ETV Bharat / state

ಶಿವಮೊಗ್ಗದಲ್ಲಿ ಹವಾಮಾನ ವೈಪರೀತ್ಯ: ಸಚಿವ ಪರಮೇಶ್ವರ್ ಇದ್ದ ವಿಮಾನ ಲ್ಯಾಂಡಿಂಗ್​ಗೆ ಅಡ್ಡಿ, ಬೆಂಗಳೂರಿಗೆ ವಾಪಸ್! - Bad Weather

author img

By ETV Bharat Karnataka Team

Published : Jul 13, 2024, 5:04 PM IST

ಗೃಹ ಸಚಿವ ಪರಮೇಶ್ವರ್ ಅವರು ಏರಿದ್ದ ವಿಮಾನವು ಹವಾಮಾನ ವೈಪರೀತ್ಯದಿಂದ ಲ್ಯಾಂಡ್ ಆಗದೆ ವಾಪಸ್ ಆಗಿದೆ.

HOME MINISTER PARAMESHWARA
ಸಂಗ್ರಹ ಚಿತ್ರ (ETV Bharat)
ಸಚಿವ ಮಧು ಬಂಗಾರಪ್ಪ (ETV Bharat)

ಶಿವಮೊಗ್ಗ: ಹವಾಮಾನ ವೈಪರೀತ್ಯದಿಂದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಶಿವಮೊಗ್ಗಕ್ಕೆ ಬಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದ ಮೂಲಕ ಆಗಮಿಸಬೇಕಾಗಿತ್ತು. ಬೆಳಗ್ಗೆ ಬೆಂಗಳೂರಿನಿಂದ ಸುಮಾರು 11:30ಕ್ಕೆ ಹೊರಟು 12:30ಕ್ಕೆ ಶಿವಮೊಗ್ಗಕ್ಕೆ ಆಗಮಿಸಬೇಕಿತ್ತು. ಬೆಂಗಳೂರಿನಿಂದ ಹೊರಟ ಇಂಡಿಗೋ ವಿಮಾನ ಶಿವಮೊಗ್ಗಕ್ಕೆ ಬಂದಾಗ ಇಲ್ಲಿ ವಿಮಾನ ಲ್ಯಾಂಡ್ ಮಾಡಿಸಲು ಪೂರಕ ವಾತಾವರಣ ಇರದ ಕಾರಣಕ್ಕೆ ವಿಮಾನ ಬೆಂಗಳೂರಿಗೆ ವಾಪಸ್ ಆಗಿದೆ.

ಗೃಹ ಸಚಿವ ಜಿ.ಪರಮೇಶ್ವರ್ ಅವರು ಇಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸಿ, ಸೊರಬದಲ್ಲಿ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟನೆ ನಡೆಸಿ, ತೀರ್ಥಹಳ್ಳಿಗೆ ತೆರಳಬೇಕಿತ್ತು. ತೀರ್ಥಹಳ್ಳಿಯಲ್ಲಿ 20.50 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಕೋಣಂದೂರು ಪೊಲೀಸ್​ ವಸತಿ ಸಂಕೀರ್ಣ, ತೀರ್ಥಹಳ್ಳಿ ರಥಬೀದಿ ಪೊಲೀಸ್​ ಸ್ಟೇಷನ್, ಬೆಟ್ಟಮಕ್ಕಿಯಲ್ಲಿ ನೂತನವಾಗಿ ನಿರ್ಮಾಣ ಆಗಿರುವ ಫೈರ್ ಸ್ಟೇಷನ್ ಹಾಗೂ ಸೊಪ್ಪುಗುಡ್ಡೆಯಲ್ಲಿ 24 ಮನೆಗಳುಳ್ಳ ವಸತಿ ಸಮುಚ್ಚಯ ಕೂಡ ಉದ್ಘಾಟನೆ ಮಾಡಬೇಕಿತ್ತು. ಇಂದು ಗೃಹ ಸಚಿವರು ಬಾರದ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡಲಿದ್ದಾರೆ.

ಈ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಗೃಹ ಸಚಿವರು ಇಂದು ಸೊರಬಕ್ಕೆ ಬರಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ವಿಮಾನ ಲ್ಯಾಂಡ್ ಆಗದೆ ವಾಪಸ್ ಆಗಿದ್ದಾರೆ. ಗೃಹ ಸಚಿವರ ಗೈರಿನಲ್ಲಿ ನಾನು ಉದ್ಘಾಟನೆ ಮಾಡಲಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣವನ್ನು ಇ.ಡಿ, ಸಿಬಿಐ ರಾಜಕೀಯವಾಗಿ ಬಳಸಿಕೊಳ್ಳಬಾರದು: ಸಚಿವ ಪರಮೇಶ್ವರ್ - Valmiki Corporation case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.