ಬೆಂಗಳೂರು: ಖಾಸಗಿ ಕಂಪನಿಯಲ್ಲಿ ಬಾಂಬ್ ಇರಿಸಿರುವುದಾಗಿ ಹುಸಿ ಇ-ಮೇಲ್ ರವಾನಿಸಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪುಟ್ಟೇನಹಳ್ಳಿ ವ್ಯಾಪ್ತಿಯಲ್ಲಿರುವ ಬ್ರಾಡ್‌ಕಾಮ್ ಕಂಪನಿಗೆ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೇಲ್ ರವಾನಿಸಿರುವ ಕಿಡಿಗೇಡಿಗಳು, ''ಕಂಪನಿಯ ಆವರಣದಲ್ಲಿ ಬಾಂಬ್ ಇರಿಸಿದ್ದು ಸ್ಫೋಟಿಸುವುದಾಗಿ'' ಬೆದರಿಸಿದ್ದಾರೆ. ತಕ್ಷಣ ಎಚ್ಚೆತ್ತ ಕಂಪನಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದೊಂದು ಹುಸಿ ಬೆದರಿಕೆ ಎಂಬುದು ಪತ್ತೆಯಾಗಿದೆ. ಬ್ರಾಡ್‌ಕಾಮ್ ಕಂಪನಿಯ ಪ್ರತಿನಿಧಿ ನೀಡಿರುವ ದೂರಿನನ್ವಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್.ಬಿ.ಜಗಲಾಸರ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಎಸ್ಎಂಸಿಎ ಡೇಟಾ ಸೋರಿಕೆ ಬೆದರಿಕೆ: ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ - Threat To Leak KSMCA Data