ETV Bharat / state

ಉಡುಪಿ: ಪಿಎಂ ಆವಾಸ್‌ ಯೋಜನೆಯ ಮನೆಗಳಿಗಿಲ್ಲ ಬೇಡಿಕೆ! - PM Awas Yojana

ಪತ್ತೂಂಜಿಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಛಯದಲ್ಲಿ ಮನೆಗಾಗಿ 350ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, 250 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಆದರೆ ಮುಂಗಡ ಪಾವತಿಯಾಗದೇ ಸಮಸ್ಯೆಯಾಗಿದೆ.

Udupi PM Awas Yojana Project
ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಮನೆ (ETV Bharat)
author img

By ETV Bharat Karnataka Team

Published : Jul 11, 2024, 11:22 AM IST

ಉಡುಪಿ: ಬಡವರಿಗೆ ಸೂರು ಕಲ್ಪಿಸಲು ಕೇಂದ್ರ ಸರ್ಕಾರ 'ಪ್ರಧಾನಮಂತ್ರಿ ಆವಾಸ್‌ ಯೋಜನೆ'ಯಡಿ ಕಾರ್ಕಳದಲ್ಲಿ 250 ಗುಂಪು ಮನೆಗಳನ್ನು ನಿರ್ಮಿಸಲು ಮುಂದಾಗಿದೆ. ರಾಜ್ಯ ಸರ್ಕಾರವೂ ಇದಕ್ಕೆ ಹಣಕಾಸಿನ ನೆರವು ಒದಗಿಸುತ್ತಿದೆ. ಆದರೆ, ಫ‌ಲಾನುಭವಿಗಳಿಲ್ಲದೇ ಈ ಯೋಜನೆ ನೆನೆಗುದಿಗೆ ಬಿದ್ದಿದೆ.

ಜಿ-ಪ್ಲಸ್‌ ಮಾದರಿ ಮನೆಗಳ ಸಮುಚ್ಚಯ ನಿರ್ಮಾಣಕ್ಕೆ ಕಾರ್ಕಳ ಪುರಸಭೆ ವ್ಯಾಪ್ತಿಯ ಪತ್ತೂಂಜಿಕಟ್ಟೆಯಲ್ಲಿ ಚಾಲನೆಯೂ ಸಿಕ್ಕಿತ್ತು. ಆದರೆ, ಯೋಜನೆಗೆ ಮುಂಗಡ ಹಣ ಪಾವತಿಸುವ ಫ‌ಲಾನುಭವಿಗಳ ಕೊರತೆಯಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕುಂಟುತ್ತಿದೆ. ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 16 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಸತಿ ಬಡಾವಣೆ ನಿರ್ಮಾಣಕ್ಕೆ ರೂಪುರೇಷೆ ಸಿದ್ಧವಾಗಿದೆ.

ಪತ್ತೂಂಜಿಕಟ್ಟೆಯಲ್ಲಿ 6 ಎಕರೆ ಜಾಗ ಮೀಸಲಿಡಲಾಗಿದೆ. ಕಾಮಗಾರಿಗೆ ಮೇ ತಿಂಗಳಲ್ಲಿ ಚಾಲನೆಯೂ ದೊರಕಿದೆ. ಇಲ್ಲಿ ಬ್ಲಾಕ್‌ ಅಳವಡಿಕೆಯಂತಹ ಪ್ರಾಥಮಿಕ ಹಂತದ ಕೆಲಸಗಳು ನಡೆದಿವೆ. ಆದರೆ ಕಾಮಗಾರಿ ಮುಂದುವರಿಯಬೇಕು ಎಂದಿದ್ದರೆ ಎಲ್ಲಾ 250 ಮನೆಗಳಿಗೆ ಫ‌ಲಾನುಭವಿಗಳನ್ನು ಗೊತ್ತುಪಡಿಸಬೇಕು ಮತ್ತು ಫ‌ಲಾನುಭವಿಗಳು ಒಟ್ಟು ವೆಚ್ಚದ ಶೇ. 10/15ನ್ನು ಮುಂಗಡವಾಗಿ ಪಾವತಿಸಬೇಕು. ಆದರೆ, ಮನೆ ಬೇಕು ಎಂಬ ಆಸೆ ಇರುವ ಫ‌ಲಾನುಭವಿಗಳು ಶೇ. 10ರಷ್ಟು ಮುಂಗಡ ಪಾವತಿ ಮಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಬೇಡಿಕೆಯೇ ಇಲ್ಲವಾಗಿದೆ.

9 ಕಡೆ ಸ್ಲಂ ಏರಿಯಾ, 350 ಅರ್ಜಿ: ಬಂಗ್ಲೆಗುಡ್ಡೆ ನರ್ಸಿಂಗ್‌ ಹೋಂ ಹಿಂಭಾಗ, ಬಂಗ್ಲೆಗುಡ್ಡೆ, ಐತಕಟ್ಟೆ, ಬಂಡಿಮಠ, ರಣವೀರ ಕಾಲನಿ, ಮರಿಣಾಪುರ, ಬೊಬ್ಬಳ ಕಾಲೊನಿ, ದಾನಶಾಲೆ, ಹವಾಲ್ದಾರಬೆಟ್ಟು ಸೇರಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 9 ಕಡೆ ಕೊಳಗೇರಿಗಳಿವೆ. ಪುರಸಭೆ ವತಿಯಿಂದ 2009-10ರಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ, 229 ಕುಟುಂಬಗಳನ್ನು ಗುರುತಿಸಲಾಗಿತ್ತು. ಪತ್ತೂಂಜಿಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಛಯದಲ್ಲಿ ಮನೆಗಾಗಿ 350ಕ್ಕೂ ಅಧಿಕ ಅರ್ಜಿಗಳು ಪುರಸಭೆಗೆ ಬಂದು 250 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಆದರೆ ಮುಂಗಡ ಪಾವತಿಯಾಗದೇ ಸಮಸ್ಯೆಯಾಗಿದೆ.

ಫ‌ಲಾನುಭವಿಗಳು ಸಿಗದಿರಲು ಕಾರಣವೇನು? ಮನೆ ಬಯಸುವ ಪರಿಶಿಷ್ಟ ಜಾತಿ/ಪಂಗಡದವರು ಶೇ.10 (65 ಸಾವಿರ ರೂ.) ಮೊತ್ತವನ್ನು ಮುಂಗಡವಾಗಿ ಪಾವತಿಸಬೇಕು. ಸಾಮಾನ್ಯ ವರ್ಗದವರಾಗಿದ್ದರೆ ಶೇ.15 (96 ಸಾವಿರ) ಮೊತ್ತವನ್ನು ಮುಂಗಡ ಪಾವತಿಸಬೇಕು. ಆದರೆ ಇಲ್ಲಿ ಎರಡೂ ವರ್ಗದವರು ನಾನಾ ಕಾರಣಗಳಿಂದ ಮುಂಗಡ ಪಾವತಿಗೆ ಮುಂದೆ ಬರುತ್ತಿಲ್ಲ. ಪಟ್ಟಿ ಮಾಡಲಾದ 250 ಫ‌ಲಾನುಭವಿಗಳ ಪೈಕಿ 90 ಮಂದಿಯಷ್ಟೇ ಮುಂಗಡ ಪಾವತಿಗೆ ಮುಂದಾಗಿದ್ದಾರೆ. ಫ‌ಲಾನುಭವಿ ಸಿಗದೇ ಸಮುಚ್ಛಯ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಬಿಡುಗಡೆಗೆ ತಾಂತ್ರಿಕ ತೊಂದರೆ ಎದುರಾಗಿದೆ.

ಮನೆ ಎಷ್ಟು ದೊಡ್ಡದು? ದರ ಎಷ್ಟು?:

  • ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಈ ಮನೆಯ ಸುತ್ತಳತೆ 358 ಚದರಡಿ. ಒಂದು ಮನೆ ನಿರ್ಮಾಣಕ್ಕೆ 6,44,378 ರೂ. ವೆಚ್ಚ.
  • 6.44 ಲಕ್ಷ ರೂ. ಮೊತ್ತದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಜನಾಂಗದವರಿಗೆ ಕೇಂದ್ರ ಸರ್ಕಾರದಿಂದ 1.5 ಲಕ್ಷ ರೂ. ಮತ್ತು ರಾಜ್ಯ ಸರ್ಕಾರದಿಂದ 2 ಲಕ್ಷ ರೂ. ಸೇರಿ ಒಟ್ಟು 3.5 ಲಕ್ಷ ರೂ. ಸಹಾಯಧನ ದೊರಕಲಿದೆ. ಉಳಿದ ಮೊತ್ತವನ್ನು ಅರ್ಹ ಫ‌ಲಾನುಭವಿಗಳು ಭರಿಸಬೇಕು.
  • ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನದ ಬಳಿಕ ಪಾವತಿಸಬೇಕಾಗಿರುವ 2.94 ಲಕ್ಷ ರೂ.ಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲ ಒದಗಿಸಲಾಗುತ್ತದೆ.
  • ಬ್ಯಾಂಕ್‌ ಸಾಲವನ್ನು ಪ್ರತೀ ತಿಂಗಳು ಮರುಪಾವತಿಸಬೇಕು. ಸಾಲ ತೀರಿಸಿದ ಬಳಿಕ ಮನೆ ವಾರಸುದಾರರ ಹೆಸರಿಗೆ ಬರಲಿದೆ.
  • ಸಾಮಾನ್ಯ ವರ್ಗದ ಫ‌ಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂ. ಮತ್ತು ರಾಜ್ಯದಿಂದ 1.20 ಲಕ್ಷ ರೂ. ಸಹಾಯಧನ ದೊರಕಲಿದೆ. ಉಳಿದ 3.74 ಲಕ್ಷ ರೂ. ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ ಮೂಲಕ ಸಾಲ ರೂಪದಲ್ಲಿ ಪಡೆಯಲು ಅವಕಾಶವಿರುತ್ತದೆ.

ಸ್ಲಂ ಬೋರ್ಡ್‌ನಿಂದ ನಿರ್ಮಾಣ: ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ನಿವೇಶನ ರಹಿತರಿಗಾಗಿ ನಿರ್ಮಿಸುವ ಸಮುಚ್ಚಯ ಮನೆ ಇದಾಗಿದೆ. ಸ್ಲಂ ಬೋರ್ಡ್‌ ನಿಂದ ಸಮುಚ್ಚಯ ನಿರ್ಮಾಣವಾದರೂ ಅದಕ್ಕೆ ಬೇಕಿರುವ ಫ‌ಲಾನುಭವಿಯನ್ನು ಪುರಸಭೆ ಒದಗಿಸಬೇಕು. ಆದರೆ ಮುಂಗಡ ಪಾವತಿಸಬಲ್ಲ ಫ‌ಲಾನುಭವಿಗಳು ಸಿಗುತ್ತಿಲ್ಲ.

ಇದನ್ನೂ ಓದಿ: ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ - Lokayukta Raid

ಜಿ-ಪ್ಲಸ್‌ ಮನೆ ಸಹಕಾರಿ: ಪುರಸಭೆ ವ್ಯಾಪ್ತಿಯಲ್ಲಿ ನಿವೇಶನದ ಬೇಡಿಕೆಯಿದೆ. ಅದನ್ನು ಪೂರೈಸಲು ಜಿ-ಪ್ಲಸ್‌ ಮನೆ ಯೋಜನೆ ಸಹಕಾರಿಯಾಗಿದೆ. ನಿಗದಿತ ಶೇಕಡಾವಾರು ಮುಂಗಡ ಮೊತ್ತ ಪಾವತಿಸಿ ಮನೆಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮುಖ್ಯಾಧಿಕಾರಿ ರೂಪಾ ಟಿ.ಶೆಟ್ಟಿ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.