ETV Bharat / state

ಕೆಫೆ ಸ್ಫೋಟ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದೆ: ಗೃಹ ಸಚಿವ ಜಿ.ಪರಮೇಶ್ವರ್ - G Parameshwar

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಮಹತ್ವದ ಸುಳಿವು ದೊರೆತಿದೆ. ಸಿಸಿಬಿ ಹಾಗೂ ಎನ್​ಐಎ ತಂಡಗಳು ಜಂಟಿಯಾಗಿ ತನಿಖೆ ನಡೆಸುತ್ತಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದರು.

Home Minister Dr. G Prameshwar
ಗೃಹ ಸಚಿವ ಡಾ. ಜಿ ಪರಮೇಶ್ವರ್​
author img

By ETV Bharat Karnataka Team

Published : Mar 6, 2024, 12:55 PM IST

ಬೆಂಗಳೂರು: "ರಾಮೇಶ್ವರಂ ಕೆಫೆಯಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಸುಳಿವು ದೊರತಿದ್ದು, ತನಿಖೆಯನ್ನು ರಾಜ್ಯ ಸಿಸಿಬಿ ಹಾಗೂ ಎನ್ಐಎ ತಂಡಗಳು ಜಂಟಿಯಾಗಿ ನಡೆಸುತ್ತಿವೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ಇಂದು ಸೈಬರ್ ಅಪರಾಧ ತನಿಖಾ ಶೃಂಗಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು.

"ಮಂಗಳವಾರ ಎನ್ಐಎ ಅಧಿಕಾರಿಗಳ ತಂಡ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಆರಂಭಿಸಿದೆ. ರಾಜ್ಯ ಸಿಸಿಬಿ ಸಹ ತನಿಖೆಯಲ್ಲಿದ್ದಾರೆ. ಆದ್ದರಿಂದ ಎರಡೂ ತನಿಖಾ ಸಂಸ್ಥೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ" ಎಂದರು.

"ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಎಫ್ಎಸ್ಎಲ್ ವರದಿ ಆಧಾರದ ಮೇಲೆಯೇ ಮೂವರು ಆರೋಪಿತರನ್ನು ಬಂಧಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದೆವು. ಈಗ ಬಂಧನ ಮಾಡಲಾಗಿದೆ, ತನಿಖೆ ನಡೆಯುತ್ತಿದೆ. ಬಿಜೆಪಿಯವರು ಅವರನ್ನು ಬಂಧಿಸಿ ಇವರನ್ನು ಬಂಧಿಸಿ ಎಂದು ಹೇಳುತ್ತಿದ್ದಾರೆ. ಅವರಿಗೆ ವಿರೋಧ ಪಕ್ಷವಾಗಿ ಮಾತನಾಡುವ ಹಕ್ಕಿದೆ, ಮಾತನಾಡಲಿ. ಆದರೆ ಸಾಕ್ಷ್ಯಾಧಾರಗಳಿಲ್ಲದೆ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ" ಎಂದು ಹೇಳಿದರು.

ಬಾಂಬ್ ಬೆದರಿಕೆ ಇ-ಮೇಲ್- ವಿದೇಶಿ ಕಂಪನಿಗಳ ಸಹಕಾರ ಅಗತ್ಯ: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ನನಗೂ ಸಹ ಬೆದರಿಕೆಯ ಇಮೇಲ್​ಗಳು ಬಂದಿವೆ. ಈ ಹಿಂದೆ ಕೂಡ ಹಲವು ಶಾಲೆಗಳಿಗೆ ಇಂಥ ಬೆದರಿಕೆ ಮೇಲ್​ಗಳು ಬಂದಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಈ ರೀತಿಯ ಪ್ರಕರಣಗಳನ್ನು ಭೇದಿಸಲು ವಿದೇಶಿ ಏಜೆನ್ಸಿಗಳು, ಸಂಬಂಧಪಟ್ಟ ಕಂಪನಿಗಳ ಸಹಕಾರ ಅಗತ್ಯ. ಸಹಕಾರ ನೀಡಿದರೆ ಪ್ರಕರಣಗಳನ್ನು ಭೇದಿಸಬಹುದು" ಎಂದರು.

ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್​ ಘೋಷಣೆ ಕೂಗಿದ್ದು ಎಫ್​ಎಸ್​ಎಲ್​ ವರದಿಯಲ್ಲಿ ಬಂದಿದೆ: ಸಚಿವ ಪರಮೇಶ್ವರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.