ETV Bharat / state

ನಾನು ಮಠದ ಹುಡುಗ, ಆದಿಚುಂಚನಗಿರಿ ಸ್ವಾಮೀಜಿ ಮಡಿಲಲ್ಲಿ ಬೆಳೆದವ: ಜಮೀರ್​ ಅಹ್ಮದ್​ - ZAMEER AHMED

ಪ್ರತಿ ಶನಿವಾರ ನಾನು ಬೆಳಗ್ಗೆಯಿಂದ ಸಂಜೆವರೆಗೂ ಮಠದಲ್ಲಿ ಇರುತ್ತೇನೆ. ನಾನು ಜೆಡಿಎಸ್‌ಗೆ ಬರಲು ಆದಿಚುಂಚನಗಿರಿಯ ಹಿರಿಯ ಸ್ವಾಮೀಜಿಗಳು ಕಾರಣ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಜಮೀರ್​ ಅಹ್ಮದ್​
ಜಮೀರ್​ ಅಹ್ಮದ್​ (ETV Bharat)
author img

By ETV Bharat Karnataka Team

Published : Nov 16, 2024, 5:15 PM IST

ಮಂಗಳೂರು(ದಕ್ಷಿಣ ಕನ್ನಡ): ನಾನು ಮಠದ ಹುಡುಗ. ಆದಿಚುಂಚನಗಿರಿ ಮಠದಲ್ಲಿ ಬೆಳೆದಿದ್ದು. ಬೇಕಾದರೆ ಸ್ಚಾಮೀಜಿ ಬಳಿ ಕೇಳಲು ಹೇಳಿ. ಪ್ರತಿ ಶನಿವಾರ ನಾನು ಬೆಳಗ್ಗೆಯಿಂದ ಸಂಜೆವರೆಗೂ ಮಠದಲ್ಲಿ ಇರುತ್ತೇನೆ. ನಾನು ಸ್ವಾಮೀಜಿ ಮಡಿಲಲ್ಲಿ ಬೆಳೆದವ. ನಾನು ಜೆಡಿಎಸ್‌ಗೆ ಬರಲು ಆದಿಚುಂಚನಗಿರಿಯ ಹಿರಿಯ ಸ್ವಾಮೀಜಿಗಳು ಕಾರಣ. ಕುಮಾರಸ್ವಾಮಿ ಅವರಲ್ಲಿ ಈ ಬಗ್ಗೆ ಕೇಳಿ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ?. ಯೂಟರ್ನ್ ಕುಮಾರಸ್ವಾಮಿ ಅಂತ ಅವರಿಗೆ ಹೆಸರಿದೆ. ಯಾವಾಗ ಬೇಕಾದರೂ ಹೇಗೆ ಬೇಕಾದರೂ ಅವರು ಟರ್ನ್ ಮಾಡುತ್ತಾರೆ. ನಾನು ವೈಯಕ್ತಿಕವಾಗಿ ಕುಮಾರಸ್ವಾಮಿಗೆ ಹೇಳಿರುವುದು. ಒಕ್ಕಲಿಗರ ಬಗ್ಗೆ ನನಗೆ ಗೌರವ ಇದೆ ಎಂದರು.

ಸಚಿವ ಜಮೀರ್​ ಅಹ್ಮದ್​ (ETV Bharat)

ನಾನು ದೇವೇಗೌಡ ಕುಟುಂಬ ಖರೀದಿ ಮಾಡುತ್ತೇನೆ ಅಂತ ಹೇಳಿಲ್ಲ. ಕುಮಾರಸ್ವಾಮಿ ಮುಸ್ಲಿಮರು ನನಗೆ ಬೇಕಾಗಿಲ್ಲ ಅಂತ ಹೇಳಿದ್ರು. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಿದ್ದು. ಮುಸ್ಲಿಂ ವೋಟ್ ಬೇಡ ಅಂತ ದುಡ್ಡು ಕೊಟ್ಟು ಖರೀದಿ ಮಾಡುತ್ತಿದ್ದೀರಿ ಅಲ್ವಾ, ಇದು ಎಷ್ಟು ಸರಿ ಅಂತ ಕೇಳಿದ್ದೆ. ಮುಸ್ಲಿಮರು ಪಂಚರ್ ಹಾಕುವವರು, ವೆಲ್ಡಿಂಗ್ ಮಾಡುವರು ಅಂತ ಲಘವಾಗಿ ಮಾತಾಡಿದ್ದಾರೆ ಎಂದು ಹೇಳಿದರು.

ಲೋಕಾಯುಕ್ತ ನೋಟಿಸ್ ಬಗ್ಗೆ ಮಾತನಾಡಿ, ನೋಟಿಸ್ ಬಂದದ್ದು ನನಗೆ ಗೊತ್ತಿಲ್ಲ. ನೋಟಿಸ್ ಕೊಡೋದು ರೊಟೀನ್. ನೋಟಿಸ್ ಬಂದ ಮೇಲೆ ಹೋಗಲೇಬೇಕು ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸಚಿವ ಜಮೀರ್ 'ಕರಿಯ' ಹೇಳಿಕೆ ಸರಿಯಲ್ಲ, ಅದನ್ನು ನಾನು ಖಂಡಿಸುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.