ETV Bharat / state

ನೇಮದಲ್ಲಿ ಪಾಲ್ಗೊಂಡ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ: ಮತ್ತಷ್ಟು ಎತ್ತರಕ್ಕೆ ಬೆಳೆಯುವ ಅಭಯ ನೀಡಿದ ದೈವ - Srinidhi Shetty - SRINIDHI SHETTY

ಕೆಜಿಎಫ್ ಸಿನಿಮಾ ಖ್ಯಾತಿಯ ಶ್ರೀನಿಧಿ ಶೆಟ್ಟಿ ತಮ್ಮ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ನಡೆದ ಹರಕೆ ನೇಮದಲ್ಲಿ ಪಾಲ್ಗೊಂಡರು.

Srinidhi Shetty participated in Kola
ಕೋಲದಲ್ಲಿ ಭಾಗಿಯಾದ ಶ್ರೀನಿಧಿ ಶೆಟ್ಟಿ (ETV Bharat)
author img

By ETV Bharat Karnataka Team

Published : May 8, 2024, 12:37 PM IST

ಕೋಲದಲ್ಲಿ ಭಾಗಿಯಾದ ಶ್ರೀನಿಧಿ ಶೆಟ್ಟಿ (ETV Bharat)

ಮಂಗಳೂರು(ದಕ್ಷಿಣ ಕನ್ನಡ): ಬ್ಲಾಕ್​ಬಸ್ಟರ್ ಕನ್ನಡ ಸಿನಿಮಾ 'ಕೆಜಿಎಫ್'​​​​ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ನಾಯಕಿಯಾಗಿ ನಟಿಸಿ ಸಾಕಷ್ಟು ಜನಪ್ರಿಯರಾಗಿರುವ ಶ್ರೀನಿಧಿ ಶೆಟ್ಟಿ ಕರಾವಳಿಯ ದೈವ ಕೋಲದಲ್ಲಿ ಭಾಗಿಯಾಗಿ ಗಮನ ಸೆಳೆದರು. ಮಂಗಳೂರಿನ ಹೊರವಲಯದ ಕಿನ್ನಿಗೋಳಿಯಲ್ಲಿರುವ ನಟಿ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ಹರಕೆ ನೇಮ ನಡೆಯಿತು.

ಶ್ರೀನಿಧಿ ಶೆಟ್ಟಿ ಈ ಹಿಂದೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕುಟುಂಬ ದೈವಗಳಾದ ಜಾರಂದಾಯ, ಬಂಟ ಹಾಗೂ ಪರಿವಾರ ದೈವಗಳಿಗೆ ನೇಮ ನೀಡುವುದಾಗಿ ಹರಕೆ ಹೊತ್ತಿದ್ದರು. ಇದೀಗ ತಾಳಿಪಾಡಿಗುತ್ತುವಿಗೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ನೇಮದಲ್ಲಿ ಪಾಲ್ಗೊಂಡಿದ್ದಾರೆ.

ತಮ್ಮ ಯಶಸ್ಸಿನ ಹಿಂದೆ ಕುಟುಂಬದ ದೈವಗಳ ಆಶೀರ್ವಾದವಿದ್ದು, ಇಷ್ಟಾರ್ಥ ಸಿದ್ಧಿಗಾಗಿ ಈ ಹರಕೆ ಕೋಲ ಸಲ್ಲಿಸಿದ್ದಾರೆ. ನೇಮದ ವೇಳೆ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿ ಎಂದು ದೈವಗಳು ನಟಿಗೆ ಅಭಯ ನೀಡಿವೆ.

ಇದನ್ನೂ ಓದಿ: 'ಕಾಂತಾರ 2 ಬಗ್ಗೆ ಏನೂ ಹೇಳ್ಳಿಕೆ ಹೋಗ್ಬೇಡಿ ಮಾರಾಯ್ರೆ': ರಿಷಬ್ ಶೆಟ್ಟಿ - Rishab Shetty

ETV Bharat Logo

Copyright © 2025 Ushodaya Enterprises Pvt. Ltd., All Rights Reserved.