ETV Bharat / state

ಭಂಡತನಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ: ಸಂಸದ ಜಗದೀಶ್ ಶೆಟ್ಟರ್ - jagadish shettar - JAGADISH SHETTAR

ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೊದಲು ವಾಲ್ಮೀಕಿ ನಿಗಮ ಹಗರಣ ನಡೆದಿಲ್ಲ ಎಂದಿದ್ದವರು, ಈಗ ಆಗಿದೆ ಎನ್ನುತ್ತಿದ್ದಾರೆ. ಭಂಡತನಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ ಎಂದು ಹರಿಹಾಯ್ದರು.

ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್ (ETV Bharat)
author img

By ETV Bharat Karnataka Team

Published : Jul 21, 2024, 4:01 PM IST

Updated : Jul 21, 2024, 5:08 PM IST

ಸಂಸದ ಜಗದೀಶ್ ಶೆಟ್ಟರ್ (ETV Bharat)

ಹುಬ್ಬಳ್ಳಿ: "ಭಂಡತನಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ" ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣ ಕುರಿತು ಪ್ರತಿಕ್ರಿಯಿಸಿ, "ಸಿದ್ದರಾಮಯ್ಯನವರು ಮೊದಲು ಏನೂ ಅಗಿಲ್ಲ ಎನ್ನುತ್ತಿದ್ದರು. ಈಗ ಆಗಿದೆ ಎನ್ನುತ್ತಿದ್ದಾರೆ. ಮಾಜಿ ಸಚಿವ ನಾಗೇಂದ್ರ ಅವರು ಮಾಡಿರುವ ಭ್ರಷ್ಟಾಚಾರದ ಕುರಿತ ದಾಖಲೆಗಳು ಒಂದೊಂದಾಗಿ ಹೊರಗೆ ಬರುತ್ತಿವೆ" ಎಂದರು.

"ಮುಡಾದಲ್ಲಿ ಪತ್ನಿ ಹೆಸರಿನಲ್ಲಿ ಬೇರೆ ಜಾಗ ತೆಗೆದುಕೊಂಡಿದ್ದಾರೆ. ಇವು ಇನ್ನೂ ಅಧಿವೇಶನದಲ್ಲಿ ಚರ್ಚೆಗೆ ಬಂದಿಲ್ಲ. ಇದರ ಮಧ್ಯೆ ಹಿಂದಿನ ಸರ್ಕಾರದ ಹಗರಣಗಳು ಹೊರಗೆ ಬರಲಿವೆ ಎಂದು ಪ್ರತಿಪಕ್ಷವನ್ನು ಹೆದರಿಸುತ್ತಿದ್ದಾರೆ. ಹಿಂದಿನ ಸರ್ಕಾರದಲ್ಲಿ ಹಗರಣ ಆಗಿದ್ದರೆ, ನಿಮ್ಮ ಸರ್ಕಾರ ಬಂದು ವರ್ಷವಾಯಿತು. ತನಿಖೆಗೆ ಒಪ್ಪಿಸಲಿಲ್ಲ ಏಕೆ?" ಎಂದು ಶೆಟ್ಟರ್​ ಪ್ರಶ್ನಿಸಿದರು.

"ಹಿಂದಿನ ಸರ್ಕಾರದ ಹಗರಣ ಬಿಡುತ್ತೇವೆ ಎನ್ನುವುದು ಒಳ್ಳೆಯದಲ್ಲ. ಈಗ ಆಗಿರುವ ಹಗರಣವನ್ನು ಎಸ್‌ಐಟಿ, ನಿವೃತ್ತ ನ್ಯಾಯಾಧೀಶರು ಅಥವಾ ಸಿಬಿಐ ತನಿಖೆಗೆ ಒಪ್ಪಿಸುವ ಧೈರ್ಯ ಇದೆಯೇ?. ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಹೊರಗಡೆ ತಂದಿದ್ದು ನಾನು. ಆಗ ಕೆಂಪಣ್ಣ ಆಯೋಗದಿಂದ ತನಿಖೆ ಮಾಡಿಸಲಾಯಿತು. ವರದಿ ಕೊಟ್ಟಿದ್ದರೂ ಅದನ್ನು ಸಿದ್ದರಾಮಯ್ಯ ಮುಚ್ಚಿಟ್ಟರು" ಎಂದು ಆರೋಪಿಸಿದರು.

"ವರದಿ ಕೊಟ್ಟ ನಂತರ ಸದನದಲ್ಲಿ ಮಂಡನೆ ಮಾಡಬೇಕು. ಇದಕ್ಕೂ ಮೊದಲೇ ತಾವು ನಿರಪರಾಧಿ ಎಂದು ಹೇಳುತ್ತಿದ್ದಾರೆ. ನೀವು ನಿರಪರಾಧಿ ಆಗಿದ್ದರೆ ಅರ್ಕಾವತಿ ವರದಿ ಮಂಡನೆ ಮಾಡಿ. ನೀವು ಮಾಡದೇ ಇದ್ದರೆ ತಪ್ಪಿತಸ್ಥರು ಎಂದಾಗುತ್ತದೆ. ವಿತಂಡ ವಾದ ಮಾಡಬಾರದು. ಇವೆಲ್ಲ ಪ್ರಕರಣ ಡೈವರ್ಟ್ ಮಾಡಲು ಕನ್ನಡಿಗರಿಗೆ ಮೀಸಲು ವಿಷಯ ಮುನ್ನೆಲೆಗೆ ತಂದಿದ್ದಾರೆ. ಜನರನ್ನು ದಾರಿ ತಪ್ಪಿಸುತ್ತಿದ್ದಾರೆ" ಎಂದು ಹರಿಹಾಯ್ದರು.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ ಹಿಂಪಡೆಯಿರಿ, ಇಲ್ಲವೇ ಕೇಸ್​ ಸಿಬಿಐ ತನಿಖೆಗೆ ನೀಡಿ: ಸಿಎಂಗೆ ಸಂಸದ ಕೋಟಾ ಸವಾಲು - MP kota fire on cm

Last Updated : Jul 21, 2024, 5:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.