ETV Bharat / state

ನಾಲ್ಕು ಹೆಚ್ಚುವರಿ ರಾಷ್ಟ್ರೀಯ ದಿನಗಳ ಆಚರಣೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ - HC DISMISSED PETITION

ವಕೀಲ ಎಂ.ಎಸ್. ಚಂದ್ರಶೇಖರಬಾಬು ಹಾಗೂ ಖಗೋಳಶಾಸಜ್ಞ ಜಿ. ರವೀಂದ್ರ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಎನ್.ವಿ. ಅಂಜಾರಿಯಾ ಹಾಗೂ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿತು.

Karnataka High Court
ಕರ್ನಾಟಕ ಹೈಕೋರ್ಟ್​ (ETV Bharat)
author img

By ETV Bharat Karnataka Team

Published : Oct 8, 2024, 7:07 AM IST

ಬೆಂಗಳೂರು: ಬ್ರಿಟಿಷರು ಬಳುವಳಿಯಾಗಿ ಕೊಟ್ಟಿರುವ ದಿನದಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುವ ಬದಲು ಪ್ರತ್ಯೇಕವಾಗಿ ನಮ್ಮದೇ ಆದ ರಾಷ್ಟ್ರೀಯ ದಿನ ಆಚರಿಸಬೇಕು ಹಾಗೂ ಇದರ ಜತೆಗೆ ಭೂಮಿ ಚಲಿಸುವ ನಾಲ್ಕು ದಿಕ್ಕುಗಳನ್ನು ಆಧರಿಸಿ ವರ್ಷದಲ್ಲಿ ನಾಲ್ಕು ಹೆಚ್ಚುವರಿ ರಾಷ್ಟ್ರೀಯ ದಿನಗಳನ್ನು ಆಚರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ವಕೀಲ ಎಂ. ಎಸ್. ಚಂದ್ರಶೇಖರಬಾಬು ಹಾಗೂ ಕಲಾವಿದ ಮತ್ತು ಖಗೋಳಶಾಸಜ್ಞ ಜಿ. ರವೀಂದ್ರ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಅರ್ಜಿಯಲ್ಲಿನ ಮನವಿಗಳನ್ನು ಗಮನಿಸಿದ ನ್ಯಾಯಪೀಠ, ಅರ್ಜಿದಾರರನ್ನು ಕುರಿತು ಭೂಮಿ ನಾಲ್ಕು ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ಹೇಳಿದ್ದೀರಿ, ನೀವು 5ನೇ ದಿಕ್ಕಿನಲ್ಲಿ ಚಲಿಸುತ್ತಿದ್ದೀರಿ ಎಂದು ಮಾರ್ಮಿಕವಾಗಿ ಹೇಳಿತು. ಅಲ್ಲದೇ ಇಂತಹ ಅರ್ಜಿಗಳಿಗೆ ನೀವು ಹಾಜರಾಗಬೇಕಾಯಿತು ನೋಡಿ ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಹಾಯಕ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರಿಗೆ ನ್ಯಾಯಪೀಠ ಹೇಳಿತು. ಅದಕ್ಕೆ, ದೊಡ್ಡ ಮೊತ್ತದ ದಂಡವೊಂದೇ ಅರ್ಜಿದಾರರಿಗೆ ಪರಿಹಾರ ಕೊಡಬಹುದು ಎಂದು ಹೇಳಿದರು.

ಅಲ್ಲದೆ, ಅರ್ಜಿದಾರರು ಅರ್ಜಿಯನ್ನು ವಾಪಸ್ ಪಡೆಯಿರಿ, ಇಲ್ಲದಿದ್ದರೆ ದೊಡ್ಡ ಮೊತ್ತದ ದಂಡ ಹಾಕಿ ಅರ್ಜಿಯನ್ನು ವಜಾಗೊಳಿಸಲಾಗುವುದು. ಆಯ್ಕೆ ನಿಮ್ಮ ಮುಂದಿದೆ ಎಂದು ಅರ್ಜಿದಾರರಿಗೆ ಹೇಳಿತು. ಅರ್ಜಿ ವಾಪಸ್ ಪಡೆದುಕೊಳ್ಳುವುದಾಗಿ ಅರ್ಜಿದಾರರು ಹೇಳಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

ನಮ್ಮ ದೇಶಕ್ಕೆ 2 ರಿಂದ 3 ಲಕ್ಷ ವರ್ಷಗಳ ಸುದೀರ್ಘ ಇತಿಹಾಸವಿದೆ. ಬ್ರಿಟಿಷರು ಬಂದು ಇಲ್ಲಿ ಆಳಿ ಹೋದರು. ಅವರು ಹೇಳಿದ ದಿನಾಂಕದಂದು ಸ್ವಾತಂತ್ರ್ಯ ದಿನಾಚರಣೆ ಸರಿಯಲ್ಲ. ಅದರ ಬದಲಿಗೆ ನಮ್ಮದೇ ಆದ ಪ್ರತ್ಯೇಕ ರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು. ಸ್ವಾತಂತ್ರ್ಯ ದಿನಾಚರಣೆ ದಿನವನ್ನು ಮರುಪರಿಗಣಿಸಬೇಕು ಎಂದು ಭಾರತವಷ್ಟೇ ಅಲ್ಲ ಬ್ರಿಟಿಷ್-ಫ್ರೆಂಚ್ ಹಾಗೂ ಡಚ್ಚರ್ ಆಳ್ವಿಕೆಯಲ್ಲಿದ್ದ 132 ದೇಶಗಳಿಗೂ ಮನವಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಅದೇ ರೀತಿ ಭೌಗೋಳಿಕವಾಗಿ ಭಾರತ ಕೇಂದ್ರ ಸ್ಥಾನದಲ್ಲಿದೆ. ಉತ್ತರದಲ್ಲಿ ಹಿಮಾಲಯ, ದಕ್ಷಿಣದಲ್ಲಿ ಹಿಂದೂ ಮಹಾಸಾಗರ, ಪೂರ್ವದಲ್ಲಿ ದಟ್ಟ ಅರಣ್ಯ, ಪಶ್ಚಿಮದಲ್ಲಿ ಮರುಭೂಮಿ ಹೊಂದಿದೆ. ಸೌರ ವ್ಯವಸ್ಥೆಯಲ್ಲಿ ವರ್ಷದಲ್ಲಿ ನಾಲ್ಕು ಋತುಗಳು ಬರಲಿವೆ. ಅವುಗಳನ್ನು ಆಧರಿಸಿ ಮಾರ್ಚ್ 20 -21ರಂದು ರಾಷ್ಟ್ರೀಯ ಭೂಮಿ ದಿನ, ಜೂನ್ 20-21ರಂದು ಪ್ರಾಚೀನ ಭಾರತೀಯರ ರಾಷ್ಟ್ರೀಯ ದಿನ, ಸೆಪ್ಟಂಬರ್ 22-23 ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ, ಡಿಸೆಂಬರ್ 21-22 ವಿಶ್ವ ವಿಜ್ಞಾನಿಗಳ ದಿನಾಚರಣೆ ಹೆಸರಲ್ಲಿ ಪ್ರತ್ಯೇಕ ರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಬೇಕು. ಇದರಿಂದ ದೇಶಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಒಳ್ಳೆಯದಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

ಇದನ್ನೂ ಓದಿ: 20 ವರ್ಷಗಳಿಂದ ಗುತ್ತಿಗೆ ಸೇವೆ: ಕಾಯಂಗೊಳಿಸಲು ಹೈಕೋರ್ಟ್ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.