ETV Bharat / state

ಒಂದೇ ದಿನ ಪತಿ, ಪತ್ನಿಗೆ ಹೃದಯಾಘಾತ: ಸಾವಿನಲ್ಲೂ ಒಂದಾದ ದಂಪತಿ - Heart Attack - HEART ATTACK

ಹೃದಯಾಘಾತದಿಂದ ದಂಪತಿ ಒಂದೇ ದಿನ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಕೆಳಗೋಟೆ ಬಡಾವಣೆಯಲ್ಲಿ ನಡೆದಿದೆ.

ಓಂಕಾರಮೂರ್ತಿ, ದ್ರಾಕ್ಷಾಯಣಿ
ಓಂಕಾರಮೂರ್ತಿ, ದ್ರಾಕ್ಷಾಯಣಿ (ETV Bharat)
author img

By ETV Bharat Karnataka Team

Published : Oct 1, 2024, 8:59 AM IST

ಚಿತ್ರದುರ್ಗ: ಸಾವಿನಲ್ಲೂ ದಂಪತಿ ಒಂದಾದ ಹೃದಯವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ಸೋಮವಾರ ನಡೆದಿದೆ. ಪತಿಗೆ ಹೃದಯಾಘಾತದ ಸುದ್ದಿ ತಿಳಿದು ಆಘಾತಗೊಂಡ ಪತ್ನಿ ಕೂಡ ಹಾರ್ಟ್​ ಅಟ್ಯಾಕ್​​ನಿಂದ ಸಾವನ್ನಪ್ಪಿದ್ದಾರೆ. ಚಿತ್ರದುರ್ಗದ ಕೆಳಗೋಟೆ ಬಡಾವಣೆಯಲ್ಲಿ ವಾಸವಾಗಿದ್ದ ಓಂಕಾರಮೂರ್ತಿ(66), ಅವರ ಪತ್ನಿ ದ್ರಾಕ್ಷಾಯಣಿ ಸಾವಿನಲ್ಲೂ ಒಂದಾದ ದಂಪತಿ.

ಒಂದೇ ದಿನ ದಂಪತಿಗೆ ಹೃದಯಾಘಾತ: ನಿವೃತ್ತ ಲೈಬ್ರರಿಯನ್ ಆಗಿದ್ದ ಓಂಕಾರಮೂರ್ತಿ ಅವರಿಗೆ ಸೋಮವಾರ ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ನಗರದ ಬಸವೇಶ್ವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸುದ್ದಿಯನ್ನು ಮನೆಯಲ್ಲಿದ್ದ ಅವರ ಪತ್ನಿ ದ್ರಾಕ್ಷಾಯಣಿ ಅವರಿಗೆ ರವಾನಿಸಲಾಗಿತ್ತು. ಪತಿಗೆ ಹೃದಯಾಘಾತವಾದ ಸುದ್ದಿ ತಿಳಿದು ಪತ್ನಿ ಆಘಾತಗೊಂಡಿದ್ದರು. ನಂತರ ಅವರಿಗೂ ಹೃದಯಾಘಾತವಾಗಿ, ಸಾವನ್ನಪ್ಪಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅವರ ಪತಿ ಕೂಡ ಮೃತಪಟ್ಟಿದ್ದಾರೆ.

ನಮ್ಮ ದೊಡ್ಡಪ್ಪನ ಮಗಳು ಹಾಗೂ ಭಾವ ಇಬ್ಬರು ಒಟ್ಟಿಗೆ ಅಸುನೀಗಿದ್ದಾರೆ. ದಿಗ್ಭ್ರಮೆ ಆಗುವ ರೀತಿಯಲ್ಲಿ ಒಂದೇ ಸಮಯದಲ್ಲಿ ಇಬ್ಬರ ಸಾವು ಸಂಭವಿಸಿದೆ. ಈ ರೀತಿ ಒಟ್ಟಿಗೆ ದುಃಖ ಬರೋದು ಬಹಳ ವಿರಳ. ನಮ್ಮ ಭಾವ SJM ವಿದ್ಯಾಪೀಠದಲ್ಲಿ ಚೀಫ್ ಲೈಬ್ರರಿಯನ್ ಆಗಿ 30 ವರ್ಷ ಕೆಲಸ ಮಾಡಿದ್ದರು. ಬಹಳ ಸೌಮ್ಯ ಸ್ವಭಾವದಿಂದಲೇ ಇಬ್ಬರೂ ಜೀವನ ಮಾಡುತ್ತಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್ಸ್ ಆಗಿದ್ದಾರೆ. ನಮ್ಮ ಭಾವನಿಗೆ ನಾಡಿ ಮಿಡಿತ ಇದ್ದಾಗಲೇ, ನಮ್ಮ ಅಕ್ಕನಿಗೆ ದಿಗ್ಬ್ರಮೆಯಾಗಿ ಅಸುನೀಗಿದ್ದಾಳೆ. ಪ್ರತಿಯೊಬ್ಬ ಮನುಷ್ಯನಿಗೂ ಆಯಸ್ಸು ಇಷ್ಟು ಅಂತ ಇರುತ್ತದೆ. ಈ ರೀತಿ ಘಟನೆ ನಮಗೆ ತುಂಬಾ ನೋವಾಗಿದೆ ಎಂದು ಮೃತರ ಸಂಬಂಧಿ ಮತ್ತು ಬಿಜೆಪಿ ಮುಖಂಡ ಎಸ್. ಲಿಂಗಮೂರ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದ ಭದ್ರತೆಯಲ್ಲಿದ್ದ ಜೂಲಿ ನಿವೃತ್ತಿ, ಹೂವಿನ ಟ್ರಾಲಿಯಲ್ಲಿ ಬೀಳ್ಕೊಡುಗೆ - Mangaluru Airport Security Dog

ETV Bharat Logo

Copyright © 2024 Ushodaya Enterprises Pvt. Ltd., All Rights Reserved.