ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಇಂಡಿಗೋ ಏರ್ಲೈನ್ಸ್ ಸಂಸ್ಥೆಯು ಡಿಸೆಂಬರ್ 9ರಿಂದ 19ರವರೆಗೆ ಬೆಂಗಳೂರು - ಬೆಳಗಾವಿ ನಡುವೆ ವಿಶೇಷ ವಿಮಾನ ಸಂಚಾರ ಆರಂಭಿಸುತ್ತಿದೆ.
ಅಧಿವೇಶನದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಸಚಿವರು, ಶಾಸಕರು, ಪ್ರತಿಪಕ್ಷ ನಾಯಕರು ಮತ್ತು ಸರ್ಕಾರದ ಅಧಿಕಾರಿ ವರ್ಗ ಬೆಳಗಾವಿಗೆ ಆಗಮಿಸುತ್ತಾರೆ. ಹಾಗಾಗಿ, ಇವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯು ವಿಶೇಷ ಸಂಚಾರ ಆರಂಭಿಸಿದೆ.
ಇದನ್ನೂ ಓದಿ: 'ಸುವರ್ಣ ಸೌಧ ಉತ್ತರದ ಶಕ್ತಿಕೇಂದ್ರವಾಗಲಿ': ಚಳಿಗಾಲದ ಅಧಿವೇಶನದ ವೇಳೆ ಬೆಳಗಾವಿ 2ನೇ ರಾಜಧಾನಿಯ ಕೂಗು
ಈ ಕುರಿತು ಸಂಸದ ಜಗದೀಶ ಶೆಟ್ಟರ್ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮನವಿ ಸಲ್ಲಿಸಿದ್ದರು. ಈ ವಿಮಾನವು ಬೆಳಗ್ಗೆ 6ಕ್ಕೆ ಬೆಂಗಳೂರಿನಿಂದ ಹೊರಟು 7ಕ್ಕೆ ಬೆಳಗಾವಿಯನ್ನು ತಲುಪಲಿದೆ. ಪುನಃ 7.30ಕ್ಕೆ ಬೆಳಗಾವಿಯಿಂದ ಹೊರಟು 8.30ಕ್ಕೆ ಬೆಂಗಳೂರನ್ನು ತಲುಪಲಿದೆ. ಈ ವಿಶೇಷ ವಿಮಾನ 189 ಆಸನಗಳನ್ನು ಹೊಂದಿದೆ. ಅಧಿವೇಶನ ಮುಗಿದ ಬಳಿಕ ಡಿಸೆಂಬರ್ 20ರಿಂದ ATR72 ವಿಮಾನ ಸೇವೆಗಳು ಯಥಾ ಸ್ಥಿತಿಯಲ್ಲಿ ಮುಂದುವರೆಯಲಿವೆ.
ಇದನ್ನೂ ಓದಿ: ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಆಗುವ ಖರ್ಚೆಷ್ಟು? ಏನಂತಾರೆ ಜಿಲ್ಲಾಧಿಕಾರಿ?