ETV Bharat / state

ಕೆಎಲ್ಇ ಕಾಹೆರ 14ನೇ ಘಟಿಕೋತ್ಸವ: 35 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರು, ಹೆಣ್ಮಕ್ಕಳೇ ಸ್ಟ್ರಾಂಗ್ ಗುರು - KLE Autonomous University

author img

By ETV Bharat Karnataka Team

Published : May 27, 2024, 7:46 PM IST

Updated : May 27, 2024, 7:59 PM IST

ಬೆಳಗಾವಿಯಲ್ಲಿ ನಡೆದ ಕೆಎಲ್ಇ ಕಾಹೆರ ಸ್ವಾಯತ್ತ ವಿವಿ 14ನೇ ಘಟಿಕೋತ್ಸವದಲ್ಲಿ ತಾಯಿ-ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಸಂಶೋಧನೆ ಕೈಗೊಂಡಿರುವ ಅಮೆರಿಕದ ಡಾ. ರಿಚರ್ಡ್ ಜಾಕೋಬ್ ಡರ್ಮನ್ ಅವರಿಗೆ ಕಾಹೆರದ ಪ್ರಥಮ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಕೆಎಲ್ಇ ಕಾಹೆರ ಸ್ವಾಯತ್ತ ವಿವಿ 14ನೇ ಘಟಿಕೋತ್ಸವ
ಕೆಎಲ್ಇ ಕಾಹೆರ ಸ್ವಾಯತ್ತ ವಿವಿ 14ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು (ETV Bharat)

ಬೆಳಗಾವಿ: ನ್ಯಾಯ, ಸಮಾನತೆ, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ತ್ಯಾಗದ ಮಾರ್ಗದರ್ಶಿ ತತ್ವಾದರ್ಶಗಳ ಮೇಲೆ ಸಮಾಜವನ್ನು ನಿರ್ಮಿಸಿದ ಕೆಎಲ್ಇ ಸಂಸ್ಥೆಯ ಸಪ್ತರ್ಷಿಗಳ ಮಹೋನ್ನತ ಉದ್ದೇಶ ಇಂದು ದೇಶದ ಪ್ರಗತಿಯಲ್ಲಿ ಕಂಡು ಬರುತ್ತಿದೆ. ನಂಬಲು ಅಸಾಧ್ಯವೆನಿಸುವ ವೈದ್ಯಕೀಯ ಮೂಲಸೌಕರ್ಯಗಳನ್ನು ಕಲ್ಪಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ ಹರ್ಷ ವ್ಯಕ್ತಪಡಿಸಿದರು.

ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕಾಹೆರ) ಸ್ವಾಯತ್ತ​ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಪದವಿ ಪಡೆಯುವುದು ಕಠಿಣ ಪರಿಶ್ರಮದ ಫಲವಾಗಿದೆ. ಯುವ ಪದವೀಧರರು ಮಾನವೀಯತೆಯ ಪ್ರತಿಬಿಂಬವಾಗಿ ಸೇವೆ ಸಲ್ಲಿಸುತ್ತ ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಬೇಕು. ಅದೊಂದು ಜೀವನದ ಪ್ರಮುಖ ತಿರುವು ಆಗಬೇಕು ಎಂದು ಸಲಹೆ ನೀಡಿದರು.

ಅಮೆರಿಕದ ಡಾ. ರಿಚರ್ಡ್ ಜಾಕೋಬ್ ಡರ್ಮನ್ ಅವರಿಗೆ ಕಾಹೆರದ ಪ್ರಥಮ ಗೌರವ ಡಾಕ್ಟರೇಟ್ ಪದವಿ ಪ್ರದಾನ  ಮಾಡಲಾಯಿತು.
ಅಮೆರಿಕದ ಡಾ. ರಿಚರ್ಡ್ ಜಾಕೋಬ್ ಡರ್ಮನ್ ಅವರಿಗೆ ಕಾಹೆರದ ಪ್ರಥಮ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. (ETV Bharat)

ದೇಶದ 5 ಸಾವಿರ ವರ್ಷಗಳಷ್ಟು ಹಳೆಯ ನಾಗರಿಕತೆಯು ಆನುವಂಶಿಕವಾಗಿ ಶಕ್ತಿಯನ್ನು ಪಡೆದುಕೊಂಡಿದೆ. ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ವಿಶ್ವದಾದ್ಯಂತ ಭಾರತದ ಯುವಕರ ಧ್ವನಿ ಕೇಳಿ ಬರುತ್ತಿದೆ. ಯುವಕರು ಭಾರತದ ಅಭಿವೃದ್ಧಿ ಪಥದಲ್ಲಿ ಪ್ರಮುಖ ಪಾತ್ರವಹಿಸುತ್ತ, ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಉಪರಾಷ್ಟ್ರಪತಿಗಳು ಕರೆ ನೀಡಿದರು.

ಭಾರತವು ಅತ್ಯಧಿಕ ಸಂಖ್ಯೆಯ ಸ್ಟಾರ್ಟ್‌ ಅಪ್‌ಗಳು, ಯುನಿಕಾರ್ನ್‌ಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುವ ವೈದ್ಯರು ತಮ್ಮ ನಿಜವಾದ ಸಾಮರ್ಥ್ಯವನ್ನು ಹೊರಹಾಕಿ, ಕನಸುಗಳನ್ನು ಈಡೇರಿಸಿಕೊಳ್ಳಬೇಕು. ವೈದ್ಯಕೀಯ ಸೇವೆಯ ಪ್ರಾಥಮಿಕ ಧ್ಯೇಯ ವಾಕ್ಯ ಹಣವಲ್ಲ, ಅದೊಂದು ಸೇವೆ ಎಂದು ಪರಿಗಣಿಸಿ ಸೇವೆ ಒದಗಿಸಿ. ಅದರಲ್ಲಿಯೂ ಮುಖ್ಯವಾಗಿ ಹಳ್ಳಿಗರ ಸೇವೆಯಲ್ಲಿ ತೊಡಗಬೇಕು, ಶಿಕ್ಷಣದಿಂದ ಮಾತ್ರ ದೇಶವು ಸಾಮಾಜಿಕ-ಆರ್ಥಿಕ ಪರಿವರ್ತನೆಗಳಿಗೆ ಸಾಕ್ಷಿಯಾಗಬಹುದು ಎಂಬುದನ್ನು ಅರಿತ ಕೆಎಲ್‌ಇ ಸಂಸ್ಥೆಯು ಆ ಕನಸನ್ನು ನನಸು ಮಾಡುತ್ತಿದೆ ಎಂದು ಶ್ಲಾಘಿಸಿದರು.

ಡಾ. ರಿಚರ್ಡ್ ಜಾಕೋಬ್​ಗೆ ಡಾಕ್ಟರೇಟ್ ಪದವಿ ಪ್ರದಾನ: ಪ್ರಸವ ನಂತರದ ರಕ್ತಸ್ರಾವಕ್ಕೆ ನವೀನ ಚಿಕಿತ್ಸೆಗಳ ಮೂಲಕ ತಾಯಿಯ ಮರಣವನ್ನು ಗಣನೀಯವಾಗಿ ಕಡಿಮೆ ಮಾಡುವ, ತಾಯಿ-ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಸಂಶೋಧನೆ ಕೈಗೊಂಡಿರುವ ಅಮೆರಿಕದ ಫೆಲಡೆಲ್ಪಿಯಾದ ಥಾಮಸ್ ಝೆಫರಸನ್ ವಿಶ್ವವಿದ್ಯಾಲಯದ ವೈಸ್ ಪ್ರೊವೊಸ್ಟ್ ಡಾ. ರಿಚರ್ಡ್ ಜಾಕೋಬ್ ಡರ್ಮನ್ ಅವರಿಗೆ ಕಾಹೆರನ ಪ್ರಥಮ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಚಿನ್ನದ ಪದಕ ಪಡೆದವರಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ: 45 ಚಿನ್ನದ ಪದಕಗಳು, 30 ಪಿಹೆಚ್‌ಡಿಗಳು, 13 ಸ್ನಾತಕೋತ್ತರ (DM/M.ch), 644 ಸ್ನಾತಕೋತ್ತರ ಪದವೀಧರರು, 1023 ಪದವೀಧರರು, 9 ಪಿಜಿ ಡಿಪ್ಲೊಮಾಗಳನ್ನು ಒಳಗೊಂಡಂತೆ ಆರೋಗ್ಯ ವಿಜ್ಞಾನದ ವಿವಿಧ ವಿಭಾಗಗಳಲ್ಲಿ 1739 ಪದವಿಗಳನ್ನು ನೀಡಲಾಯಿತು. 4 ಡಿಪ್ಲೊಮಾಗಳು, 5 ಫೆಲೋಶಿಪ್‌ಗಳು ಮತ್ತು 11 ಪ್ರಮಾಣಪತ್ರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 45 ಚಿನ್ನದ ಪದಕಗಳ ಪೈಕಿ 35 ಚಿನ್ನದ ಪದಕಗಳನ್ನು ವಿದ್ಯಾರ್ಥಿನಿಯರೇ ಮುಡಿಗೇರಿಸಿಕೊಂಡಿರೋದು, ವೈದ್ಯಕೀಯ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರೇ ಪ್ರಾಬಲ್ಯ ಸಾಧಿಸಿರೋದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಕಾಹೆರ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಉಪರಾಷ್ಟ್ರಪತಿಗಳ ಧರ್ಮಪತ್ನಿ ಸುದೇಶ್ ಧನಕರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪರೀಕ್ಷಾ ನಿಯಂತ್ರಕಿ ಡಾ. ಚಂದ್ರಾ ಮೆಟಗುಡ್ಡ ಕಾಹೆರನ ಮೆರವಣಿಗೆಯನ್ನು ಮುನ್ನಡೆಸಿದರು. ಉಪಕುಲಪತಿ ಡಾ. ನಿತಿನ್ ಗಂಗಾನೆ ಅವರು ವಾರ್ಷಿಕ ವರದಿ ಮಂಡಿಸಿದರು. ಘಟಿಕೋತ್ಸವದ ನೆನಪಿಗಾಗಿ ಜೆಎನ್ಎಂಸಿ ಆವರಣದಲ್ಲಿ ಒಂದು ಸಸಿ ನೆಡಲಾಯಿತು.

ಇದನ್ನೂಓದಿ:ವಿಶ್ವದಲ್ಲೇ ಮೊದಲ ಪ್ರಕರಣ; ವ್ಯಕ್ತಿಯ ಮೂರು ವಿಭಿನ್ನ ಕಾಯಿಲೆಗಳಿಗೆ ಏಕಕಾಲದಲ್ಲೇ ಶಸ್ತ್ರಚಿಕಿತ್ಸೆ ನೀಡುವಲ್ಲಿ ವೈದ್ಯರ ತಂಡ ಯಶಸ್ವಿ - doctors team successful

Last Updated : May 27, 2024, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.