ETV Bharat / state

ಶಿವಮೊಗ್ಗ: ಇರ್ಫಾನ್‌ ಕೊಲೆ ಪ್ರಕರಣ, ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ - Murder Case - MURDER CASE

ಇರ್ಫಾನ್ ಅಲಿಯಾಸ್ ಟ್ವಿಸ್ಟ್ ಇರ್ಫಾನ್ ಕೊಲೆ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ ಶಿವಮೊಗ್ಗ ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಲಯ, 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

MURDER CASE
ಸಾಂದರ್ಭಿಕ ಚಿತ್ರ (File)
author img

By ETV Bharat Karnataka Team

Published : Aug 10, 2024, 8:12 PM IST

ಶಿವಮೊಗ್ಗ: ಇರ್ಫಾನ್‌ ಅಲಿಯಾಸ್ ಟ್ವಿಸ್ಟ್ ಇರ್ಫಾನ್​ ಎಂಬಾತನನ್ನು ಕೊಲೆ ಮಾಡಿದ್ದ 7 ಅಪರಾಧಿಗಳಿಗೆ ಶಿವಮೊಗ್ಗ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2021ರಲ್ಲಿ ಗಾಂಜಾ ವಿಚಾರದಲ್ಲಿ ನಡೆದ ಜಗಳದಲ್ಲಿ ಈ 8 ಜನರು ಇರ್ಫಾನ್​ನನ್ನು ಚಾಕುವಿನಿಂದ ಚುಚ್ಚಿ ಕೊಲೆ ನಡೆಸಿದ್ದರು.

18-09-2021ರಲ್ಲಿ ಟಿಪ್ಪು ನಗರದ 7ನೇ ಮುಖ್ಯಯ 4ನೇ ಅಡ್ಡ ರಸ್ತೆಯಲ್ಲಿ ಇರ್ಫಾನ್​ನನ್ನು‌ ಕೊಲೆ ಮಾಡಲಾಗಿದೆ ಎಂದು ಮೃತನ ಸಹೋದರನು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು‌ ಈ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಗ ಠಾಣೆಯ ತನಿಖಾಧಿಕಾರಿ ಪಿಐ ದೀಪಕ್ ಅವರು ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಶಿವಮೊಗ್ಗ 2ನೇ ಜೆಎಂಎಫ್​​ಸಿ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.

MURDER CASE
ಜೀವಾವಧಿ ಶಿಕ್ಷೆಗೆ ಒಳಪಟ್ಟ ಅಪರಾಧಿಗಳು (ETV Bharat)

ಪ್ರಕರಣದ ಕುರಿತು ವಾದ ಆಲಿಸಿದ ನ್ಯಾಯಾಧೀಶರಾದ ಪಲ್ಲವಿ ಎಂ.ಡಿ ಅವರು ಕೊಲೆಗೈದ 8 ಅಪರಾಧಿಗಳಾದ ಲತೀಫ್​(20), ಫರ್ವೆಜ್ ಅಲಿಯಾಸ್ ಪರ್ರು (23), ಸೈಯದ್ ಜಿಲಾನ್ ಅಲಿಯಾಸ್ ಜೀಲಾ(19), ಜಾಫರ್ ಸಾದೀಕ್(20), ಸೈಯದ್ ರಾಜೀಕ್ ಅಲಿಯಾಸ್ ರಾಜೀಕ್(28), ಮೊಹಮ್ಮದ್ ಶಾಬಾಜ್ ಅಲಿಯಾಸ್ ಶಾಬು(19), ಅಬ್ದುಲ್ ಶಾಬೀರ್ ಅಲಿಯಾಸ್ ಶಾಬಿರ್(24) ಹಾಗೂ ತಸ್ಲಿಂ ಅಲಿಯಾಸ್ ಮೊಹಮ್ಮದ್ ಯೂಸೂಫ್ (26)ಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.

ಇದರಲ್ಲಿ 5ನೇ ಅಪರಾಧಿಯಾದ ರಾಜೀಕ್ ಭದ್ರಾವತಿಯಲ್ಲಿ ಕೊಲೆಗೀಡಾಗಿದ್ದು, ಉಳಿದ 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 30 ಸಾವಿರ ರೂ.ಗಳನ್ನು ಕೊಲೆಯಾದ ಟ್ಚಿಸ್ಟ್ ಇರ್ಫಾನ್​ನ ಹೆಂಡತಿಗೆ ನೀಡಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ಪುಷ್ಪ ವಾದ ಮಂಡಿಸಿದ್ದರು.

ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 10 ವರ್ಷ ಕಾರಾಗೃಹ ಶಿಕ್ಷೆ - Rape case Judgement

ETV Bharat Logo

Copyright © 2024 Ushodaya Enterprises Pvt. Ltd., All Rights Reserved.