ಶಿರಸಿ(ಉತ್ತರ ಕನ್ನಡ): ಮತದಾನಕ್ಕೆ ಕೆಲವೇ ದಿನ ಉಳಿದಿರುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಾಂಗ್ರೆಸ್ ಮುಖಂಡನ ಮನೆ ಮೇಲೆ ಶುಕ್ರವಾರ ಬೆಳ್ಳಂ ಬೆಳಗ್ಗೆ ಐಟಿ ದಾಳಿ ನಡೆದಿದೆ.
ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಸದಸ್ಯ ದೀಪಕ್ ಹೆಗಡೆ ದೊಡ್ಡೂರು ಮನೆ ಮೇಲೆ ದಾಳಿ ನಡೆದಿದೆ. ಹುಬ್ಬಳ್ಳಿಯಿಂದ ಮೂರು ಕಾರುಗಳಲ್ಲಿ ಬಂದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದು, ಈ ದಾಳಿಯಲ್ಲಿ ಸುಮಾರು 10 ಜನ ಅಧಿಕಾರಿಗಳ ತಂಡ ಇದೆ ಎನ್ನಲಾಗಿದೆ. ದೀಪಕ್ ಹೆಗಡೆ ಮನೆಯಲ್ಲಿ ಅವರ ಜೊತೆಗೆ ಸ್ನೇಹಿತ ಶಿವರಾಮ ಹೆಗಡೆ ಅವರನ್ನೂ ಸಹ ಕರೆದುಕೊಂಡು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರೂ ಬ್ಯುಸಿನೆಸ್ ಪಾರ್ಟನರ್ಸ್ ಆಗಿದ್ದು, ಚುನಾವಣೆ ಕಾರಣಕ್ಕೆ ದಾಳಿಯೋ ? ಅಥವಾ ಬ್ಯುಸಿನೆಸ್ ವಿಷಯವಾಗಿ ದಾಳಿ ಆಗಿದೆಯೋ ಎಂಬುದು ತಿಳಿದು ಬರಬೇಕಿದೆ.
ಐಟಿ ದಾಳಿಯ ಹಿನ್ನೆಲೆಯಲ್ಲಿ ಮನೆಗೆ ಪೊಲೀಸರನ್ನು ನೇಮಕ ಮಾಡಲಾಗಿದೆ. ಕಾರವಾರ, ಮಂಗಳೂರು, ಹುಬ್ಬಳ್ಳಿಯ ಬಾಡಿಗೆ ಕಾರಿನಲ್ಲಿ ಅಧಿಕಾರಿಗಳು ಬಂದಿದ್ದಾರೆ. ಬೆಳಗ್ಗೆ 7 ಗಂಟೆಗೆ ದಾಳಿಯಾಗಿದ್ದು, ಮನೆ ಸಮೀಪಕ್ಕೆ ತೆರಳಲು ಸಾರ್ವಜನಿಕರಿಗೆ ಅವಕಾಶ ನಿರಾಕರಿಸಲಾಗಿದೆ.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಡಿವೈಎಸ್‌ಪಿ ವಿರುದ್ಧ ಘೋಷಿತ ಆರೋಪಿ ಆದೇಶ ರದ್ದು - Bit Coin Scam