ETV Bharat / state

ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ದೂರು ದಾಖಲಿಸುತ್ತೇನೆ : ಎಂ ಲಕ್ಷ್ಮಣ್ - M LAKSHMAN

ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್​ ಅವರು ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ದೂರನ್ನ ದಾಖಲಿಸುತ್ತೇನೆ ಎಂದರು.

m-lakshman
ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ (ETV Bharat)
author img

By ETV Bharat Karnataka Team

Published : Nov 21, 2024, 3:52 PM IST

Updated : Nov 21, 2024, 7:08 PM IST

ಮೈಸೂರು : ಸ್ನೇಹಮಯಿ ಕೃಷ್ಣ ಈಗ ಹುಚ್ಚರಾಗಿದ್ದಾರೆ. ರಾತ್ರಿ ವೇಳೆಯಲ್ಲೂ ಲೋಕಾಯುಕ್ತ ಕಚೇರಿಯ ಸುತ್ತ ಸುತ್ತುತ್ತಿದ್ದಾರೆ. ಅವರ ಇನ್ನೊಂದು ಆಡಿಯೋ ನನಗೆ ಸಿಕ್ಕಿದೆ. ಈ ಬಗ್ಗೆ ಕಾನೂನಾತ್ಮವಾಗಿ ಹೋರಾಟ ಮಾಡುತ್ತೇನೆ. ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ದೂರನ್ನ ದಾಖಲಿಸುತ್ತೇನೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.

ನಗರದ ಕಾಂಗ್ರೆಸ್‌ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೆ. ಆರ್ ಕ್ಷೇತ್ರದ ಶಾಸಕ ಶ್ರೀವತ್ಸ, ಸಿಎಂ ಸಿದ್ದರಾಮಯ್ಯ ಅವರು ಮುಡಾದ 14 ಸೈಟ್​ಗಳನ್ನ ವಾಪಸ್‌ ಕೊಡುವವರೆಗೆ ಹೋರಾಟ ಮಾಡಿ ಈಗ ಸುಮ್ಮನಿದ್ದಾರೆ ಎಂದರು.

ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್​ ಮಾತನಾಡಿದರು (ETV Bharat)

ಬಿಜೆಪಿಯಿಂದ ಬಿಪಿಎಲ್‌ ಕಾರ್ಡ್‌ ರದ್ದಿನ ಬಗ್ಗೆ ಗೊಂದಲ : ಬಿಜೆಪಿ ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ ರದ್ದತಿ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದೆ. ಬಿಪಿಎಲ್‌ ಕಾರ್ಡ್‌ ಅನ್ನು ರದ್ದು ಮಾಡಿಲ್ಲ, ಬದಲಾಯಿಸಿದ್ದೇವೆ ಅಷ್ಟೇ. ಆದರೆ ಬಿಜೆಪಿಯವರು ರಾಜ್ಯದ ಜನರಿಗೆ ಈ ವಿಚಾರದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಪಿಎಲ್​ನಿಂದ ಎಪಿಎಲ್​ಗೆ ವರ್ಗಾವಣೆ ಮಾಡಲು ಐದು ಮಾನದಂಡಗಳನ್ನು ಕೇಂದ್ರ ಸರ್ಕಾರ ನೀಡಿದೆ. ಅದರಲ್ಲಿ ಐಟಿ ರಿಟರ್ನ್ಸ್ ಆಗಿರಬಾರದು. 8 ಎಕರೆಗಿಂತ ಹೆಚ್ಚು ಜಮೀನು ಇರಬಾರದು. ಕಾರು ಹೊಂದಿರಬಾರದು. ಜತೆಗೆ ವಾರ್ಷಿಕ ವರಮಾನ 2 ಲಕ್ಷ ರೂ. ಮೀರುವಂತೆ ಇರಬಾರದು ಎಂಬ ಮಾನದಂಡದಲ್ಲಿ ಬಿಪಿಎಲ್‌ ಕಾರ್ಡ್​ಗಳನ್ನು ರದ್ದು ಮಾಡುವಂತೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ರಾಜ್ಯ ಸರ್ಕಾರ 80 ಸಾವಿರ ಬಿಪಿಎಲ್‌ ಕಾರ್ಡ್​ಗಳನ್ನ ಎಪಿಎಲ್‌ ಕಾರ್ಡ್​ಗಳಾಗಿ ಪರಿವರ್ತನೆ ಮಾಡಿದೆ. ಇದನ್ನೇ ಇಟ್ಟುಕೊಂಡು ಬಿಜೆಪಿಯವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಾಪ್‌ ಸಿಂಹ ವಿರುದ್ಧ ವಾಗ್ದಾಳಿ : ಪ್ರತಾಪ್‌ ಸಿಂಹ ವಕ್ಫ್​ ಬೋರ್ಡ್‌ ವಿಚಾರದಲ್ಲಿ ಜನರಿಗೆ ಸುಳ್ಳನ್ನ ಹೇಳುತ್ತಿದ್ದಾರೆ. ಅವರು ಮುಕ್ತವಾಗಿ ಚರ್ಚೆಗೆ ಬರಲಿ. ವಕ್ಫ್ ಹೆಸರಿನಲ್ಲಿ ಸ್ಮಶಾನ, ದೇವಸ್ಥಾನಗಳನ್ನ ಕಬಳಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ ಎಂದು ಲಕ್ಷ್ಮಣ್​ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಸಿಎಂ ಮತ್ತು ಕುಟುಂಬಸ್ಥರ ವಿರುದ್ಧ ಅಪಪ್ರಚಾರ ಆರೋಪ ಪ್ರಕರಣ: ವಿಚಾರಣೆ ಎದುರಿಸಿದ ಸ್ನೇಹಮಯಿ ಕೃಷ್ಣ

Last Updated : Nov 21, 2024, 7:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.