ETV Bharat / state

ಜೂ.ರಾಜ್‌ಕುಮಾರ್​ಗೆ 'ಡಾ.ರಾಜ್‌ಕುಮಾರ್ ಕಲಾಭವನ' ಸ್ಥಾಪಿಸುವ ಮಹದಾಸೆ: ನೆರವು ನೀಡುವಂತೆ ಅಭಿಮಾನಿಗಳಲ್ಲಿ ಮನವಿ

ಹಾವೇರಿಯ ಜೂನಿಯರ್ ರಾಜ್‌ಕುಮಾರ್ ಖ್ಯಾತಿಯ ಅಶೋಕ ಬಸ್ತಿ ಅವರು 2019ರಿಂದಲೂ ಹಾವೇರಿಯಲ್ಲಿ 'ಡಾ.ರಾಜ್‌ಕುಮಾರ್ ಕಲಾಭವನ' ಸ್ಥಾಪಿಸಲು ಪ್ರಯತ್ನಿಸುತ್ತಿದ್ದು ಹಲವು ಸಮಸ್ಯೆಗಳು ಎದುರಾಗಿ ನಿರ್ಮಾಣ ಕೆಲಸ ಬಾಕಿಯಾಗಿದೆ. ಇದೀಗ ತಮ್ಮ ಅಭಿಮಾನಿಗಳು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

junior-rajkumar-ashoka-basti-
ಜೂನಿಯರ್ ರಾಜಕುಮಾರ್ ಅಶೋಕ ಬಸ್ತಿ
author img

By ETV Bharat Karnataka Team

Published : Feb 1, 2024, 12:47 PM IST

Updated : Feb 1, 2024, 2:05 PM IST

ಜೂನಿಯರ್ ರಾಜ್‌ಕುಮಾರ್ ಖ್ಯಾತಿಯ ಅಶೋಕ ಬಸ್ತಿ ಮನವಿ

ಹಾವೇರಿ: ಜಿಲ್ಲೆಯ ದೇವಗಿರಿ ಗ್ರಾಮದ ಅಶೋಕ ಬಸ್ತಿ ಅಂದರೆ ಯಾರು ಅಂತ ತಕ್ಷಣಕ್ಕೆ ಗೊತ್ತಾಗದೇ ಇರಬಹುದು. ಆದರೆ ಜೂನಿಯರ್ ರಾಜ್‌ಕುಮಾರ್ ಅಂದರೆ ಥಟ್ಟನೆ ಅವರ ಚಿತ್ರ ಕಣ್ಮುಂದೆ ಬರುತ್ತದೆ.

ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರನ್ನೇ ಹೋಲುವ ಹಲವು ಜೂನಿಯರ್ ರಾಜ್‌ಕುಮಾರ್​ ಪಾತ್ರಧಾರಿಗಳಿದ್ದಾರೆ. ಆದರೆ ಅಂಥವರಲ್ಲಿ ಡಾ.ರಾಜ್ ಅವರನ್ನು ಹಾವಭಾವ, ಧ್ವನಿ ಸೇರಿದಂತೆ ಅಭಿನಯದಲ್ಲೂ ಹೆಚ್ಚು ಹೋಲುವ ವ್ಯಕ್ತಿ ಜೂನಿಯರ್ ರಾಜ್ ಅಶೋಕ ಬಸ್ತಿ. ಈ ಪ್ರಸಿದ್ದಿಯಿಂದಲೇ ಅಶೋಕ ಬಸ್ತಿ ಇದುವರೆಗೂ ಸುಮಾರು 25 ಸಾವಿರ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ದೇಶ, ವಿದೇಶಗಳಲ್ಲೂ ರಾಜ್‌ಕುಮಾರ್​ ಪಾತ್ರ ಮಾಡುವ ಮೂಲಕ ಹೆಸರುವಾಸಿಯಾಗಿದ್ದಾರೆ. ಈ ಕಲಾವಿದನಿಗೆ ಹಾವೇರಿಯಲ್ಲಿ ಡಾ.ರಾಜ್‌ಕುಮಾರ್ ಕಲಾಭವನ ಸ್ಥಾಪಿಸಬೇಕು ಎಂಬ ಕನಸಿದೆ.

ಈ ಹಿನ್ನೆಲೆಯಲ್ಲಿ ಅಶೋಕ ಬಸ್ತಿ ಅವರು ಹಾವೇರಿಯಲ್ಲಿ ಸುಮಾರು ಏಳೂವರೆ ಗುಂಟೆ ಜಾಗದಲ್ಲಿ ಅಂದಾಜು 5 ಕೋಟಿ ರೂಪಾಯಿ ವೆಚ್ಚದಲ್ಲಿ ಡಾ.ರಾಜ್‌ಕುಮಾರ್​ ಕಲಾಭವನ ಸ್ಥಾಪಿಸುವ ಕನಸು ಕಂಡಿದ್ದರು. ಅದರಂತೆ ನಿಗದಿಪಡಿಸಿದ ಸ್ಥಳದಲ್ಲಿ 2019ರ ಮಾರ್ಚ್ 3ರಂದು ಪುನೀತ್ ರಾಜ್‌ಕುಮಾರ್‌ ಅವರಿಂದ ಶಿಲಾನ್ಯಾಸವನ್ನೂ ನೇರವೇರಿಸಿದ್ದರು. ಆದರೆ ನಂತರದಲ್ಲಿ ಕಲಾಭವನ ನಿರ್ಮಾಣದ ಕನಸು ಕನಸಾಗಿಯೇ ಉಳಿದಿದೆ. ಕಲಾಭವನ ಕಟ್ಟಡ ಕಟ್ಟಲು ಆರಂಭಿಸಿ ನಿಗದಿಪಡಿಸಿದ ಸ್ಥಳದಲ್ಲಿ ಕೊಳವೆ ಬಾವಿಯನ್ನೂ ಕೊರೆಸಲಾಗಿದೆ.

ಕಲಾಭವನ ಸ್ಥಾಪನೆಯ ಪಿಲ್ಲರ್ ಹಾಕಲು ಸುಮಾರು 36 ಗುಂಡಿಗಳನ್ನು ತೆಗೆಯಲಾಗಿದೆ. ಆದರೆ ಹಲವು ಅಡೆತಡೆಗಳಿಂದಾಗಿ ಅಲ್ಲಿಂದ ಮುಂದೆ ಕಾಮಗಾರಿ ಮುಂದುವರೆದಿಲ್ಲ. ಪುನೀತ್‌ ರಾಜ್‌ಕುಮಾರ್​ ಅಕಾಲಿಕ ಸಾವಿನಿಂದ ನಮಗೆ ಕಟ್ಟಡ ಕಟ್ಟಲು ಮನಸ್ಸು ಬರಲಿಲ್ಲ. ನಂತರ ಸುಧಾರಿಸಿಕೊಳ್ಳುವ ವೇಳೆಗೆ ಅತಿವೃಷ್ಠಿ ಕಾಡಿತು. ಆದಾದ ನಂತರ ನನ್ನ ಸ್ವಂತ ಕಲೆಯಿಂದ ಕಲಾಭವನ ನಿರ್ಮಿಸಲು ಮುಂದಾದೆ. ಕೊರೊನಾ ಮಹಾಸೋಂಕು ಬದುಕನ್ನು ಸಾಕಷ್ಟು ಅಸಹನೀಯ ಮಾಡಿತು ಎಂದರು.

ಕಲಾಭವನ ಇರಲಿ, ಅಂದಿನ ದಿನಗಳಲ್ಲಿ ಜೀವನ ನಡೆಸುವುದೂ ಕಷ್ಟವಾಯಿತು. ನಾನು ಹಾವೇರಿಯಲ್ಲಿದ್ದ ನನ್ನ ಸ್ವಂತ ಮನೆಯನ್ನು ಬೇರೆಯವರಿಗೆ ನೀಡಿ ದೇವಗಿರಿ ಗ್ರಾಮಕ್ಕೆ ಆಗಮಿಸಿ ಚಿಕ್ಕಮನೆಯಲ್ಲಿ ವಾಸಿಸುತ್ತಿದ್ದೇನೆ. ಇದೀಗ ಬರಗಾಲ ಬಿದ್ದಿದೆ. ರಾಜ್ಯದ ಜನ ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಪ್ರತಿವರ್ಷ ಒಂದಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಕಲಾಭವನವನ್ನು ನಾನು ಜೀವಂತವಾಗಿದ್ದಾಗಲೇ ನಿರ್ಮಿಸಬೇಕು. ಈ ಕುರಿತಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸಹ ನಿರೀಕ್ಷಿತ ನೆರವು ಸಿಗಲಿಲ್ಲ ಎಂದು ಅಶೋಕ ಬಸ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದರಿಂದ ಸಾಕಷ್ಟು ನೊಂದಿರುವ ಅಶೋಕ ಬಸ್ತಿ ಇದೀಗ ತಮ್ಮ ಕಲಾ ಪ್ರದರ್ಶನದ ನೆರವಿನೊಂದಿಗೆ ಕಲಾಭವನ ನಿರ್ಮಿಸುವ ಸಿದ್ದತೆ ನಡೆಸಿದ್ದಾರೆ. ರಾಜ್ಯದಲ್ಲಿ ಸುಮಾರು ಏಳು ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಒಬ್ಬೊಬ್ಬರು ಒಂದು ರೂಪಾಯಿ ಹಣ ನೀಡಿದರೂ ಸಾಕು ಡಾ.ರಾಜ್ ಕಲಾಭವನ ನಿರ್ಮಾಣವಾಗುತ್ತದೆ. ಆದರೆ ರಾಜ್‌ಕುಮಾರ್ ಅವ​ರಿಂದ ಅಭಿಮಾನಿ ದೇವರುಗಳು ಎಂದು ಕರೆಸಿಕೊಂಡಿರುವ ಅಭಿಮಾನಿಗಳು ನನಗೆ ಉಚಿತವಾಗಿ ಹಣ ನೀಡುವುದು ಬೇಡ. ಬದಲಿಗೆ ನನ್ನ ಕಾರ್ಯಕ್ರಮ ಆಯೋಜಿಸಿ. ಅದಕ್ಕೆ ನೀಡುವ ಸಂಭಾವನೆಯಲ್ಲಿ ಕಡಿಮೆ ಮಾಡಿ ಉಳಿದ ಹಣವನ್ನು ಕಲಾಭವನ ನಿರ್ಮಾಣಕ್ಕೆ ನೀಡಲಿ ಎಂದರು.

ಇದನ್ನೂ ಓದಿ: ಸಿನಿಮಾ ನಿರ್ಮಾಣ, ವಿತರಣಾ ಸಂಸ್ಥೆ ಆರಂಭಿಸಿದ ನಿರ್ಮಾಪಕ ಕೆ.ಮುನೀಂದ್ರ

Last Updated : Feb 1, 2024, 2:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.