ETV Bharat / state

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆ: ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ, ಎನ್​ಡಿಎಗೆ ಮುಖಭಂಗ - KARNATAKA ASSEMBLY BYELECTION

ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಎನ್​ಡಿಎ ಮುಖಭಂಗ ಅನುಭವಿಸಿದೆ.

Assembly bypoll ಕರ್ನಾಟಕ ಉಪಚುನಾವಣೆ
ಕನಾರ್ಟಕ ಉಪಚುನಾವಣೆ (ETV Bharat)
author img

By ETV Bharat Karnataka Team

Published : Nov 23, 2024, 9:16 AM IST

ಬೆಂಗಳೂರು: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ವಶಕ್ಕೆ ಪಡೆದಿದೆ. ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ.

ಚನ್ನಪಟ್ಟಣ ಜಿದ್ದಾಜಿದ್ದಿ: ಚನ್ನಪಟ್ಟಣದಲ್ಲಿ ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ್ ಮಧ್ಯೆ ನೇರ ಪೈಪೋಟಿ ಉಂಟಾಗಿತ್ತು. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಸಿ. ಪಿ. ಯೋಗೇಶ್ವರ್ 358 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಬಳಿಕ ಎರಡು, ಮೂರು, ನಾಲ್ಕು ಮತ್ತು ಐದನೇ ಸುತ್ತಿನಲ್ಲಿ ನಿಖಿಲ್ ಮುನ್ನಡೆ ಸಾಧಿಸಿದರು. ಐದನೇ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆಗೆ ನಿಖಿಲ್ 25649 ಮತ ಪಡೆದಿದ್ದರೆ ಮತ್ತು ಸಿಪಿ ಯೋಗೇಶ್ವರ್ 24343 ಮತ ಪಡೆದು ಹಿನ್ನಡೆ ಅನುಭವಿಸಿದ್ದರು. ಬಳಿಕ ಸಿಪಿವೈ ಮುನ್ನಡೆ ಸಾಧಿಸಿದ್ದು, 10ನೇ ಸುತ್ತಿನ ವೇಳೆ 15,000 ಲೀಡ್ ಪಡೆದಿದ್ದರು. 11ನೇ ಸುತ್ತಿನ‌ ಮತ ಎಣಿಕೆ ಮುಕ್ತಾಯದ ಬಳಿಕ ಯೋಗೇಶ್ವರ್ ಅವರು 23210 ಮತಗಳಿಂದ ಭರ್ಜರಿ ಅಂತರ ಕಾಯ್ದುಕೊಂಡಿದ್ದರು. 14ನೇ ಸುತ್ತಿನ ಬಳಿಕ ನಿಖಿಲ್ 59914 ಮತ, ಸಿಪಿವೈ 84166 ಮತ ಪಡೆದಿದ್ದಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ 24252 ಮತಗಳಿಂದ ಮುನ್ನಡೆಯಲ್ಲಿದ್ದರು.

ಅಂತಿಮ ಸುತ್ತಿನ ಬಳಿಕ ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರು 82229 ಮತ ಪಡೆದು ಸೋತರು. ಕಾಂಗ್ರೆಸ್​ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್​ ಅವರು 112642 ಮತಗಳನ್ನು ಗಳಿಸಿ, 25413 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

Karnataka bypoll assembly election ಕರ್ನಾಟಕ ಉಪಚುನಾವಣೆ
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ (ETV Bharat)

ಶಿಗ್ಗಾಂವಿ ಕಣ: ಈ ಕ್ಷೇತ್ರದಲ್ಲಿ ಎನ್​ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಮಧ್ಯೆ ಸ್ಪರ್ಧೆ ಇತ್ತು. ಮೊದಲ ಸುತ್ತಿನಲ್ಲಿ ಭರತ್ ಬೊಮ್ಮಾಯಿಗೆ 4223 ಮತ, ಯಾಸೀರ್ ಖಾನ್ ಪಠಾಣ್​ಗೆ 3423 ಮತಗಳು ಬಂದಿವೆ. ಈ ಮೂಲಕ ಭರತ್ 800 ಮತಗಳ ಆರಂಭಿಕ ಮುನ್ನಡೆ ಸಾಧಿಸಿದ್ದರು. ನಂತರ ಅಲ್ಪ ಮತಗಳ ಅಂತರದಿಂದ ಭರತ್ ಮುನ್ನಡೆಯಲಿದ್ದರು. 6ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ಬಳಿಕ ಭರತ್ ಬೊಮ್ಮಾಯಿ 32,787 ಮತ ಪಡೆದರೆ, ಕಾಂಗ್ರೆಸ್​ನ ಯಾಸೀರ್ ಖಾನ್ ಪಠಾಣ್ 32,125 ಮತ ಪಡೆದು, 662 ಮತಗಳಿಂದ ಹಿನ್ನಡೆಯಲ್ಲಿದ್ದರು. ಬಳಿಕ ಮುನ್ನಡೆ ಪಡೆದು, 9ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾದಾಗ ಯಾಸೀರ್ ಖಾನ್ ಪಠಾಣ್ 355 ಮತಗಳ ಮುನ್ನಡೆಯಲ್ಲಿದ್ದರು. 10ನೇ ಸುತ್ತಿನಲ್ಲಿ 6479 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. 12ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 12,251 ಮತಗಳಿಂದ ಮುಂದಿದ್ದರು. ಬಳಿಕ 14ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆಗೆ ಕಾಂಗ್ರೆಸ್ 83,400 ಮತ, ಬಿಜೆಪಿಯು 69972 ಪಡೆದಿದೆ. ಈ ಮೂಲಕ ಯಾಸೀರ್ ಖಾನ್ ಪಠಾಣ್ 13,428 ಮುನ್ನಡೆ ಸಾಧಿಸಿದ್ದರು.

ಬೊಮ್ಮಾಯಿ ಸೋಲು: ಶಿಗ್ಗಾಂವಿಯಲ್ಲಿ 16ನೇ ಸುತ್ತಿನಲ್ಲಿ ಕಾಂಗ್ರೆಸ್ 13448 ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ 93,234 ಮತ ಪಡೆದರೆ, ಬಿಜೆಪಿಯ ಭರತ್ ಬೊಮ್ಮಾಯಿಗೆ 79,756 ಮತಗಳು ಬಂದಿವೆ. ಯಾಸೀರ್ ಪಠಾಣ್ ಗೆದ್ದಿದ್ದು, ಭರತ್ ಬೊಮ್ಮಾಯಿ ಸೋಲನುಭವಿಸಿದ್ದಾರೆ.

ಸಂಡೂರಲ್ಲಿ ಕಾಂಗ್ರೆಸ್​ಗೆ ಜಯ : ಸಂಡೂರಲ್ಲಿ ಎನ್​ಡಿಎ ಅಭ್ಯರ್ಥಿ ಬಂಗಾರು ಹನಮಂತು ಮತ್ತು ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಮಧ್ಯೆ ನೇರ ಹಣಾಹಣೆ ಉಂಟಾಗಿದೆ. ಅನ್ನಪೂರ್ಣ ಇ.ತುಕಾರಾಂ ಮೊದಲ ಸುತ್ತಿನಲ್ಲಿ 2,586 ಮತ ಮತ್ತು 2ನೇ ಸುತ್ತಿನಲ್ಲಿ 2715 ಮತಗಳ ಮುನ್ನಡೆ ಸಾಧಿಸಿದ್ದಾರೆ. ಅಂಚೆ ಮತಗಳಲ್ಲಿ ಮೂರು ಮತಗಳ ಮುನ್ನಡೆ ಇದೆ. ಈವರೆಗೆ ಅನ್ನಪೂರ್ಣ 11770 ಮತ ಮತ್ತು ಬಂಗಾರು ಹನಮಂತು 9055 ಮತಗಳನ್ನು ಪಡೆದಿದ್ದಾರೆ. ಬಳಿಕ 5ನೇ ಸುತ್ತಿನಲ್ಲಿ ಕಾಂಗ್ರೆಸ್ 23,877 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ 23672 ಮತ ಗಳಿಸಿದ್ದಾರೆ. ಅನ್ನಪೂರ್ಣ ತುಕಾರಂ ಅವರು 205 ಮತಗಳಿಂದ ಮುನ್ನಡೆಯಲಿದ್ದರು. 12 ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 6562 ಮತಗಳ‌ ಮುನ್ನಡೆ ‌ಕಾಯ್ದುಕೊಂಡಿದ್ದರು. ಈ ವೇಳೆ ಕಾಂಗ್ರೆಸ್ - 67124 ಮತ ಪಡೆದಿದ್ದರೆ, ಬಿಜೆಪಿ 60562 ಮತಗಳನ್ನು ಗಳಿಸಿತ್ತು. 15ನೇ ಸುತ್ತಿನ ಮತ ಎಣಿಕೆಯ ಬಳಿಕ ಅನ್ನಪೂರ್ಣ ತುಕಾರಾಂ 8239 ಮತ್ತು 18ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 9568 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಸಂಡೂರಿನಲ್ಲಿ ಅಂತಿಮ ಹಂತದ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ 93,616 ಮತ್ತು ಬಿಜೆಪಿ 83967 ಮತ ಪಡೆದಿದೆ. ಅನ್ನಪೂರ್ಣ ತುಕಾರಾಂ 9649 ಮತಗಳ ಅಂತರದಿಂದ ಗೆದ್ದಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಐತಿಹಾಸಿಕ ಜಯದತ್ತ 'ಮಹಾಯುತಿ': ಮುಗ್ಗರಿಸಿದ 'ಮಹಾ ವಿಕಾಸ್ ಅಘಾಡಿ'

ದೇವಿ ದರ್ಶನ ಪಡೆದ ಅನ್ನಪೂರ್ಣ: ಮತ ಎಣಿಕೆ ಮಧ್ಯೆ ಅನ್ನಪೂರ್ಣ ತುಕಾರಾಂ ಅವರು ಕುಟುಂಬ ಸಮೇತರಾಗಿ ಬಂದು ಬಳ್ಳಾರಿಯ ಅಧಿದೇವತೆ ಕನಕ ದುರ್ಗಮ್ಮ ದೇವಿಯ ದರ್ಶನ ಪಡೆದರು. ಇದೇ ವೇಳೆ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಸಂಭ್ರಮಾಚರಣೆ: ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆದ್ದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಆಯಾ ಕ್ಷೇತ್ರದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.