ETV Bharat / state

'ಕಾಂಗ್ರೆಸ್​​​ ಪಕ್ಷಕ್ಕೆ ಕೇವಲ ದುಡಿಸಿಕೊಳ್ಳುವ ಎತ್ತುಗಳಷ್ಟೇ ಬೇಕು': ಜೆಡಿಎಸ್ ಸೇರಿದ ಶಾರದಾ ಚಂದ್ರಶೇಖರ್

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಶಾರದಾ ಚಂದ್ರಶೇಖರ್ ಅವರು​​ ಕಾಂಗ್ರೆಸ್​ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್​ ತೊರೆದು ಜೆಡಿಎಸ್ ಸೇರಿದ ಶಾರದಾ ಚಂದ್ರಶೇಖರ್
ಕಾಂಗ್ರೆಸ್​ ತೊರೆದು ಜೆಡಿಎಸ್ ಸೇರಿದ ಶಾರದಾ ಚಂದ್ರಶೇಖರ್ (ETV Bharat)
author img

By ETV Bharat Karnataka Team

Published : Nov 7, 2024, 11:51 AM IST

Updated : Nov 7, 2024, 12:25 PM IST

ರಾಮನಗರ: "ಕಾಂಗ್ರೆಸ್​​​ ಪಕ್ಷದಲ್ಲಿ ಕೇವಲ ದುಡಿಸಿಕೊಳ್ಳುವ ಎತ್ತುಗಳಷ್ಟೇ ಬೇಕು. ದುಡಿದವರಿಗೆ ಸ್ಥಾನಮಾನ ಮಾತ್ರ ದೊರೆಯುವುದಿಲ್ಲ" ಎಂದು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಶಾರದಾ ಚಂದ್ರಶೇಖರ್​ ಕಾಂಗ್ರೆಸ್ ಮುಖಂಡರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ನಮ್ಮ ಸ್ವಂತ ಮನೆಯ ಲಕ್ಷಾಂತರ ರೂ. ಕಳೆದುಕೊಂಡು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕೆಪಿಸಿಸಿ ಹಾಗೂ ಎಐಸಿಸಿ ಸದಸ್ಯೆಯಾಗಿ ಸೇವೆ ಮಾಡಿದರೂ ನನಗೆ ಯಾವುದೇ ಸ್ಥಾನಮಾನ ನೀಡಲಿಲ್ಲ. ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿದವರಿಗೆ ಯಾವುದೇ ಸ್ಥಾನಮಾನ ಸಿಗುವುದಿಲ್ಲ" ಎಂದು ಅವರು ಆರೋಪಿಸಿದರು.

ಜೆಡಿಎಸ್ ಸೇರಿದ ಶಾರದಾ ಚಂದ್ರಶೇಖರ್ ಕಾಂಗ್ರೆಸ್​ ವಿರುದ್ಧ ವಾಗ್ಧಾಳಿ (ETV Bharat)

ಜಪ್ಪಿಂಗ್​ ಸ್ಟಾರ್​ ಸಿಪಿವೈ ನಂಬಬೇಡಿ: "ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ತಮ್ಮ ಸ್ವಾರ್ಥಕ್ಕಾಗಿ ಹೋಗುತ್ತಿರುವ ಕಾಂಗ್ರೆಸ್​ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್​ ನಂಬಿಕೆಗೆ ಅರ್ಹರೇ ಅಲ್ಲ. ಅಭಿವೃದ್ಧಿಗಾಗಿ ನಾನು ಪಕ್ಷ ಬದಲಾಯಿಸಿಕೊಂಡು ಬರುತ್ತಿದ್ದೇನೆ ಎಂದು ಜನರಿಗೆ ಮಂಕುಬೂದಿ ಎರಚಿಕೊಂಡು ಚಾಣಾಕ್ಷತನದಿಂದ ರಾಜಕಾರಣ ಮಾಡುತ್ತಿದ್ದಾರೆ. ನಾನೂ ಕೂಡ ಯೋಗೇಶ್ವರ್​ ಅವರ ಬಳಿ ದಶಕಗಳಿಂದ ಹೆಚ್ಚು ಕಾಲ ಕೆಲಸ ಮಾಡಿದ್ದೇನೆ. ಅವರು ಯಾವೊಬ್ಬ ರಾಜಕಾರಣಿಯನ್ನೂ ಬೆಳೆಸದೇ ಕೇವಲ ತಮ್ಮ ಬೆಳವಣಿಗೆಯನ್ನು ಮಾತ್ರ ನೋಡಿಕೊಳ್ಳುತ್ತಿದ್ದರು. ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಹೋದಾಗಲೂ ಕೂಡ ಬೆಂಬಲಿಸಿದ್ದೆ. ನಂತರ ಅವರ ಸ್ವಾರ್ಥ ರಾಜಕಾರಣದಿಂದ ಬೇಸತ್ತು ಕಾಂಗ್ರೆಸ್ ಸೇರಿದೆ. ಆದರೆ ಇಲ್ಲೂ ಕೂಡ ಸರ್ಕಾರ ಅಧಿಕಾರ ಬಂದರೂ ಕೂಡ ನಮಗೆ ಯಾವುದೇ ಸ್ಥಾನಮಾನ ನೀಡಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಎಐಸಿಸಿ ಸದಸ್ಯೆ ಹಾಗೂ ಕೆಪಿಸಿಸಿ ರಾಜ್ಯ ಕಾರ್ಯದರ್ಶಿಯಾಗಿದ್ದ ಶಾರದಾ ಚಂದ್ರಶೇಖರ್,​ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ‌ ಪರವಾಗಿ ಕ್ಷೇತ್ರದ ಬೇವೂರು ಗ್ರಾಮದಲ್ಲಿ ಶಾರದಾ ಮನೆಮನೆಗೆ ತೆರಳಿ ಮತಯಾಚಿಸಿದರು.

ಇದನ್ನೂ ಓದಿ: ನಿಖಿಲ್ ಪರ ಜಂಟಿ ಪ್ರಚಾರ: ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ - ಯಡಿಯೂರಪ್ಪ

Last Updated : Nov 7, 2024, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.