ETV Bharat / state

ಚನ್ನಪಟ್ಟಣ ಬೈ ಎಲೆಕ್ಷನ್​: ಸಿ ಪಿ ಯೋಗೇಶ್ವರ್ ಗೆಲುವಿಗೆ ಪ್ರಮುಖ ಕಾರಣಗಳಿವು! - C P YOGESHWAR VICTORY

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸಿ. ಪಿ ಯೋಗೇಶ್ವರ್ 25,357 ಮತಗಳ ಅಂತರದೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ.

c-p-yogeshwar
ಕಾಂಗ್ರೆಸ್​ ಅಭ್ಯರ್ಥಿ ಸಿ. ಪಿ ಯೋಗೇಶ್ವರ್ (ETV Bharat)
author img

By ETV Bharat Karnataka Team

Published : Nov 23, 2024, 5:43 PM IST

ರಾಮನಗರ : ಬೊಂಬೆನಗರಿ ಚನ್ನಪಟ್ಟಣ ಜನತೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ‌. ಪಿ ಯೋಗೇಶ್ವರ್ ಕೈ ಹಿಡಿದು ಭಾರಿ ಅಂತರದಿಂದ ಗೆಲ್ಲಿಸಿದ್ದಾರೆ. ಸಿಪಿವೈ 1,12,388 ಮತಗಳನ್ನು ಪಡೆದಿದ್ದು, 25,357 ಅಂತರದೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಜಿಲ್ಲೆಯಿಂದಲೇ ಅಸ್ತಿತ್ವ ‌ಕಳೆದುಕೊಂಡ ಜೆಡಿಎಸ್ : ರಾಮನಗರ ಜಿಲ್ಲೆಯಿಂದಲೇ ಜೆಡಿಎಸ್ ಸಂಪೂರ್ಣ ಅಸ್ವಿತ್ವ ಕಳೆದು ಕೊಂಡಿದೆ. ಇಡೀ ಜಿಲ್ಲೆಯೇ ಕಾಂಗ್ರೆಸ್ ಮಯವಾಗಿದೆ.

ಜಿಲ್ಲೆಯಲ್ಲಿ ಜೆಡಿಎಸ್ ಸಂಧ್ಯಾಕಾಲಕ್ಕೆ ಬಂದಿದೆ. ಇಡೀ ಜಿಲ್ಲೆಯಲ್ಲಿಯೇ ಜೆಡಿಎಸ್ ತನ್ನ ಅಸ್ವಿತ್ವ ಸಂಪೂರ್ಣವಾಗಿ ಕಳೆದುಕೊಂಡಿದೆ ಎಂದು ಸಿಪಿವೈ ಗೆದ್ದ ಬಳಿಕ‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಿಪಿವೈ ಜೊತೆ ನಿಂತ ಮುಸ್ಲಿಂ ಮತದಾರರು : ಈ ಉಪಚುನಾವಣೆಯಲ್ಲಿ ಚನ್ನಪಟ್ಟಣ ನಗರವಾಸಿಗಳು ಹಾಗೂ ಅದರಲ್ಲೂ ಮುಸ್ಲಿಂ ಮತದಾರರು ಸಿಪಿವೈ ಜೊತೆ ಗಟ್ಟಿಯಾಗಿ ನಿಂತರು.‌ ಮೊದಲ‌ 6 ಸುತ್ತಿನ ಗ್ರಾಮೀಣ ಮತಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅಲ್ಪ ಮುನ್ನಡೆ ಸಾಧಿಸುತ್ತಿದ್ದರೆ, ನಂತರ ನಗರ ಪ್ರದೇಶ ಮತ ಏಣಿಕೆ ಪ್ರಾರಂಭವಾಗುತ್ತಿದ್ದಂತೆ ಸಿಪಿವೈ ಅಂತರ ಹೆಚ್ಚಳ ಶುರುವಾಯಿತು. ಅದರಲ್ಲೂ ಮುಸ್ಲಿಂ ‌ಮತದಾರರು ಸಂಪೂರ್ಣವಾಗಿ ಕಾಂಗ್ರೆಸ್ ಜೊತೆ ನಿಂತರು. ಇದರ ಜೊತೆಗೆ ಸಚಿವ ಜಮೀರ್​ ಅವರ ಕ್ಷೇತ್ರ ಪ್ರವಾಸದಿಂದ ಮುಸ್ಲಿಂ ‌ಮತಗಳು ಹೆಚ್ಚಾಗಿ ಕಾಂಗ್ರೆಸ್​ಗೆ ಬೀಳುವುದಕ್ಕೆ ಅನುಕೂಲವಾಯಿತು.

ಯೋಗೇಶ್ವರ್ ಗೆಲ್ಲುವುದಕ್ಕೆ ಪ್ರಮುಖ ಕಾರಣಗಳು :

  • ಸ್ಥಳೀಯ ಅಭ್ಯರ್ಥಿ ಎಂದು ಜನರು ಕೈ ಹಿಡಿದಿದ್ದಾರೆ
  • ನೀರಾವರಿ ಕ್ರೆಡಿಟ್ ಸಿಪಿವೈ ಕೈ ಹಿಡಿದಿದೆ
  • ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಶ್ರಮ
  • ಪಂಚ ಗ್ಯಾರಂಟಿಗಳು ಕೂಡ ಕೈ ಹಿಡಿಯಲು ಅನುಕೂಲ
  • ಮುಸ್ಲಿಂ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಬಂದಿರುವುದು
  • ಮುಸ್ಲಿಂ ಹಾಗೂ ಎಸ್​ಸಿ‌, ಎಸ್ಟಿ ಮತ ಬ್ಯಾಂಕ್ ಸಿಪಿವೈ ಪರವಾಗಿ ಬಿದ್ದಿವೆ
  • ಡಿಸಿಎಂ ಹಾಗೂ ಮಾಜಿ ಸಂಸದ ಡಿ. ಕೆ ಸುರೇಶ್ ಒಗ್ಗಟ್ಟಿನ ಶ್ರಮ
  • 'ನನಗೆ ಚನ್ನಪಟ್ಟಣ ಬಿಟ್ಟರೆ ಬೇರೆ ಕ್ಷೇತ್ರ ಇಲ್ಲ' ಸಿಪಿವೈ ಹೇಳಿಕೆಗೆ ಮನಸೋತ ಜನತೆ
  • ಉಪಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಅನುಕೂಲ
  • ಸಿಪಿವೈಗೆ ಕ್ಷೇತ್ರದ ಸಂಪೂರ್ಣ ‌ಪರಿಚಯ
  • ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವುದೂ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ

ಇದನ್ನೂ ಓದಿ : 3 ಕ್ಷೇತ್ರಗಳ ಉಪಸಮರದಲ್ಲಿ ಕಾಂಗ್ರೆಸ್ ಜಯಭೇರಿ: 'ಕೈ' ಪಾಳಯದ ಗೆಲುವಿನ ಗುಟ್ಟೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.