ETV Bharat / state

ಮಂಡ್ಯ, ಕೋಲಾರ - ಹಾಸನ ಕ್ಷೇತ್ರಗಳು ಜೆಡಿಎಸ್​ಗೆ: ಹೆಚ್​ ಡಿ ಕುಮಾರಸ್ವಾಮಿ ವಿಶ್ವಾಸ

ಬಹುಶಃ ರಾಜ್ಯದಲ್ಲಿ ನಮಗೆ ಮಂಡ್ಯ, ಕೋಲಾರ ಮತ್ತು ಹಾಸನ ಲೋಕಸಭಾ ಚುನಾವಣಾ ಕ್ಷೇತ್ರಗಳು ಸಿಗಬಹುದು ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

jds-will-get-three-seats-says-former-cm-hd-kumaraswamy
ಮಂಡ್ಯ, ಕೋಲಾರ ಮತ್ತು ಹಾಸನ ಕ್ಷೇತ್ರಗಳು ಜೆಡಿಎಸ್​ಗೆ: ಹೆಚ್​ ಡಿ ಕುಮಾರಸ್ವಾಮಿ ವಿಶ್ವಾಸ
author img

By ETV Bharat Karnataka Team

Published : Mar 13, 2024, 9:32 PM IST

Updated : Mar 13, 2024, 10:08 PM IST

ಮಂಡ್ಯ, ಕೋಲಾರ - ಹಾಸನ ಕ್ಷೇತ್ರಗಳು ಜೆಡಿಎಸ್​ಗೆ: ಹೆಚ್​ ಡಿ ಕುಮಾರಸ್ವಾಮಿ ವಿಶ್ವಾಸ

ಹಾಸನ: ನನ್ನ ಮಗನಿಗೆ ಮಂಡ್ಯದಲ್ಲಿ ನಿಲ್ಲಬೇಡ ಎಂದು ಹೇಳಿದ್ದೆ. ಆಗ ಅಲ್ಲಿ ನಮ್ಮ ಪಕ್ಷದ ಮೂವರು ಸಚಿವರಿದ್ದರು. ಅವರು ಮತ್ತು ಕಾರ್ಯಕರ್ತರು ಒತ್ತಡ ಹಾಕಿ ಅಲ್ಲಿ ನಿಖಿಲ್​ನನ್ನು ಚುನಾವಣೆಗೆ ನಿಲ್ಲಿಸಿದ್ದರು. ಆದರೆ, ನಿಖಿಲ್​ ಚುನಾವಣೆ ಸೋತರು. ಆ ಸೋಲಿಗೆ ಕಾರಣ ಇದೇ ಕಾಂಗ್ರೆಸ್, ಬಿಜೆಪಿ ಮತ್ತು ರೈತಸಂಘ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.

ಹಾಸನದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ, ಜನರ ಪರವಾಗಿ ಕೆಲವು ಯೋಜನೆ ಇಟ್ಟುಕೊಂಡಿದ್ದ. ಅವುಗಳೆಲ್ಲವೂ ನಾಶವಾಯಿತು. ನನ್ನ ಮಗನಿಗಾದ ಪರಿಸ್ಥಿತಿ ಇಲ್ಲಿ ರೇವಣ್ಣನ ಕುಟುಂಬಕ್ಕೆ ಆಗಬಾರದು. ಹಾಗಾಗಿ ಅದನ್ನು ಉಳಿಸಿಕೊಳ್ಳಲು ಬಂದಿದ್ದೇನೆ. ದಯಮಾಡಿ ಉಳಿಸಿಕೊಳ್ಳಿ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಲ್ಲ. ಬದಲಿಗೆ ಈ ಜಿಲ್ಲೆಗೆ ನಾನೇನಾದರೂ ಕೊಡುಗೆ ಕೊಟ್ಟಿದ್ದರೆ ದಯಮಾಡಿ ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಅಭ್ಯರ್ಥಿ ಎಂದು ಪರಿಗಣಿಸಿ ಮತನೀಡಿ ಎಂದು ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ಘೋಷಿಸಿದರು.

ಬಹುಶಃ ರಾಜ್ಯದಲ್ಲಿ ನಮಗೆ ಮಂಡ್ಯ, ಕೋಲಾರ ಮತ್ತು ಹಾಸನ ಕ್ಷೇತ್ರಗಳು ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮಗೆ ಜಾತಿ ಮುಖ್ಯವಲ್ಲ. ಆದರೆ, ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ಮಾಡಿ ವಿಧಾನಸೌಧದಲ್ಲಿಟ್ಟು ಪೂಜೆ ಮಾಡ್ತಿದ್ದೀರಾ?. ವರದಿಯನ್ನು ಜನಗಳ ಮುಂದೆ ಇರಿಸಿ ಎಂದು ಆಗ್ರಹಿಸಿದ ಅವರು, ರಾಜ್ಯದ ಜನರ ಬದುಕು ಸರಿಪಡಿಸಲು ಹಣದ ಕೊರತೆಯಿಲ್ಲ. ನಿಮ್ಮ ಹಣದ ತೆರಿಗೆಯನ್ನು ಸರಿಯಾಗಿ ಬಳಕೆ ಮಾಡಿದರೇ ಪ್ರತಿ ಬಡವರ ಬದುಕು ಹಸನಾಗುತ್ತದೆ ಎಂದರು.

ನನ್ನ ಮತ್ತು ರೇವಣ್ಣ ನಡುವೆ ಘರ್ಷಣೆಯಾಗಲು ಬಿಡಲಿಲ್ಲ. ಸಾಕಷ್ಟು ಗೊಂದಲವಾದರೂ ನಾನು ಕಳೆದ ಬಾರಿ ಕಠಿಣವಾದ ನಿರ್ಧಾರ ಮಾಡಿ ಸ್ವರೂಪ್​ಗೆ ಟಿಕೆಟ್ ನೀಡಿದೆ. ರೇವಣ್ಣನಿಗೆ ಸ್ಪಲ್ಪ ಮುಂಗೋಪ ಅಷ್ಟೆ. ಹಾಗಾಗಿ ಅವನ ಬಗ್ಗೆ ಬೇಸರ ಬೇಡ. ಅವನು ಜಿಲ್ಲೆಯ ಜನರಿಗೆ ದುಡಿಯವ ವ್ಯಕ್ತಿ. ಆತ, ಜಿಲ್ಲೆಯ ಮಗ. ಅವನನ್ನು ಕೈ ಬಿಡಬೇಡಿ ಎಂದು ಭಾವುಕರಾಗಿ ಮಾತನಾಡಿದರು. ಈ ವೇಳೆ, ಕುಮಾರಸ್ವಾಮಿ ಮಾತು ಕೇಳಿ ರೇವಣ್ಣ ಅವರ ಕಣ್ಣಂಚಿನಲ್ಲಿ ನೀರು ತುಂಬಿತ್ತು.

ರಾಜ್ಯದಲ್ಲಿ ಕಾಂಗ್ರೆಸ್ 5 ಗ್ಯಾರಂಟಿಗಳ ಮೇಲೆ ಚುನಾವಣೆ ಪ್ರಚಾರ ಪ್ರಾರಂಭಿಸಿದೆ. ರಾಜಕೀಯ ವಿರೋಧಿಗಳು ನಮ್ಮ ಬಗ್ಗೆ ಯಾವ ರೀತಿ ಚರ್ಚೆ ಮಾಡುತ್ತಿದ್ದಾರೆ ಎಂದು ಗಮನಿಸಿದ್ದೇನೆ. ನಾನು ಕಠಿಣವಾದ ಪದಗಳನ್ನು ಉಪಯೋಗಿಸಲು ಹೋಗುವುದಿಲ್ಲ. ದಿನ ಬೆಳಗಾದರೇ, ಪತ್ರಿಕೆ ಮತ್ತು ಟಿವಿಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಕೇಳಿದ್ದೇನೆ. ಗ್ಯಾರಂಟಿ ಯೋಜನೆಗಳಿಂದ ಕುಟುಂಬಗಳು ತೃಪ್ತಿಯ ಜೀವನ ಕಂಡಿದ್ದೀರಾ?. ರಾಜ್ಯದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಬೋರ್​ವೆಲ್​ ಗಳಲ್ಲಿ ಅಂತರ್ಜಲ ಕುಸಿತವಾಗಿದೆ. ಬೆಳೆಯೂ ನಿರೀಕ್ಷೆಯಂತೆ ಬರಲಿಲ್ಲ. ಮುಂದೆ ಹೀಗೆ ಆದರೆ, ರಾಜ್ಯದಲ್ಲಿನ ರೈತರು ಆತ್ಮಹತ್ಯೆಗೆ ಜಾರುತ್ತಾರೆಯೋ ಎಂಬ ಭಯ ಶುರುವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಬಿಎಸ್​ವೈ ಭೇಟಿಯಾದ ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ ಮಂಜುನಾಥ್

Last Updated : Mar 13, 2024, 10:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.