆಸೆಗಾಗಿ ಎಂಪಿ ಆದಾಗ ಅಧಿಕಾರ ಬಿಟ್ಟು ಕೊಡದೇ, ರಾಜಕೀಯ ಸಂಕಷ್ಟಕ್ಕೆ ಸಾಥ್ ನೀಡದ ನಿಮ್ಮದು ಯಾವ ಸಂಸ್ಕೃತಿ ? ಕೆಜೆಪಿ ಕಟ್ಟಿದಾಗ ನೀವು ಬಿಜೆಪಿ‌ ಸಂಸದರಾಗಿ ಕೆಜೆಪಿಗೆ ಬೆಂಬಲ ನೀಡಿದ್ದು ಯಾವ ಸಂಸ್ಕೃತಿ? ಯಾರು ಮಾಡಿದ ತಪ್ಪಿಗೆ ನಿಮ್ಮ ತಂದೆ ಜೈಲಿಗೆ ಯಾಕೆ ಹೋದರು ಎಂಬುದನ್ನು ಹೇಳಬೇಕು. ಕಳೆದ 15 ವರ್ಷಗಳಿಂದ ದೆಹಲಿಗೆ ಹೋಗಿ ಹಿಂದಿ ಕಲಿಯಲಿಲ್ಲವೇ ನೀವು? ಎಂದು ಆರೋಪಿಸಿದರು.

ಬಹಳ ಸುಸಂಸ್ಕೃತರು ಎಂದು ಹೇಳುವ ನೀವು, ನಿಮ್ಮ ತಂದೆಗೆ ಎಷ್ಟು ಸಾಥ್ ನೀಡಿದ್ದೀರಿ? ನಿಮ್ಮ ತಂದೆ ಯಾಕೆ ಜೈಲಿಗೆ ಹೋಗಿದ್ರು. ಎರಡನೇ ಸಲ ಅಧಿಕಾರ ಕಳೆದು ಕೊಂಡಾಗ ನೀವು ಸಾಥ್ ನೀಡಲಿಲ್ಲ‌. ರಾಮನ ಹೆಸರು ಹೇಳುವ ನೀವು ತಂದೆಯ ತಕ್ಕ ಮಗನಾಗಲಿಲ್ಲ. ರಾಮ ತಂದೆಗಾಗಿ ಕಾಡಿಗೆ ಹೋದ, ಅಧಿಕಾರಕ್ಕಾಗಿ ತಂದೆಯನ್ನು ಮನೆಗೆ ಕಳುಹಿಸಿದ್ದೀರಿ ಎಂದು ದೂರಿದರು.

ವಿಐಎಸ್ಎಲ್​​ಗೆ ತಾತ್ಕಾಲಿಕ ಆಕ್ಸಿಜನ್ ನೀಡಿ ಎಂದು ನಿಮ್ಮ ನಾಯಕರನ್ನು ಭೇಟಿ ಮಾಡಿದ್ದೀರಿ. ಮಾಹಿತಿ ನಮಗೂ ಬಂದಿದೆ. ಶರಾವತಿ ಸಂತ್ರಸ್ತರ ಪರವಾಗಿ ಮೂರು ಅವಧಿಯಲ್ಲಿ ಏನ್ ಮಾಡಿದ್ರಿ ಎಂದು ಪ್ರಶ್ನಿಸಿದ ಅವರು, ರಾಘವೇಂದ್ರ ಹಾಗೂ ಈಶ್ವರಪ್ಪ ವಂಶಪಾರಂಪರ್ಯದ ಬಗ್ಗೆ ಮಾತನಾಡಬೇಡಿ ಎಂದರು.

ಬಂಗಾರಪ್ಪನವರ ಕೊಡುಗೆ ಅಪಾರ: ಈಗ ನೀವು ಸ್ಟಾಟರ್ಪ್ ಅಂತ ಈಗ ಹೇಳಿದ್ದಿರಿ, ಬಂಗಾರಪ್ಪನವರು ವಿಶ್ವ ಯೋಜನೆ ಜಾರಿ ಮಾಡಿದ್ರು, ಆರಾಧಾನ ಹೆಸರಿನ ಯೋಜನೆಯಿಂದ ಸಣ್ಣ ದೇವಾಲಯಗಳನ್ನು ಉಳಿಸಿಕೊಟ್ಟರು ಎಂದು ಹೇಳಿದರು.

ಕರಪತ್ರದಲ್ಲಿ ಕೇಂದ್ರ, ರಾಜ್ಯದ ಪಾಲು ಎಷ್ಟು ?:ಸಂಸದರು ನಿಮ್ಮ ಕರಪತ್ರದಲ್ಲಿ ನಿಮ್ಮ ಸಾಧನೆಯನ್ನು ನೀವು ಹಾಕಿರುವುದು ಸುಳ್ಳು, ವಿಮಾನ ನಿಲ್ದಾಣ ನಿಮ್ಮದೇನಾ, ರಾಜ್ಯ ಸರ್ಕಾರ ಅನುದಾನ ನೀಡಲಿಲ್ಲವೆ?. ನಿಮ್ಮ ಶ್ವೇತ ಪತ್ರ ಅಂತ ಹೇಳುವುದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಣ ಎಷ್ಟು ನೀಡಿದೆ ಎಂದು ನಮೂದಿಸಬೇಕಿತ್ತು. ಕಾಗೋಡು ತಿಮ್ಮಪ್ಪನವರು 1999 ರಲ್ಲಿ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಪ್ರಸ್ತಾವನೆ ಸಲ್ಲಿಸಿದರು. ಇದರ ಫಲವಾಗಿ ಈಗ ಅಭಿವೃದ್ದಿ ಅಗಿದೆ. ನಿಮ್ಮ ಆಸ್ತಿಗಳ ಬಳಿ ರಸ್ತೆಗಳು ಹೋಗಿವೆ. ನಿಮ್ಮ ರಿಂಗ್ ರೋಡ್ ಹೈವೆಯನ್ನು ಅಭಿವೃದ್ಧಿ ಮಾಡಿಸಿದ್ದೀರಿ. ಜೊತೆಗೆ ನೀವು ಎಷ್ಟು ಅಭಿವೃದ್ದಿ ಆಗಿದ್ದೀರಿ ಎನ್ನುವುದನ್ನು ತಿಳಿಸಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್ ಕೆ ಮರಿಯಪ್ಪ, ಕಲಗೋಡು ರತ್ನಾಕರ್, ಆರ್ ಪ್ರಸನ್ನ ಕುಮಾರ್, ಕಲಿಂ ಪಾಷಾ, ಮಂಜುನಾಥ ಸೇರಿದಂತೆ ಮತ್ತಿತರರು ಹಾಜರಿದ್ದರು.

ಇದನ್ನೂಓದಿ:ರಾಜ್ಯದಲ್ಲಿ ಮತ್ತೆ ಬಿಜೆಪಿ - ಜೆಡಿಎಸ್ ಸಮ್ಮಿಶ್ರ ಸರ್ಕಾರ ತರಲು ಈ ಮೈತ್ರಿ ವೇದಿಕೆಯಾಗಬೇಕು: ಹೆಚ್​ಡಿಕೆ ಕರೆ - JDS and BJP meeting

Last Updated : Mar 29, 2024, 5:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.