ETV Bharat / state

ಶಿವಮೊಗ್ಗ ಕಂಬಳ ಆಯೋಜನೆಗೆ 'ಕಾಂತಾರ' ಸಿನಿಮಾ ಪ್ರೇರಣೆ - Shivamogga Kambala

ಶಿವಮೊಗ್ಗ ಕಂಬಳಕ್ಕೆ ಬೇಕಾದ ಜಾಗದ ವ್ಯವಸ್ಥೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​.ಈಶ್ವರಪ್ಪ ಉಚಿತವಾಗಿ ಮಾಡಿಕೊಟ್ಟಿದ್ದು, ಶೀಘ್ರದಲ್ಲೇ ಭೂಮಿಪೂಜೆ ಮಾಡಿ ಕರೆ ನಿರ್ಮಿಸಲಾಗುವುದು ಎಂದು ಶಿವಮೊಗ್ಗ ಕಂಬಳ ಸಮಿತಿ ಅಧ್ಯಕ್ಷ ಲೋಕೇಶ್ ಶೆಟ್ಟಿ ತಿಳಿಸಿದ್ದಾರೆ.

ಕಂಬಳ ಸಾಂದರ್ಭಿಕ ಚಿತ್ರ
ಕಂಬಳ ಕೂಟದ ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Aug 20, 2024, 5:46 PM IST

Updated : Aug 20, 2024, 7:22 PM IST

ಮಂಗಳೂರು: ಈ ಬಾರಿಯ ಕಂಬಳ ಋತುವಿನ ವೇಳಾಪಟ್ಟಿ ಸಿದ್ಧಗೊಂಡಿದೆ. ಕಳೆದ ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಿದ್ದರೆ, ಈ ಬಾರಿ ಶಿವಮೊಗ್ಗ ಕಂಬಳ ಹೊಸ ಸೇರ್ಪಡೆಯಾಗಿದೆ. ಇದೀಗ ಕರಾವಳಿಯ ಜಾನಪದ ಕ್ರೀಡೆ ಗಡಿ ದಾಟಿ ತನ್ನ ಯಶಸ್ಸು ಸಾಧಿಸುತ್ತಿದೆ. ಈ ಬಾರಿ ಕಂಬಳ ಋತುವಿನ ಮೊದಲ ಕಂಬಳ ಬೆಂಗಳೂರಿನಲ್ಲೂ ಕೊನೆಯ ಕಂಬಳ ಶಿವಮೊಗ್ಗದಲ್ಲೂ ನಡೆಯಲಿದೆ.

ಕಂಬಳ ಆಯೋಜನೆ ಸುದ್ದಿಗೋಷ್ಠಿ (ETV Bharat)

ಕಾಂತಾರ ಸಿನಿಮಾದಲ್ಲಿ ದೈವಾರಾಧನೆಯ ಜೊತೆಗೆ ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ಸೊಗಸಾಗಿ ಚಿತ್ರಿಸಲಾಗಿತ್ತು. ಕಂಬಳ ಕೋಣವನ್ನು ರಿಷಬ್ ಶೆಟ್ಟಿ ಓಡಿಸುವ ದೃಶ್ಯ ಎಲ್ಲರ ಮನಸ್ಸಲ್ಲೂ ಅಚ್ಚೊತ್ತಿತ್ತು. ಈ ಸಿನಿಮಾದ ಪ್ರೇರಣೆಯಿಂದಲೇ ಶಿವಮೊಗ್ಗದಲ್ಲಿ ಕಂಬಳ ನಡೆಸಲು ಆಯೋಜಕರು ಮುಂದೆ ಬಂದಿದ್ದಾರೆ. ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಕಂಬಳ ಆಯೋಜನೆಯಾಗುತ್ತಿದ್ದು, 2025ರ ಏಪ್ರಿಲ್ 19 ಮತ್ತು 20ರಂದು ಕಂಬಳೋತ್ಸವ ನಡೆಯಲಿದೆ.

ಶಿವಮೊಗ್ಗ ಕಂಬಳವನ್ನು ಮಲೆನಾಡ ಕಂಬಳ ಎಂದು ಹೆಸರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ, ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ 3181 ಮತ್ತು 3182 ಹಾಗೂ ಶಿವಮೊಗ್ಗ ಕಂಬಳ ಸಮಿತಿ ಆಯೋಜಿಸುತ್ತಿದೆ. ತುಂಗೆಯ ತಟದಲ್ಲಿ ನಡೆಯುವ ಈ ಕಂಬಳವನ್ನು ತೀರ್ಥಹಳ್ಳಿ ಹೆಗಲತ್ತಿ ನಾಗಯಕ್ಷೆ ದೇವಸ್ಥಾನದ ನಾಗಪಾತ್ರಿ ಕಲ್ಪನಾ ಸಂತೋಷ್ ನಡೆಸಲು ಯೋಜಿಸಿದ್ದಾರೆ.

ಕಂಬಳ ನಡೆಸಲು ಅಪಾರ ಜಾಗದ ಅವಶ್ಯಕತೆಯಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ಅವರ ಪುತ್ರ ಕಾಂತೇಶ್ ಜಾಗದ ವ್ಯವಸ್ಥೆ ಒದಗಿಸಿದ್ದಾರೆ. ಅವರದೇ ಜಾಗದಲ್ಲಿ ಈ ಬಾರಿ ಶಿವಮೊಗ್ಗದ ಮೊದಲ ಕಂಬಳ ನಡೆಯುತ್ತಿದೆ. ಮೊದಲ ಕಂಬಳವನ್ನು ಅಚ್ಚುಕಟ್ಟಾಗಿ ನಡೆಸಲು ನಿರ್ಧರಿಸಲಾಗಿದೆ. ಕಂಬಳ ಕರೆ ನಿರ್ಮಾಣ, ಕಂಬಳಕ್ಕೆ ಬರುವ ಕೋಣಗಳಿಗೆ ನೀರು, ನೆರಳಿನ ವ್ಯವಸ್ಥೆಯನ್ನು ಲೋಪ ಬಾರದಂತೆ ಮಾಡಲು ತೀರ್ಮಾನಿಸಲಾಗಿದೆ.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾಹಿತಿ ನೀಡಿ, "ಕಂಬಳ ಕರಾವಳಿಯಲ್ಲಿ ಮನೆ ಮಾತಾಗಿದೆ. ಕಳೆದ ಬಾರಿ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿದೆ. ಈ ಬಾರಿ ಶಿವಮೊಗ್ಗದಲ್ಲಿ ಕಂಬಳ ನಡೆಸಲು ಮನವಿ ಮಾಡಿದ್ದು, ಇದನ್ನು ವಿಶೇಷ ಮಹಾಸಭೆಯಲ್ಲಿ ಅನುಮೋದನೆ ಪಡೆದು ಅವರಿಗೆ ಕೆಲವೊಂದು ಸೂಚನೆಗಳನ್ನು ಕೊಟ್ಟು, ಅವುಗಳನ್ನು ಪಾಲಿಸಿದ್ದಲ್ಲಿ ಕಂಬಳ ನಡೆಸಲು ತಿಳಿಸಿದ್ದೇವೆ. ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ನೀಡುತ್ತೇವೆ. ಬೆಂಗಳೂರಿನಲ್ಲಿ ಮಾಡಿದಂತೆ ನೀರು, ನೆರಳು ಮತ್ತು ಕರೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಅದೇ ರೀತಿ ಕೋಣಗಳನ್ನು ಕೊಂಡೊಯ್ಯುವ ವ್ಯವಸ್ಥೆ ಅದಕ್ಕೆ ಬೇಕಾದ ಆರೈಕೆಯನ್ನು ವ್ಯವಸ್ಥಿತವಾಗಿ ಮಾಡಿದರೆ ಬೆಂಗಳೂರು ಕಂಬಳದಂತೆ ಶಿವಮೊಗ್ಗ ಕಂಬಳವು ಯಶಸ್ವಿಯಾಗಲಿದೆ" ಎಂದರು.

ರೋಟರಿ ಮಾಜಿ ಉಪ ಗವರ್ನರ್ ಎಲ್ಯಾಸ್ ಸಾಂಟೀಸ್ ಮಾತನಾಡಿ, "ಮಲೆನಾಡು ಕಂಬಳ ನಡೆಸುವ ವಿಷಯ ಬಂದದ್ದು ಕಲ್ಪನಾ ಸಂತೋಷ್​ ಅವರು ಸಿಕ್ಕಿದ ನಂತರ. ಕರಾವಳಿಯಲ್ಲಿ ಕಂಬಳ ಪ್ರಸಿದ್ಧವಾಗಿದೆ. ಶಿವಮೊಗ್ಗದಲ್ಲಿ ಕಂಬಳ ನಡೆಸಲು ಕಾರಣವಾಗಿದ್ದು ಕಾಂತಾರ ಸಿನಿಮಾ. ಬೆಂಗಳೂರಿನಲ್ಲಿ ಮಾಡಿದ ನಂತರ ಶಿವಮೊಗ್ಗದಲ್ಲೂ ಮಾಡಲು ಪ್ರೇರಣೆಯಾಯಿತು. ಇದಕ್ಕೆ ಬೇಕಾದ ಜಾಗದ ವ್ಯವಸ್ಥೆಯನ್ನು ಉಚಿತವಾಗಿ ಕೆ.ಎಸ್.ಈಶ್ವರಪ್ಪನವರು ಮಾಡಿದ್ದಾರೆ" ಎಂದರು.

ಶಿವಮೊಗ್ಗ ಕಂಬಳ ಸಮಿತಿ ಅಧ್ಯಕ್ಷ ಲೋಕೇಶ್ ಶೆಟ್ಟಿ ಮಾತನಾಡಿ, "ಕಲ್ಪನಾ ಅವರು ಶಿವಮೊಗ್ಗದಲ್ಲಿ ಕಂಬಳ ನಡೆಸಲು ಮುಂದಾಗಿದ್ದು, ಕಂಬಳಕ್ಕೆ ಜಾಗ ನಿರ್ಧರಿಸಿದ್ದೇವೆ. ಇನ್ನು ಸ್ವಲ್ಪ ದಿನಗಳಲ್ಲಿ ಭೂಮಿ ಪೂಜೆ ಮಾಡುತ್ತೇವೆ. ಬಳಿಕ ಕರೆ ನಿರ್ಮಾಣ ಮಾಡುತ್ತೇವೆ. ಕಂಬಳ ನೀಲ ನಕಾಶೆ ತಯಾರಾಗಿದೆ" ಎದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ಅ.26ರಂದು ಕಂಬಳ ಋತು ಆರಂಭ, ಶಿವಮೊಗ್ಗದಲ್ಲಿ ಫೈನಲ್ ಸ್ಪರ್ಧೆ - Kambala Season

Last Updated : Aug 20, 2024, 7:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.