ETV Bharat / state

ಮಕ್ಕಳ ಅಶ್ಲೀಲ ವಿಡಿಯೋ ಚಿತ್ರೀಕರಣ ಆರೋಪ: ಶಿಕ್ಷಕನ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ - POCSO Case - POCSO CASE

ಪೋಕ್ಸೋ ಕೇಸ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸರ್ಕಾರಿ ವಸತಿ ಶಾಲೆಯ ಶಿಕ್ಷಕನ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

POCSO CASE
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Sep 7, 2024, 1:30 PM IST

Updated : Sep 7, 2024, 1:49 PM IST

ಬೆಂಗಳೂರು: ಕೋಲಾರ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿದ ಆರೋಪದಲ್ಲಿ ಶಾಲೆಯ ಚಿತ್ರಕಲೆ ಶಿಕ್ಷಕನ ವಿರುದ್ಧ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಎಫ್‌ಐಆರ್‌ ರದ್ದು ಕೋರಿ 46 ವರ್ಷದ ಶಿಕ್ಷಕನೋರ್ವ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. ಅಲ್ಲದೆ, ಪೋಕ್ಸೋ ಕಾಯ್ದೆಯ ಸೆಕ್ಷನ್‌ 11ರ ಪ್ರಕಾರ ಮಕ್ಕಳ ದೇಹ ಅಥವಾ ದೇಹದ ಯಾವುದೇ ಭಾಗವನ್ನು ಅಸಭ್ಯ ರೀತಿಯಲ್ಲಿ ತೋರಿಸುವುದು ಲೈಂಗಿಕ ಕಿರುಕುಳವಾಗುತ್ತದೆ. ಈ ಕೃತ್ಯವು ಪೋಕ್ಸೋ ಕಾಯ್ದೆಯ ಸೆಕ್ಷನ್ 12ರ ಅಡಿ ಶಿಕ್ಷಾರ್ಹವಾಗಿದೆ. ಪ್ರಕರಣದ ತನಿಖಾ ವರದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ದಾಖಲೆಗಳಿಂದ ಅರ್ಜಿದಾರ ಶಿಕ್ಷಕ 5 ಮೊಬೈಲ್‌ ಫೋನ್‌ ಹೊಂದಿದ್ದು, ಪ್ರತಿ ಮೊಬೈಲ್‌ನಲ್ಲೂ ಸುಮಾರು ಸಾವಿರ ಫೋಟೋ ಹಾಗೂ ನೂರಾರು ವಿಡಿಯೋಗಳಿರುವ ಆರೋಪವಿದೆ. ಶಿಕ್ಷಕನ ಈ ಕೃತ್ಯ ನಿಜಕ್ಕೂ ಅಸಭ್ಯ ಹಾಗೂ ಭಯಾನಕವಾಗಿದೆ ಎಂದು ನ್ಯಾಯಾಪೀಠ ಆಘಾತ ವ್ಯಕ್ತಪಡಿಸಿದೆ.

ಒಬ್ಬ ಚಿತ್ರಕಲೆ ಶಿಕ್ಷಕ ಇಷ್ಟು ಮೊಬೈಲ್‌ಗಳನ್ನು ಏಕೆ ಹೊಂದಿದ್ದರು? ಅವುಗಳಲ್ಲಿರುವ ವಿಡಿಯೋ ಹಾಗೂ ಚಿತ್ರಗಳು ಯಾವುವು? ಎಂಬುದರ ಸತ್ಯಾಂಶ ಪೂರ್ಣ ಪ್ರಮಾಣದ ತನಿಖೆ ಹಾಗೂ ವಿಚಾರಣೆಯಿಂದ ಬಹಿರಂಗವಾಗಬೇಕಿದೆ. ಅರ್ಜಿದಾರನ ಕೃತ್ಯ ಭಯಾನಕತೆಗಿಂತ ಹೆಚ್ಚಿನ ಛಾಯೆ ಹೊಂದಿದೆ. ಒಬ್ಬ ಶಿಕ್ಷಕನಾಗಿ ಈ ರೀತಿಯ ವಿಡಿಯೋ ಚಿತ್ರೀಕರಿಸುವುದು ನಿಜಕ್ಕೂ ಅಸಭ್ಯತನ. ಇಂತಹ ಕೃತ್ಯಗಳು ಕ್ಷಮಾರ್ಹವಲ್ಲ. ಅರ್ಜಿದಾರ ಪೂರ್ಣಪ್ರಮಾಣದ ವಿಚಾರಣೆ ಎದುರಿಸಿ ಆರೋಪಮುಕ್ತನಾಗಿ ಬರಬಹುದು. ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಅದನ್ನು ರದ್ದುಪಡಿಸಿದರೆ ಶಿಕ್ಷಕನ ಅಕ್ರಮ ಚುಟವಟಿಕೆಯನ್ನು ಉತ್ತೇಜಿಸಿದಂತಾಗುತ್ತದೆ ಎಂದು ತಿಳಿಸಿರುವ ಪೀಠ, ಆರೋಪಿಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಕೋಲಾರ ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ ಶಿಕ್ಷಕ ಚಿತ್ರಕಲೆ ಶಿಕ್ಷಕರಾಗಿದ್ದಾರೆ. ಶಾಲೆಯ ಬಾಲಕಿಯರು ಬಟ್ಟೆ ಬದಲಿಸುವ ಸಮಯದಲ್ಲಿ ಫೋಟೋ ಹಾಗೂ ವಿಡಿಯೋ ತೆಗೆದ ಆರೋಪದ ಬಗ್ಗೆ ಶಿಕ್ಷಕ ವಿರುದ್ಧ 2023ರ ಡಿಸೆಂಬರ್ 15ರಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ನಿಯಂತ್ರಣ ಕೊಠಡಿ ಮೂಲಕ ದೂರು ಸ್ವೀಕರಿಸಿದ್ದರು. ಡಿಸೆಂಬರ್ 17ರಂದು ಅರ್ಜಿದಾರರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಾಗಿತ್ತು. ಇದರಿಂದ, ಎಫ್‌ಐಆರ್‌ ಮತ್ತು ಅದಕ್ಕೆ ಸಂಬಂಧಿಸಿದಂತೆ ಕೋಲಾರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ (ಪೋಕ್ಸೋ ವಿಶೇಷ ಕೋರ್ಟ್‌) ವಿಚಾರಣೆ ರದ್ದು ಕೋರಿ ಶಿಕ್ಷಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಎಫ್‌ಐಆರ್‌ ದಾಖಲಾಗುವ ಮುನ್ನ ಅರ್ಜಿದಾರರು ಯಾವುದೇ ತಪ್ಪು ಎಸಗಿರಲಿಲ್ಲ. 2023ರ ಡಿಸೆಂಬರ್ 15ರಂದು ನಿಯಂತ್ರಣ ಕೊಠಡಿ ಮೂಲಕ ದೂರು ಸ್ವೀಕರಿಸಿದ ನಂತರ ಜಂಟಿ ನಿರ್ದೇಶಕರು ಅರ್ಜಿದಾರನ ಮೊಬೈಲ್‌ ಫೋನ್‌ ಜಪ್ತಿ ಮಾಡಿದ್ದರು. ನಂತರ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್ ದಾಖಲಾಗುವ ಮುನ್ನವೇ ತನಿಖೆ ಆರಂಭವಾಗಿದ್ದು, ಇದು ಕಾನೂನಿನ ಉಲ್ಲಂಘನೆಯಾಗಿದೆ. ಅರ್ಜಿದಾರರನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ವಿಚಾರಣೆ ನಡೆಸಿದ್ದಾರೆ. ಆತನ ಕೃತ್ಯದ ಕುರಿತು ಹಲವು ಟಿವಿ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ್ದು, ಅವು ಯಾವುವು ಎಂಬುದಾಗಿ ದೂರಿನಲ್ಲಿ ಹೆಸರಿಸಿಲ್ಲ. ಮೊಬೈಲ್ ಫೋನ್‌ ಒಂದು ಎಲೆಕ್ಟ್ರಾನಿಕ್‌ ಪುರಾವೆಯಾಗಿದ್ದು, ಅದರಲ್ಲಿರುವ ಅಂಶಗಳನ್ನು ಭಾರತೀಯ ಸಾಕ್ಷ್ಯ ಅಧಿನಿಯಮ-1872ರ ಸೆಕ್ಷನ್ 65ಬಿ ಅಡಿ ನಿರ್ದಿಷ್ಟ ಎಲೆಕ್ಟ್ರಾನಿಕ್‌ ಪುರಾವೆ ಎಂದು ಪರಿಗಣಿಸಲು ಅನುಸರಿಸಿರುವ ನಿಯಮಗಳ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಪೀಠಕ್ಕೆ ವಿವರಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್‌, ವಸತಿ ಶಾಲೆಯಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳು ಬಟ್ಟೆ ಬದಲಿಸುವಾಗ ಅರ್ಜಿದಾರ ವಿಡಿಯೋ ಹಾಗೂ ಫೋಟೋಗಳನ್ನು ತೆಗೆದಿದ್ದಾರೆ. ಅವುಗಳನ್ನು ಹೇಗೆ ತೆಗೆದರು? ಏಕೆ ಸಂಗ್ರಹಿಸಿಟ್ಟಿದ್ದಾರೆ? ಎನ್ನುವುದು ಸಾಕ್ಷ್ಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಅರ್ಜಿದಾರನ ಬಳಿ ಇರುವ ಮೊಬೈಲ್‌ ಪೋನ್‌ನಲ್ಲಿ ಸಾಕಷ್ಟು ಡೇಟಾಗಳಿವೆ. ಆದರೆ, ಫೋನ್ ಅನ್‌ಲಾಕ್‌ ಮಾಡದೆ ಅರ್ಜಿದಾರರು ತನಿಖೆಗೆ ಸಹಕರಿಸುತ್ತಿಲ್ಲ. ಇತರ ಮೊಬೈಲ್‌ಗಳೂ ಲಾಕ್‌ ಆಗಿವೆ. ಮೊಬೈಲ್‌‌ನ ಮೆಮೋರಿ ಕಾರ್ಡ್‌ನಲ್ಲಿರುವ ಚಿತ್ರಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅವು ಅರ್ಜಿದಾರನ ಮೇಲಿನ ಆರೋಪಗಳನ್ನು ದೃಢಪಡಿಸುತ್ತವೆ. ಈ ಕೃತ್ಯ ಪೋಕ್ಸೋ ಕಾಯ್ದೆಯ ಸೆಕ್ಷನ್‌ 12ರ ಅಡಿ (ಮಕ್ಕಳಿಗೆ ಲೈಂಗಿಕ ಕಿರುಕುಳ) ಅಪರಾಧವಾಗಿದೆ. ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಿದ್ಧವಾಗಿದ್ದು, ಯಾವುದೇ ಸಂದರ್ಭದಲ್ಲೂ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಕೆಯಾಗಬಹುದು. ಆದ್ದರಿಂದ, ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ಇದನ್ನೂ ಓದಿ: ಮಹಿಳೆ, ಮಕ್ಕಳ ಮೇಲಿನ ಅಪರಾಧ; ಪ್ರಕರಣ ನಿರ್ವಹಣೆ ವ್ಯವಸ್ಥೆಯಲ್ಲಿ ಆಗಬೇಕಿದೆ ಸುಧಾರಣೆ - Crime Against Women

Last Updated : Sep 7, 2024, 1:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.