ETV Bharat / state

ನಾಗಮಂಗಲ ಘಟನೆ: ಬಿಜೆಪಿ ಸತ್ಯಶೋಧನಾ ಸಮಿತಿ ರಚನೆ; ಹಳ್ಳಿಗಳಲ್ಲೂ ಪ್ರತಿಭಟನೆ ಎಚ್ಚರಿಕೆ ನೀಡಿದ ಸಂಸದ ತೇಜಸ್ವಿ ಸೂರ್ಯ - BJP Fact Finding Committee - BJP FACT FINDING COMMITTEE

ನಾಗಮಂಗಲದಲ್ಲಿ ಗಣೇಶ ನಿಮಜ್ಜನ ಮೆರವಣಿಗೆ ವೇಳೆ ನಡೆದ ಅಹಿತಕರ ಘಟನೆ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಸತ್ಯಶೋಧನಾ ಸಮಿತಿ ರಚಿಸಿದ್ದಾರೆ.

bjp
ಡಾ.ಅಶ್ವತ್ಥನಾರಾಯಣ, ತೇಜಸ್ವಿ ಸೂರ್ಯ (ETV Bharat)
author img

By ETV Bharat Karnataka Team

Published : Sep 13, 2024, 3:45 PM IST

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ನಿಮಜ್ಜನ ಮೆರವಣಿಗೆ ವೇಳೆ ಅಹಿತಕರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ರಾಜ್ಯ ಬಿಜೆಪಿ ನಾಯಕರು, ಇದೀಗ ಸತ್ಯಶೋಧನಾ ಸಮಿತಿ ರಚನೆ ಮಾಡಿದ್ದಾರೆ. ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ನೇತೃತ್ವದ ಸಮಿತಿ ರಚಿಸಿ ವರದಿಗೆ ಸೂಚನೆ ನೀಡಲಾಗಿದೆ.

ನಾಗಮಂಗಲದಲ್ಲಿ ಮೊನ್ನೆ ನಡೆದ ಗಣೇಶ ನಿಮಜ್ಜನ ಮೆರವಣಿಗೆಯ ಸಂದರ್ಭದಲ್ಲಿ ಕೆಲ ಯುವಕರಿಂದ ಆದಂತಹ ದುರ್ಘಟನೆಯ ಕುರಿತು ಸತ್ಯಾಸತ್ಯತೆ ತಿಳಿಯಲು ರಾಜ್ಯ ಬಿಜೆಪಿಯಿಂದ ಸತ್ಯಶೋಧನಾ ತಂಡ ರಚಿಸಲಾಗಿದೆ. ಐವರ ಸಮಿತಿ ರಚಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲಿಸಿ, ಸಮಗ್ರ ವರದಿಯನ್ನು ಒಂದು ವಾರದೊಳಗೆ ನೀಡುವಂತೆ ನಿರ್ದೇಶನ ನೀಡಿದ್ದಾರೆ.

bjp
ಬಿಜೆಪಿ ಸತ್ಯಶೋಧನಾ ಸಮಿತಿ ರಚನೆ (ETV Bharat)

ಸತ್ಯಶೋಧನಾ ಸಮಿತಿ ಸದಸ್ಯರು:

ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಡಿಸಿಎಂ

ಭೈರತಿ ಬಸವರಾಜ್, ಮಾಜಿ ಸಚಿವ

ಕೆಸಿ ನಾರಾಯಣಗೌಡ, ಮಾಜಿ ಸಚಿವ

ಲಕ್ಷ್ಮೀ ಅಶ್ವೀನ್ ಗೌಡ, ರಾಜ್ಯ ಕಾರ್ಯದರ್ಶಿ

ಭಾಸ್ಕರ್ ರಾವ್, ನಿವೃತ್ತ ನಗರ ಪೊಲೀಸ್ ಆಯುಕ್ತ

ಹಳ್ಳಿ ಹಳ್ಳಿಯಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಸಂಸದ ತೇಜಸ್ವಿ ಸೂರ್ಯ: ಇನ್ನೊಂದೆಡೆ, ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ, ಇಡೀ ಬಿಜೆಪಿ ನಾಗಮಂಗಲ ಜನತೆಯೊಂದಿಗಿದೆ. ಧೈರ್ಯವಾಗಿ ಗಣಪತಿ ಹಬ್ಬವನ್ನು ಆಚರಿಸಿ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೇ ಹೊರತು ಅಮಾಯಕರ ವಿರುದ್ಧವಲ್ಲ. ಗಲಭೆಗೊಳಗಾದವರ ವಿರುದ್ಧ ಪ್ರಕರಣ ದಾಖಲಿಸುತ್ತಾ ಹೋದರೆ ಹಳ್ಳಿ-ಹಳ್ಳಿಯಲ್ಲಿಯೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗಮಂಗಲದಲ್ಲಿ ದೊಡ್ಡ ಗಲಾಟೆ ಆಗಿದ್ದರೂ ಗೃಹ ಸಚಿವರು ಇದು ಸಣ್ಣ ಗಲಾಟೆ ಅಂತ ಹೇಳ್ತಾರೆ. ನಿಮ್ಮ ಮನೆ ಮುಂದೆ ಗಣಪತಿ ಇಟ್ಟಾಗ ಅಲ್ಲಿ ಬಂದು ಗಲಾಟೆ ಮಾಡಿ ನಿಮ್ಮ ಮನೆ ಮೇಲೆ ಕಲ್ಲು ಎಸೆದಾಗಲೂ ಸಣ್ಣ ಸುದ್ದಿ ಅಂತನೇ ಹೇಳ್ತಿರಾ ಗೃಹ ಸಚಿವರೇ? ಎಂದು ಪ್ರಶ್ನಿಸಿದರು. ಘಟನೆ ಸಂಬಂಧ ಹಿಂದೂ ಯುವಕರ ಮೇಲೆಯೇ ಹೆಚ್ಚಿನ ಕೇಸ್ ಹಾಕಿದ್ದಾರೆ. ಕರ್ನಾಟಕದಲ್ಲಿ ಗಣಪತಿ ಇಡಲು ಅವಕಾಶವೇ ಇಲ್ಲವಾ? ಕರ್ನಾಟಕದಲ್ಲಿ ಸಂವಿಧಾನದ ಪ್ರಕಾರ ಸರ್ಕಾರ ನಡೆಯುತ್ತಿದೆಯಾ? ಎಂದು ಪ್ರಶ್ನಿಸಿದರು.

ಇಡೀ ಬಿಜೆಪಿ ನಿಮ್ಮ ಜೊತೆ ಇದೆ ಎಂದು ನಾಗಮಂಗಲ ಯುವಕರಿಗೆ ಹೇಳಲು ಬಯಸುತ್ತೇನೆ. ಧೈರ್ಯವಾಗಿ ಗಣಪತಿ ಹಬ್ಬವನ್ನು ಆಚರಣೆ ಮಾಡಿ. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ಯಾರು ಕಲ್ಲು ತೂರಿದರು, ಗಲಾಟೆ ಮಾಡಿದರೋ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಹಿಂದೂ ಯುವಕರ ಮೇಲೆ ಹಾಕಿರುವ ಪ್ರಕರಣ ವಾಪಸ್ ಪಡೆಯಬೇಕು. ಗಲಭೆಗೆ ತುತ್ತಾದವರ ಮೇಲೆ ಕೇಸ್ ಹಾಕಿದರೆ ಪ್ರತಿ ಹಳ್ಳಿಯಲ್ಲೂ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ (ETV Bharat)

ಇಲ್ಲಿ ಮೀಸಲಾತಿ ಪರ, ವಿದೇಶದಲ್ಲಿ ಮೀಸಲಾತಿ ವಿರುದ್ಧ: ಕಳೆದ ನಾಲ್ಕೈದು ದಿನಗಳಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕದಲ್ಲಿ ಭಾರತದ ವಿರುದ್ಧ ಮಾತನಾಡಿರುವುದನ್ನು ದೇಶ ಬಹಳ ಗಂಭೀರವಾಗಿ ಪರಿಗಣಿಸಿದೆ. ರಾಹುಲ್‌ ಗಾಂಧಿ ಭಾರತ ವಿರೋಧಿಗಳಿಗೆ ಹೊಸ ಶಕ್ತಿ ಕೊಟ್ಟ ರೀತಿ ಇದೆ. ಭಾರತದ ವಿರೋಧಿಗಳ ಜೊತೆ ರಾಹುಲ್ ಗಾಂಧಿ ಸ್ನೇಹಿತರಾಗಿದ್ದಾರೆ. ದೇಶದ ಒಳಗಡೆ ರಾಹುಲ್ ಗಾಂಧಿ ಬಿಜೆಪಿಯವರು ಮೀಸಲಾತಿ ತೆಗೆಯುತ್ತಾರೆ ಅಂತಾರೆ. ಆದರೆ ಅಮೆರಿಕಕ್ಕೆ ಹೋದಾಗ ಕಾಂಗ್ರೆಸ್ ಪಾರ್ಟಿಗೆ ಅನುಕೂಲವಾದರೆ ಮೀಸಲಾತಿ ತೆಗೆಯುತ್ತೇವೆ ಅಂತ ಹೇಳಿದ್ದಾರೆ. ನೆಹರು ಅವರಿಂದ ರಾಜೀವ್ ಗಾಂಧಿವರೆಗೂ ಕಾಂಗ್ರೆಸ್‌ನಲ್ಲಿ ಮೀಸಲಾತಿ ವಿರೋಧಿಸಿದ್ದಾರೆ. ಮೋದಿ ಬರುವವರೆಗೂ ಒಬಿಸಿಗೆ ಸಾಂವಿಧಾನಿಕ ಸ್ಥಾನಮಾನ ಸಿಕ್ಕಿರಲಿಲ್ಲ. ಭಾರತದ ಒಳಗೆ ಮೀಸಲಾತಿ ಪರವಾಗಿ ಹಾಗೂ ಅಮೆರಿಕದಲ್ಲಿ ಮೀಸಲಾತಿ ವಿರುದ್ಧ ಮಾತನಾಡಿದ್ದಾರೆ. ಇದು ಆಷಾಢಭೂತಿಯಾಗಿದ್ದು, ದೇಶದ ಜನ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ವಿಪಕ್ಷ ನಾಯಕರಾಗುವ ಅರ್ಹತೆ ರಾಹುಲ್​ಗಿಲ್ಲ: ಬಾಂಗ್ಲಾದೇಶದ ಪತ್ರಕರ್ತರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ. ಬಾಂಗ್ಲಾದೇಶ ಯುವಕರಿಗೆ ಭಾರತದ ವಿರುದ್ಧ ಧ್ವನಿ ಎತ್ತುವಂತೆ ಮಾಡಿದ ಪತ್ರಕರ್ತ ಇವರು. ರಾಹುಲ್ ಗಾಂಧಿ ಯಾಕೆ ಈ ವ್ಯಕ್ತಿ ಜೊತೆ ಓಡಾಡಬೇಕು. ಭಾರತದಲ್ಲಿ ಸಿಖ್​ಗಳಿಗೆ ಅವರ ಪೇಟಾ ಹಾಕಿಕೊಳ್ಳಲು ಅವಕಾಶ ಇಲ್ಲ ಅಂತ ಹೇಳ್ತಾರೆ. ಜೀವಂತವಾಗಿ ಸಿಖ್‌ರನ್ನು ಸುಟ್ಟಿದ್ದು ನಿಮ್ಮ ಸರ್ಕಾರದಲ್ಲಿಯೇ ಆಗಿದ್ದು. ನಿಮ್ಮ ಅಜ್ಜಿ ಅಧಿಕಾರದಲ್ಲಿ ಇದ್ದಾಗ ಆಗಿದೆ. ಸಿಕ್ಕ ಸಿಕ್ಕಲ್ಲಿ ಭಾರತದ ಮರ್ಯಾದೆ ತೆಗೆಯುತ್ತಿದ್ದಾರೆ. ದೇಶದ ವಿಪಕ್ಷ ನಾಯಕ ಆಗಲು ರಾಹುಲ್ ಗಾಂಧಿಗೆ ಅರ್ಹತೆ ಇಲ್ಲ ಎಂದು ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸರ್ಕಾರ ಪೊಲೀಸರನ್ನು ನಿಷ್ಕ್ರಿಯಗೊಳಿಸಿದೆ; ಶುಕ್ರವಾರ ನಾಗಮಂಗಲಕ್ಕೆ ಭೇಟಿ ನೀಡುವೆ: ಹೆಚ್.ಡಿ.ಕುಮಾರಸ್ವಾಮಿ - H D Kumaraswamy

ETV Bharat Logo

Copyright © 2025 Ushodaya Enterprises Pvt. Ltd., All Rights Reserved.