ETV Bharat / state

ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡ್ಲಿಂಗ್ ಸ್ಪರ್ಧೆ ಆರಂಭ - stand up paddling competition

ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್ ಅಪ್ ಪೆಡ್ಲಿಂಗ್ ಸ್ಪರ್ಧೆ ಮಂಗಳೂರಿನ ಸಸಿಹಿತ್ಲು ಬೀಚ್​ನಲ್ಲಿ ಇಂದಿನಿಂದ ಪ್ರಾರಂಭವಾಗಿದೆ.

indias-first-international-stand-up-paddling-competition-starts-in-mangaluru
ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡ್ಲಿಂಗ್ ಸ್ಪರ್ಧೆ
author img

By ETV Bharat Karnataka Team

Published : Mar 8, 2024, 9:21 PM IST

Updated : Mar 8, 2024, 10:08 PM IST

ಅಂತಾರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡ್ಲಿಂಗ್ ಸ್ಪರ್ಧೆ ಆರಂಭ

ಮಂಗಳೂರು: ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್ ಅಪ್ ಪೆಡ್ಲಿಂಗ್ ಸ್ಪರ್ಧೆ ನಗರದ ಸಸಿಹಿತ್ಲು ಬೀಚ್​ನಲ್ಲಿ ಇಂದು ಆರಂಭವಾಯಿತು. ಇಂದಿನಿಂದ ಮಾ.10 ರವರೆಗೆ ಮೂರು ದಿನಗಳ ಕಾಲ ಈ ಸ್ಪರ್ಧೆ ನಡೆಯಲಿದೆ.

ಪುರುಷರು ಮತ್ತು ಮಹಿಳೆಯರ ಮತ್ತು ಜೂನಿಯರ್ ಚಾಂಪಿಯನ್ ಜೊತೆಗೆ ಅಗ್ರ ಶ್ರೇಯಾಂಕದ ಅಂತಾರಾಷ್ಟ್ರೀಯ ಸ್ಟ್ಯಾಂಡ್ - ಅಪ್ ಪೆಡ್ಲರ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಪುರುಷರ ಓಪನ್, ಮಹಿಳೆಯರ ಓಪನ್, ಜೂನಿಯರ್ ಹುಡುಗ ಮತ್ತು ಹುಡುಗಿಯರು ಸೇರಿದಂತೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸಿರುವ ಮೂರು ದಿನಗಳ ಸ್ಟ್ಯಾಂಡ್ - ಅಪ್ ಪೆಡ್ಲಿಂಗ್ ಉತ್ಸವ ಅಸೋಸಿಯೇಷನ್ ​​ಆಫ್ ಪ್ಯಾಡಲ್‌ಸರ್ಫ್ ಪ್ರೊಫೆಷನಲ್ಸ್ ವರ್ಲ್ಡ್ ಟೂರ್‌ನೊಂದಿಗೆ (APP)ನೊಂದಿಗೆ ಆಯೋಜನೆಗೊಂಡಿದೆ.

ಈ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್ ಅಪ್ ಪೆಡ್ಲರ್​ಗಳು ಭಾಗವಹಿಸುತ್ತಿದ್ದಾರೆ. ಭಾರತದ ಬಿಹಾರ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಸ್ಪರ್ಧಿಗಳು ಸೇರಿದಂತೆ ಸ್ಪೇನ್, ಥಾಯ್ಲೆಂಡ್​, ಇಂಡೋನೇಷ್ಯಾ ದೇಶದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 3 ಗಂಟೆಯ ಬಳಿಕ ಅಂತಾರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್ ಅಪ್ ಪೆಡ್ಲಿಂಗ್ ರೇಸ್ ನಡೆಯಲಿದೆ. ಅಲ್ಲದೇ ಪ್ರತೀ ದಿನ ಸಂಜೆ ಚಲನಚಿತ್ರೋತ್ಸವದ ಭಾಗವಾಗಿ ಅಡ್ವೆಂಚರ್‌ ಮಾದರಿಯ ಸಿನಿಮಾಗಳ ಪ್ರದರ್ಶನ ಏರ್ಪಡಿಸಲಾಗುತ್ತಿದೆ.

ಮೊದಲ ದಿನವಾದ ಇಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸ್ಟ್ಯಾಂಡ್ ಅಪ್​ ಪೆಡ್ಲಿಂಗ್ ಉತ್ಸವಕ್ಕೆ ಚಾಲನೆ ನೀಡಿದರು. ಮೊದಲ ದಿನ ಜ್ಯೂನಿಯರ್ಸ್​ಗಳ ಸ್ಪರ್ಧೆ ನಡೆಯಿತು.

ಈ ಬಗ್ಗೆ ಮಾತನಾಡಿದ ಆಯೋಜಕ ಯತೀಶ್ ಬೈಕಂಪಾಡಿ, "ಹಿಂದಿನ ಕಾಲದಲ್ಲಿ ದೋಣಿಗಳಿಗೆ ಹುಟ್ಟು ಹಾಕುವ ರೀತಿಯ ಆಧುನಿಕ ರೂಪವಿದು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಸ್ಪರ್ಧೆ ರೂಪ ಪಡೆದಿದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇಲ್ಲಿ ಸ್ಫರ್ಧೆ ಆಯೋಜನೆ ಮಾಡಲಾಗಿದೆ. ಇದು ಮೊದಲ ಬಾರಿ ಭಾರತದಲ್ಲಿ ನಡೆಯುತ್ತಿದ್ದು, 20 ದೇಶಗಳ ಸ್ಪರ್ಧಿಗಳು ಆಗಮಿಸಿದ್ದಾರೆ. ಇದು ನಮ್ಮ ಸ್ಪರ್ಧೆಯ ಯಶಸ್ಸು ಆಗಿದೆ" ಎಂದರು.

ಏನಿದು ಸ್ಟ್ಯಾಂಡ್-ಅಪ್ ಪೆಡ್ಲಿಂಗ್: ಇದು ಹುಟ್ಟು ಹಾಕಿ ದೋಣಿಗಳಲ್ಲಿ‌ ಸಾಗುವ ರೀತಿಯ ಸ್ಪರ್ಧೆ. ಆಧುನಿಕ ವಿನ್ಯಾಸವುಳ್ಳ ದೋಣಿ ತರದ ಆಕೃತಿಯ ಮೇಲೆ ನಿಂತು ಹುಟ್ಟು ಹಾಕುತ್ತಾ ಸಮುದ್ರ ಅಲೆಗಳಲ್ಲಿ ಸಾಗಿ ನಿಗದಿತ ದಾರಿ ಕ್ರಮಿಸುವ ಸ್ಪರ್ಧೆಯಾಗಿದೆ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸ್ಪರ್ಧೆ ಆಯೋಜನೆಗೊಳ್ಳುತ್ತಿದೆ. ಭಾರತದಲ್ಲಿ ಮೊದಲ ಬಾರಿಗೆ ಮಂಗಳೂರಿನ ಸಸಿಹಿತ್ಲು ಬೀಚ್​ನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ.

ಇದನ್ನೂ ಓದಿ: ಇಂದಿನಿಂದ ಮಂಗಳೂರಿನಲ್ಲಿ ದೇಶದ ಮೊದಲ ಅಂತಾರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪೆಡ್ಲಿಂಗ್ ಸ್ಪರ್ಧೆ

Last Updated : Mar 8, 2024, 10:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.