ಶಿವಮೊಗ್ಗ: ಹೊರವಲಯದ ಹುಲಿ ಮತ್ತು ಸಿಂಹಧಾಮದ 17 ವರ್ಷದ ಅಂಜನಿ ಎಂಬ ಹುಲಿ ಇಂದು ಸಾವನ್ನಪ್ಪಿದೆ. ವಯೋ ಸಹಜ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಂಜನಿ ಎಂಬ ಹೆಣ್ಣು ಹುಲಿ ಇಂದು ಸಾವನ್ನಪ್ಪಿದೆ ಎಂದು ಹುಲಿ ಮತ್ತು ಸಿಂಹಧಾಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರಾಕ್ಷರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಜನಿಯನ್ನು ಕಳೆದ ಎರಡು ವರ್ಷಗಳ ಹಿಂದೆ ಮೈಸೂರಿನ ಕೂರ್ಗಹಳ್ಳಿಯ ಹುಲಿ ಸಂರಕ್ಷಣಾ ಪುನರ್ವಸತಿ ಹಾಗೂ ತಳಿ ಸಂರಕ್ಷಣಾ ಕೇಂದ್ರದಿಂದ ಕರೆತರಲಾಗಿತ್ತು. ಕಳೆದ ಎರಡು ವರ್ಷಗಳಿಂದ ಅಂಜನಿ ಪ್ರಾಣಿ ಪ್ರಿಯರ ಆಕರ್ಷಣೆಯ ಕೇಂದ್ರವಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಅಂಜನಿ ಹುಲಿ ಸಾವನ್ನಪ್ಪಿದೆ ಎಂದು ಹುಲಿ ಮತ್ತು ಸಿಂಹ ಧಾಮದ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದರಿಂದ ಹುಲಿ ರಾಷ್ಟ್ರೀಯ ಪ್ರಾಣಿಯಾದ ಕಾರಣಕ್ಕೆ ಕಾನೂನು ರೀತಿ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯಕೀಯ ಕಾಲೇಜಿನ ಪಶು ವೈದ್ಯರ ತಂಡ ನಡೆಸಿ ಹುಲಿಯ ದೇಹವನ್ನು ವಿಲೆವಾರಿ ಮಾಡಲಾಗಿದೆ ಎಂದು ಹುಲಿ - ಸಿಂಹಧಾಮದ ಮುಖ್ಯ ನಿರ್ವಹಣಾಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂಜನಿ ಸಾವನ್ನಪ್ಪಿದ್ದರಿಂದ ಇಲ್ಲಿನ ಹುಲಿ ಮತ್ತು ಸಿಂಹಧಾಮದಲ್ಲಿ ಒಂದು ಗಂಡು, ನಾಲ್ಕು ಹೆಣ್ಣು ಹುಲಿಗಳಿವೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: VIDEO: ಜಿಂಕೆ ಹಿಂಡನ್ನು ಅಟ್ಟಾಡಿಸಿದ ಚಿರತೆಗೆ ನಿರಾಸೆ; ಪ್ರವಾಸಿಗರಿಗೆ ರಗಡ್ ಲುಕ್ ನೀಡಿದ ಹುಲಿರಾಯ