ETV Bharat / state

ಎಲ್​ವಿಎಂ - 3 ಬೆಂಬಲಿಸಲು ನಿರ್ಮಾಣವಾಗಿರುವ ಹೆಚ್​ಎಎಲ್​ನಲ್ಲಿ ಹೊಸ ಸೌಲಭ್ಯ ಉದ್ಘಾಟಿಸಿದ ಇಸ್ರೋ ಅಧ್ಯಕ್ಷ - HAL new facility

ಹೆಚ್‌ಎಎಲ್‌ ಏರೋಸ್ಪೇಸ್ ವಿಭಾಗದಲ್ಲಿನ ಅತ್ಯಾಧುನಿಕ ಪ್ರೊಪೆಲೆಂಟ್ ಟ್ಯಾಂಕ್ ಉತ್ಪಾದನೆ ಮತ್ತು ಸಿಎನ್‌ಸಿ ಯಂತ್ರೋಪಕರಣ ಸೌಲಭ್ಯಗಳನ್ನು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಉದ್ಘಾಟಿಸಿದರು.

ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್
ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ (ETV Bharat)
author img

By ETV Bharat Karnataka Team

Published : Jun 5, 2024, 7:28 PM IST

ಬೆಂಗಳೂರು: ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಬುಧವಾರ ಹೆಚ್‌ಎಎಲ್‌ ಏರೋಸ್ಪೇಸ್ ವಿಭಾಗದಲ್ಲಿನ ಅತ್ಯಾಧುನಿಕ ಪ್ರೊಪೆಲೆಂಟ್ ಟ್ಯಾಂಕ್ ಉತ್ಪಾದನೆ ಮತ್ತು ಸಿಎನ್‌ಸಿ ಯಂತ್ರೋಪಕರಣ ಸೌಲಭ್ಯಗಳನ್ನು ಹೆಚ್‌ಎಎಲ್ ಸಿಎಮ್‌ಡಿ ಸಿ.ಬಿ. ಅನಂತಕೃಷ್ಣನ್ ಮತ್ತು ಇಸ್ರೋದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಇಂದು ಉದ್ಘಾಟಿಸಿದರು.

ಇದರಿಂದ ಹೊಸದಾಗಿ ಬೆಳೆಯುತ್ತಿರುವ ಉತ್ಪಾದನಾ ಅಗತ್ಯಗಳನ್ನು ಪೂರೈಸುವ ಇಸ್ರೋದ ಸಾಮರ್ಥ್ಯಕ್ಕೆ ಪ್ರಮುಖ ಉತ್ತೇಜನವನ್ನು ನೀಡಂತಾಗಿದೆ. ವಿಶೇಷ ಲಾಂಚ್ ವೆಹಿಕಲ್ ಮಾರ್ಕ್- 3 ಭಾರತದ ಅತ್ಯಂತ ಭಾರವಾದ ಮತ್ತು ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದೆ. ಅಸ್ತಿತ್ವದಲ್ಲಿರುವ ಸಾಮರ್ಥ್ಯ ವರ್ಷಕ್ಕೆ ಕೇವಲ ಎರಡು ಎಲ್​ವಿಎಂ - 3 ಗಳನ್ನು ಉತ್ಪಾದಿಸುತ್ತಿದೆ. ಈಗ ವಾರ್ಷಿಕವಾಗಿ ಆರು ರಾಕೆಟ್ ಗಳನ್ನು ಇದರಿಂದ ಉತ್ಪಾದಿಸಬಹುದಾಗಿದೆ.

ಹೆಚ್​ಎಎಲ್ ಸಂಸ್ಥೆಯ ಹೊಸ ಸೌಲಭ್ಯ ಉದ್ಘಾಟಿಸಿದ ಇಸ್ರೋ ಅಧ್ಯಕ್ಷ
ಹೆಚ್​ಎಎಲ್ ಸಂಸ್ಥೆಯ ಹೊಸ ಸೌಲಭ್ಯ ಉದ್ಘಾಟಿಸಿದ ಇಸ್ರೋ ಅಧ್ಯಕ್ಷ (ETV Bharat)

ಈ ಸಂದರ್ಭದಲ್ಲಿ ಮಾತನಾಡಿದ ಸೋಮನಾಥ್, ಹೆಚ್‌ಎಎಲ್ ಅಗಾಧ ಸಾಮರ್ಥ್ಯಗಳನ್ನು ಹೊಂದಿದೆ. ಈಗಿನ ಸಾಮರ್ಥ್ಯದ ಹೆಚ್ಚಳದಿಂದ ಎರಡೂ ಸಂಸ್ಥೆಗಳ ದೊಡ್ಡ ಹಿತಾಸಕ್ತಿಯಲ್ಲಿ ಅನ್ವೇಷಿಸಲಿದೆ. ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳಲ್ಲಿ ಹೆಚ್‌ಎಎಲ್ ದೊಡ್ಡ ಪಾತ್ರವನ್ನು ವಹಿಸಲಿದೆ. ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಗಮನ ಹರಿಸಿ ಹೊಸ ಸವಾಲುಗಳಿಗೆ ವಿನ್ಯಾಸಗಳನ್ನು ಸಜ್ಜುಗೊಳಿಸಬೇಕಿದೆ. ಇಸ್ರೋ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಎಂಡ್-ಟು-ಎಂಡ್ ಟೆಕ್ನಾಲಜಿಗಳನ್ನು ಹೆಚ್​ಎಎಲ್ ಇನ್ನಷ್ಟು ಅನ್ವೇಷಿಸಬೇಕಿದೆ ಎಂದು ಹೇಳಿದರು.

ಹೆಚ್‌ಎಎಲ್ ಸಿಎಮ್‌ಡಿ ಸಿ.ಬಿ. ಅನಂತಕೃಷ್ಣನ್ ಅನಂತಕೃಷ್ಣನ್ ಮಾತನಾಡಿ, ಇಸ್ರೋ ಜೊತೆಗಿನ ಸಹಯೋಗವು ಮಾನವ ಬಾಹ್ಯಾಕಾಶ ಯಾನ ಮತ್ತು ಮುಂದಿನ ಪೀಳಿಗೆಯ ಉಡಾವಣಾ ವಾಹನಗಳ ಅಭಿವೃದ್ಧಿಯನ್ನು ವೇಗಗೊಳಿಸಲಿದೆ. ಇಸ್ರೋ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಸಂತಸದ ಸಂಗತಿಯಾಗಿದೆ. ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪೂರ್ಣ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ಮತ್ತಷ್ಟು ಹೂಡಿಕೆ ಮಾಡಲು ಸಂಸ್ಥೆ ಬದ್ಧವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಂಕೇತಿಕ ಸೂಚಕ, ಮೊದಲ ಗಗನಯಾನ್​ ಸೇವಾ ಮಾಡ್ಯೂಲ್, ಎಲ್​ವಿಎಂ- 3 ಐಸೊಗ್ರಿಡ್ ಆವೃತ್ತಿಯ ಹಾರ್ಡ್‌ವೇರ್ ಅನ್ನು ಇಸ್ರೋಗೆ ಹಸ್ತಾಂತರಿಸಲಾಯಿತು. ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್‌ಪಿಎಸ್‌ಸಿ) ನಿರ್ದೇಶಕ ಡಾ ವಿ ನಾರಾಯಣನ್, ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (ಹೆಚ್‌ಎಸ್‌ಎಫ್‌ಸಿ) ನಿರ್ದೇಶಕ ಎಂ ಮೋಹನ್, ಹೆಚ್‌ಎಎಲ್ ಬೆಂಗಳೂರು ಕಾಂಪ್ಲೆಕ್ಸ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಿಹಿರ್ ಕಾಂತಿ ಮಿಶ್ರಾ ಮತ್ತು ಹೆಲಿಕಾಪ್ಟರ್ ಕಾಂಪ್ಲೆಕ್ಸ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಅನ್ಬುವೇಲನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಏನಿದು ಹೊಸ ಸೌಲಭ್ಯ: ಪ್ರೊಪೆಲ್ಲಂಟ್ ಟ್ಯಾಂಕ್ ಉತ್ಪಾದನಾ ಸೌಲಭ್ಯವು ಉನ್ನತ ಕಾರ್ಯಕ್ಷಮತೆಯ ಇಂಧನ ಮತ್ತು ಆಕ್ಸಿಡೈಸರ್ ಟ್ಯಾಂಕ್‌ಗಳ ತಯಾರಿಕೆಯ ಪರಿಣತಿಯನ್ನು ಹೊಂದಿದೆ. ಎಲ್​ವಿಎಂ - 3 ಉಡಾವಣಾ ವಾಹನಕ್ಕೆ 4 ಮೀಟರ್ ವ್ಯಾಸದ ಮತ್ತು 15 ಮೀಟರ್ ಉದ್ದದವರೆಗಿನ ಪ್ರಮುಖ ಘಟಕಗಳನ್ನು ಒದಗಿಸಲಿದೆ. ಸಿಎನ್​ಸಿ ಮಷಿನಿಂಗ್ ಫೆಸಿಲಿಟಿ 4.5 ಮೀಟರ್ ಕ್ಲಾಸ್ ರಿಂಗ್ಸ್ ಮತ್ತು ಎಲ್​ವಿಎಂ - 3 ನ ಪ್ರೊಪೆಲೆಂಟ್ ಟ್ಯಾಂಕ್ ಡೋಮ್​ಗಳ ನಿಖರವಾದ ತಯಾರಿಕೆಯನ್ನು ನಿರ್ವಹಿಸಲು ಸುಧಾರಿತ ಕಂಪ್ಯೂಟರ್ ನ್ಯೂಮರಿಕಲ್ ಕಂಟ್ರೋಲ್ ಯಂತ್ರಗಳನ್ನು ಹೊಂದಿದೆ.

ಇದನ್ನೂ ಓದಿ: ITI ಅಭ್ಯರ್ಥಿಗಳಿಗೆ ಅವಕಾಶ: ಚೆನ್ನೈನ ಇಂಟೆಗ್ರಲ್​ ಕೋಚ್​ ಫ್ಯಾಕ್ಟರಿಯಲ್ಲಿದೆ ಉದ್ಯೋಗ - ITI Apprenticeship Recruitment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.